ಸೌಜನ್ಯ (Sowjanya) ಆ-ತ್ಯಾಚಾರ ಮತ್ತು ಕೊ-ಲೆ ನಡೆದು 11 ವರ್ಷಗಳು ಕಳೆದು ಹೋಗಿವೆ. ಸಿಬಿಐ ತನಿಖೆ ನಡೆದರೂ ಕೊ-ಲೆಗಾರರು ಯಾರು ಅನ್ನೋ ಸತ್ಯ ಹೊರ ಬಂದಿಲ್ಲ. ಸೌಜನ್ಯ ಕೊ-ಲೆ ಮಾಡಿದವರಿಗೆ ಶಿ-ಕ್ಷೆ ಆಗಲೇಬೇಕು ಎಂದು ಸೌಜನ್ಯ ಕುಟುಂಬದ ಜೊತೆಗೆ ಕೈ ಜೋಡಿಸಿರುವ ಮಹೇಶ್ ಶೆಟ್ಟಿ ತಿಮರೋಡಿ (Mahesh Shetty Timarodi) ರಾಜ್ಯಾದ್ಯಂತ ಹೋರಾಟವು ಜೋರಾಗಿಯೇ ನಡೆಯುತ್ತಿದೆ. ಸದ್ಯಕ್ಕೆ ಸೌಜನ್ಯ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಹೋರಾಟದ ಹಾದಿ ನೋಡಿದರೆ, ಎಲ್ಲರೂ ಈ ಹೋರಾಟದಲ್ಲಿ ಕೈ ಜೋಡಿಸಿದರೆ ಈ ಪ್ರಕರಣಕ್ಕೆ ನ್ಯಾಯ ಸಿಗುವುದು ಪಕ್ಕಾ ಎನ್ನುವಂತಾಗಿದೆ.
ಹನ್ನೊಂದು ವರ್ಷಗಳ ಹಿಂದೆ ನಡೆದ ಸೌಜನ್ಯ ಆ-ತ್ಯಾಚಾರ ಕೊ-ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯ ಸಿಗಬೇಕು ಎನ್ನುವ ಕೂಗು ಜೋರಾಗಿ ಕೇಳಿಬರುತ್ತಿದೆ. ಸ್ಯಾಂಡಲ್ವುಡ್ ನಟರು (Sandalwood Actors) ಸೌಜನ್ಯಗೆ ನ್ಯಾಯ ಸಿಗಬೇಕು ಎಂದು ಧ್ವನಿ ಎತ್ತಿದ್ದಾರೆ. ಇತ್ತ ಸೌಜನ್ಯನವರ ಸಹೋದರ ಸಹೋದರಿಯರು ಕೂಡ ಅಕ್ಕನಿಗೆ ನ್ಯಾಯ ಸಿಗಬೇಕು ಎಂದು ಹೇಳುತ್ತಿದ್ದಾರೆ. ಇದೀಗ ಖಾಸಗಿ ವಾಹಿನಿ ಜೊತೆಗೆ ಮಾತನಾಡಿರುವ ಸೌಜನ್ಯಳ ಸಹೋದರ ಸಹೋದರಿಯು ಮಾತನಾಡಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿರುವ ಸೌಜನ್ಯಳ ಸಹೋದರ ಹಾಗೂ ಸಹೋದರಿಯು, ಅಕ್ಕ ತಮ್ಮನ ಒಡನಾಟ ಹೇಗೆ ಇರುತ್ತದೆಯೊ ಹಾಗೆ ನನ್ನ ಹಾಗೂ ನನ್ನ ಅಕ್ಕನ ಒಡನಾಟ ಇತ್ತು. ಆದರೆ ಈ ಘಟನೆಯಿಂದ ನನ್ನ ಅಕ್ಕನನ್ನು ಕಳೆದುಕೊಂಡೆವು. ಇಂತಹ ಘಟನೆಯನ್ನು ಯಾರು ಕೂಡ ಮಾಡಲೇ ಬಾರದು. ಅಂತಹ ಶಿಕ್ಷೆಯನ್ನು ಕಾನೂನು ನೀಡಬೇಕು. ನನ್ನ ಅಕ್ಕನ ಪರಿಸ್ಥಿತಿ ಕೂಡ ಯಾರಿಗೂ ಕೂಡ ಬರಬಾರದು. ಕಾನೂನು ನ್ಯಾಯದ ಪರವಾಗಿ ಇರಲೇಬೇಕು ಎಂದು ಹೇಳಿದ್ದಾರೆ.
ಆದರೆ ಇತ್ತ ಸೌಜನ್ಯ ಆ-ತ್ಯಾಚಾರ ಕೊ-ಲೆ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸಿ ಇದೀಗ ನಿರ್ದೋಷಿಯಾಗಿರುವ ಸಂತೋಷ್ ರಾವ್ (Santhosh Rao) ಅವರು ಕಾರ್ಕಳ ಕುಂಟಾಡಿ ಬೈಲಡ್ಕದ ಬಾಲಾಜಿ ಮಂದಿರದಲ್ಲಿ ಯಾರೊಂದಿಗೂ ಕೂಡ ಮಾತನಾಡುತ್ತಿಲ್ಲ.ಯಾರ ಬಳಿಯು ಮಾತನಾಡದೆ ಮೌನಿಯಾಗಿ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಸಂತೋಷ್ ರಾವ್ ಅವರು ನಿರ್ದೋಷಿಯೆಂದು ಕೋರ್ಟ್ ತೀರ್ಪು ಹೊರ ಬೀಳುತ್ತಿದ್ದಂತೆ ಸೌಜನ್ಯ ಆ-ತ್ಯಾಚಾರ, ಹ-ತ್ಯೆ ಪ್ರಕರಣಕ್ಕೆ ನ್ಯಾಯ ಸಿಗದೇ ಇರುವ ಹಿನ್ನೆಲೆಯಲ್ಲಿ ಮತ್ತೆ ಪ್ರತಿಭಟನಗಳ ಕಾವು ಜೋರಾಗಿದೆ.
ಸುಳ್ಯ (Sulya) ದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಸೌಜನ್ಯ ತಾಯಿ ಕುಸುಮವತಿ (Kusumavati) ಕಣ್ಣೀರಿಟ್ಟಿದ್ದು, ನನ್ನ ಮಗಳ ಆತ್ಮ ಶಾಂತಿ ಪಡೆಯುವವರೆಗೆ ನನ್ನನ್ನು ಬೆಂಬಲಿಸಿ ಎಂದು ಕೇಳಿಕೊಂಡಿದ್ದಾರೆ. ಸೌಜನ್ಯ ಹೋರಾಟ ಸಮಿತಿಯಿಂದ ಈ ಪ್ರತಿಭಟನೆಯನ್ನು ಆಯೋಜಿಸಲಾಗಿತ್ತು. ನನ್ನ ಮಗಳ ಆತ್ಮ ನ್ಯಾಯಕ್ಕಾಗಿ ಕಾಯುತ್ತಿದೆ. ಆಕೆಗೆ ನ್ಯಾಯ ಒದಗಿಸಲು ಎಲ್ಲಾ ರೀತಿಯ ಪ್ರಯತ್ನಗಳನ್ನೂ ನಾನು ಮಾಡುತ್ತಿದ್ದೇನೆ. ನನ್ನ ಈ ಹೋರಾಟದಲ್ಲಿ ಕೈ ಜೋಡಿಸುವಂತೆ ಪ್ರತಿಯೊಬ್ಬರಲ್ಲೂ ಪ್ರಾರ್ಥಿಸುತ್ತೇನೆ ನನ್ನ ಮಗಳಿಗೆ ಆದದ್ದನ್ನು ಯಾರೂ ಸಹಿಸಬಾರದು. ಈ ಅನ್ಯಾಯ ಕೊನೆಯಾಗಬೇಕು,” ಎಂದಿದ್ದಾರೆ. ಒಟ್ಟಿನಲ್ಲಿ ಈಗಿನ ಹೋರಾಟದ ಹಾದಿಯನ್ನು ನೋಡಿದರೆ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ನ್ಯಾಯ ಸಿಗುವುದರಲ್ಲಿ ಯಾವುದೇ ಡೌಟ್ ಇಲ್ಲ.