ಖಾಸಗಿ ಕೆಲಸವಾಗಲಿ ಅಥವಾ ಸರ್ಕಾರಿ ಹುದ್ದೆಯಾಗಲಿ ಪರೀಕ್ಷೆಯನ್ನು ಉತ್ತಮ ದರ್ಜೆಯಲ್ಲಿ ಪಾಸ್ ಮಾಡಿದ ನಂತರ ಇಂಟರ್ವ್ಯೂ(Interview) ಎಂಬ ಅಗ್ನಿ ಪರೀಕ್ಷೆಯನ್ನು ಕಡ್ಡಾಯವಾಗಿ ಎದುರಿಸಲೇಬೇಕು. ಪರೀಕ್ಷೆಗಳಲ್ಲಿ ಉತ್ತಮ ಅಂಕವನ್ನು ಪಡೆದು ಪಾಸ್ ಆಗುವಂತಹ ವಿದ್ಯಾರ್ಥಿಗಳು ಇಂಟರ್ವ್ಯೂ ನಲ್ಲಿ ಎಡವಿ ಬೀಳುತ್ತಾರೆ. ಹೌದು ಗೆಳೆಯರೇ ನಮ್ಮ ತಲೆಗೆ ಕೆಲಸ ಕೊಡಬೇಕಾದಂತಹ ಲಾಜಿಕಲ್ ಪ್ರಶ್ನೆಗಳನ್ನು (Logical Questions) ಅಧಿಕಾರಿಗಳು ಕೇಳುತ್ತಾರೆ.
ಅಂತಹ ಸಂದರ್ಭದಲ್ಲಿ ನಾವು ಪುಸ್ತಕದೊಳಗಿನ ಉತ್ತರವನ್ನು ಹುಡುಕುವ ಬದಲು ಸ್ವಲ್ಪ ತಲೆಗೆ ಕೆಲಸ ನೀಡಿ ಯೋಚಿಸಿದರೆ ಸಾಕು ಸರಳವಾದ ಉತ್ತರ ತಟ್ಟೆಂದು ಹೊಳೆಯುತ್ತದೆ. ಹೀಗಿರುವಾಗ ಯುವತಿ ಒಬ್ಬಳು ಐಎಎಸ್ ಪರೀಕ್ಷೆಯನ್ನು (IAS exam) ಪಾಸ್ ಮಾಡಿ ಇಂಟರ್ವ್ಯೂ ಗೆಂದು ಹೋದಾಗ ಅಲ್ಲಿನ ಅಧಿಕಾರಿಗಳು ಆಕೆಗೆ ವಿಭಿನ್ನವಾದ ಪ್ರಶ್ನೆಗಳನ್ನು ಕೇಳುವ ಮೂಲಕ ಸಿಲುಕಿಸಿದ್ದಾರೆ. ಇದ್ಯಾವುದಕ್ಕೂ ದುತಿಗೆಡದೆ ತನ್ನ ಅದ್ಭುತ ಆಲೋಚನಾ ಶಕ್ತಿಯಿಂದ ಯೋಚಿಸಿ ಉತ್ತರಿಸಿರುವ ಹುಡುಗಿ ಇಂಟರ್ವ್ಯೂನಲ್ಲಿ ಪಾಸಾಗಿ ಕೆಲಸ ಗಿಟ್ಟಿಸಿಕೊಂಡಿದ್ದಾಳೆ.
ಹಾಗಾದ್ರೆ ಅಧಿಕಾರಿಗಳು ಯುವತಿಗೆ ಯಾವ ರೀತಿಯ ಪ್ರಶ್ನೆಗಳನ್ನು ಕೇಳಿದರು? ಹುಡುಗಿ ನೀಡಿದ ಉತ್ತರಗಳು ಏನಾಗಿತ್ತು? ಎಂಬ ಎಲ್ಲಾ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೇ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಗೆಳೆಯರೇ, ಸಾಮಾನ್ಯವಾಗಿ ಎಂತಹ ಇಂಟರ್ವ್ಯೂಗಳಲ್ಲಾದರೂ ಕೂಡ ಅವರವರ ಪರಿಚಯ ಮಾಡಿಕೊಳ್ಳುವಂತೆ ಹೇಳುತ್ತಾರೆ. ಇದಾದ ಬಳಿಕ 5 ವಿಭಿನ್ನವಾದ ಪ್ರಶ್ನೆಗಳನ್ನು ಹೇಳುತ್ತಾರೆ. ಅಧಿಕಾರಿಗಳು ಯುವತಿಗೆ ಕೇಳಿದ ಪ್ರಶ್ನೆ ಈ ಕೆಳಗಿನಂತಿದ್ದವು:
೧.ಮನುಷ್ಯನ ದೇಹದ ಯಾವ ಭಾಗದಲ್ಲಿ ಮಾತ್ರ ರಕ್ತ ಇರುವುದಿಲ್ಲ?
ಉತ್ತರ: ಹಲ್ಲು ಮತ್ತು ಕೂದಲು(Tooth & Hairs).
೨. ಹೆಂಗಸರು ಗರ್ಭ ಧರಿಸಿದಾಗ ವಾಂತಿ ಮಾಡುವುದು ಯಾಕೆ?
ಉತ್ತರ: ಎಚ್‌ಜಿಸಿ ಹಾರ್ಮೋನ್ನಿಂದಾಗಿ(HCG Harmone).
೩. ಮಹಿಳೆಯ ದೇಹದ ಯಾವ ಭಾಗವನ್ನು ನಾವು ತಿನ್ನಬಹುದು?
ಉತ್ತರ: ಲೇಡೀಸ್ ಫಿಂಗರ್(Lady’s Finger) ಎಂಬ ತರಕಾರಿಯ ಹೆಸರಿನ ಉತ್ತರ ಕೊಟ್ಟಳು ಹಾಗೂ ಇದು ಸರಿಯಾಗಿಯೇ ಇತ್ತು.
೪. ಯಾವುದನ್ನು ಗಂಡಸರು ಮುಚ್ಚಿಕೊಂಡು ನಡೆಯುತ್ತಾರೆ, ಆದರೆ ಹೆಂಗಸರು ತೋರಿಸಿಕೊಂಡು ಓಡಾಡುತ್ತಾರೆ?
ಉತ್ತರ: ಪರ್ಸ್(Purse) (ಮಹಿಳೆಯರು ಚಿತ್ರ ವಿಚಿತ್ರವಾದಂತಹ ಪರ್ಸ್ಗಳನ್ನು ತೆಗೆದುಕೊಂಡು ತಮ್ಮ ಕೈಯಲ್ಲಿ ಹಿಡಿದುಕೊಂಡು ಓಡಾಡಿದರೆ ಪುರುಷರು ಅದನ್ನು ಜೇಬಿನಲ್ಲಿ ಮುಚ್ಚಿಟ್ಟುಕೊಂಡು ಓಡಾಡುತ್ತಾರೆ)
೫. ನಿನ್ನ ಎರಡು ಕಾಲುಗಳ ಕೆಳಗೆ ಏನಿದೆ?
ಉತ್ತರ: ನಾನು ಕುಳಿತಿರುವಂತಹ ಚೇರ್ ಹಾಗೂ ಎರಡು ಚಪ್ಪಲಿಗಳಿವೆ ಎಂಬ ಉತ್ತರ ನೀಡಿ ಐಎಎಸ್ ಇಂಟರ್ವ್ಯೂನಲ್ಲಿ ಪಾಸ್ ಆಗಿದ್ದಾಳೆ.