7 Hot News
A Karnataka Times Affiliate Kannada News Portal

32ನೇ ವರ್ಷದ ವಿವಾಹ ವಾರ್ಷಿಕೋತ್ಸವ ಸಮಾರಂಭದಲ್ಲಿ ಹೆಂಗೆಳೆಯರ ಫೇವರೆಟ್ ನಟ ರಮೇಶ್ ಅರವಿಂದ್ ದಂಪತಿಗಳು! ಸುಂದರ ಜೋಡಿ ಹೇಗಿದೆ ನೋಡಿ!!

advertisement

ಕನ್ನಡ ಸಿನಿಮಾ ರಂಗದ ಎವರ್ ಗ್ರೀನ್ ನಟರ ಪೈಕಿ ಅಗ್ರಸ್ಥಾನದಲ್ಲಿ ನಿಲ್ಲುವಂತಹ ಏಕೈಕ ನಟನೆಂದರೆ ಅದು ರಮೇಶ್ ಅರವಿಂದ್(Ramesh Aravind). ಹಲವು ದಶಕಗಳಿಂದ ನಮ್ಮೆಲ್ಲರನ್ನು ಸರಳ ಸೌಮ್ಯ ಹಾಗೂ ಪ್ರೀತಿ ತುಂಬಿದ ನಟನೆಯ ಮೂಲಕ ರಂಜಿಸುತ್ತ ಬಂದಿರುವಂತಹ ರಮೇಶ್(Ramesh) ಕನ್ನಡ ಸಿನಿಮಾ ರಂಗದ ಬಹು ಬೇಡಿಕೆಯ ನಟರಾಗಿ ಯಶಸ್ವಿ ಸಿನಿಮಾಗಳ ಮೂಲಕ ರಂಜಿಸುತ್ತಿದ್ದಾರೆ. ತಮ್ಮ ಸ್ಪೂರ್ತಿ ತುಂಬಿದ ಮಾತುಗಳ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುವಂತಹ ರಮೇಶ್ ಅರವಿಂದ್ ಅವರ ವೈಯಕ್ತಿಕ ಬದುಕಿಗೆ ಸಂಬಂಧಿಸಿದಂತಹ ಕೆಲಸಗಳು ನೆಟ್ಟಿಗರನ್ನು ಸೆಳೆಯುತ್ತಿವೆ.

advertisement

ಹೌದು ಸ್ನೇಹಿತರೆ ರಮೇಶ್ ಅರವಿಂದ್ ಕಳೆದ ಕೆಲದಿನಗಳ ಹಿಂದಷ್ಟೇ ತಮ್ಮ 32ನೇ ವರ್ಷ ವಿವಾಹ ವಾರ್ಷಿಕೋತ್ಸವವನ್ನು ಬಹಳ ಅದ್ದೂರಿಯಾಗಿ ಆಚರಿಸಿಕೊಂಡರು. ತಮ್ಮ ಹೆಂಡತಿ ಜೊತೆಗೆ ಕೆಲ ಸುಂದರ ಫೋಟೋಗಳನ್ನು ಹಂಚಿಕೊಂಡು ವೈರಲ್ ಆಗಿದ್ದಾರೆ, ರಮೇಶ್ ಅವರು ನಾಯಕ ನಟನಾಗುವ ಮುನ್ನವೇ ಅರ್ಚನಾ ಅವರೊಂದಿಗೆ ಪ್ರೀತಿಯಲ್ಲಿ ಬೀಳುತ್ತಾರೆ.

advertisement

advertisement

ವಿದ್ಯಾಭ್ಯಾಸದ ಜೊತೆಗೆ ನಟನೆಯಲ್ಲಿಯೂ ಸಕ್ರಿಯರಾಗಿದ್ದಂತಹ ರಮೇಶ್ ಅರವಿಂದ್ ಅವರಿಗೆ ಕಾಲೇಜು ದಿನಗಳಲ್ಲೇ ಅರ್ಚನಾ ಅವರ ಮೇಲೆ ಪ್ರೀತಿ ಮೂಡುತ್ತದೆ. ಹೀಗೊಂದು ದಿನ ಅರ್ಚನಾ(Archana) ಅವರ ಮುಂದೆ ತಮ್ಮ ಪ್ರೀತಿಯನ್ನು ತೋಡಿಕೊಂಡಾಗ ಆ ಕಡೆಯಿಂದಲೂ ಗ್ರೀನ್ ಸಿಗ್ನಲ್ ದೊರಕುತ್ತದೆ. ಹೀಗೆ ಇವರಿಬ್ಬರ ಪ್ರೀತಿಗೆ ಮನೆಯವರು ಒಪ್ಪಿಗೆ ಸೂಚಿಸಿದ ಬಳಿಕ 1991 ರಂದು ಇಬ್ಬರು ಅಗ್ನಿಸಾಕ್ಷಿಯಾಗಿ ಗುರು ಹಿರಿಯರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

advertisement

advertisement

ಅಂದಿನಿಂದ ತಮ್ಮ ಪತಿಯ ಪ್ರತಿ ಕೆಲಸದಲ್ಲಿಯೂ ಸಾಥ್ ನೀಡುತ್ತಾ 32 ವರ್ಷಗಳ ಕಾಲ ಯಾವುದೇ ಸಣ್ಣ ಮನಸ್ತಾಪ, ಅಪ ನಂಬಿಕೆಗಳಿಲ್ಲದೆ ಸುಖವಾಗಿ ಸಂಸಾರಿಕ ಜೀವನವನ್ನು ನಡೆಸಿಕೊಂಡು ಬಂದಿದ್ದಾರೆ. ಈ ದಂಪತಿಗಳು ಮೊನ್ನೆಯಷ್ಟೇ ತಮ್ಮ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದು, ಅದರ ಅಂಗವಾಗಿ ಸಾಮಾಜಿಕ ಜಾಲತಾಣಗಳಲ್ಲಿ ರಮೇಶ್ ಅರವಿಂದ್ ಮತ್ತು ಪತ್ನಿ ಅರ್ಚನಾ ಅವರ ಕೆಲ ಅಪರೂಪದ ಫೋಟೋಗಳನ್ನು ಹಂಚಿಕೊಂಡು ಶುಭ ಕೋರಲಾಗಿತ್ತು.ಸದ್ಯ ಈ ಫೋಟೋಗಳು ನೆಟ್ಟಿಗರ ಗಮನ ಸೆಳೆಯುತ್ತಿದ್ದು, ಕನ್ನಡ ಸಿನಿಮಾ ರಂಗದ ಆದರ್ಶ ದಂಪತಿಗಳಿಗೆ ಅಭಿಮಾನಿಗಳು ಸಾವಿರಾರು ಗಟ್ಟಲೆ ಲೈಕ್ಸ್ ಮತ್ತು ಕಮೆಂಟ್ ಮೂಲಕ ಪ್ರೀತಿಯನ್ನು ವ್ಯಕ್ತಪಡಿಸುತ್ತಿದ್ದಾರೆ.

advertisement

Leave A Reply

Your email address will not be published.