7 Hot News
A Karnataka Times Affiliate Kannada News Portal

ನಾನು ಸರ್ಕಾರಿ ಶಿಕ್ಷಕ, ಒಂದೂವರೆ ಲಕ್ಷ ಹಣ ಕೊಡದೆ ಇದ್ದರೆ ತಾಳಿ ಕಟ್ಟಲ್ಲ ಎಂದ ವ್ಯಕ್ತಿ! ಈ ಮುದುಕನಿಗೆ ಹೆಣ್ಣು ಸಿಕ್ಕಿದ್ದೇ ದೊಡ್ಡದು ಅಂತದ್ರಲ್ಲಿ ಡಿಮ್ಯಾಂಡ್ ಬೇರೆ ಎಂದ ಜನತೆ!!

advertisement

ಪೋಷಕರು ತಮ್ಮ ಮಗಳಿಗೆ ಹುಡುಗನನ್ನು ಹುಡುಕುವಾಗ ಅವರು ಎದುರು ನೋಡುವಂತಹ ಮೊದಲ ಆದ್ಯತೆಯೇ ಸರಕಾರಿ ಉದ್ಯೋಗ ವರನಿಗೆ ಸರ್ಕಾರಿ ಉದ್ಯೋಗ ಇದ್ದರೆ ಮಾತ್ರ ನಮ್ಮ ಮಗಳನ್ನು ನೀಡುತ್ತೇವೆ ಎಂಬ ಡಿಮ್ಯಾಂಡ್ ಹುಡುಗಿ ಮನೆ ಕಡೆ. ಇನ್ನು ಕೆಲವು ಊರುಗಳಲ್ಲಿ ಸರ್ಕಾರಿ ಉದ್ಯೋಗ ಇಲ್ಲದಂತಹ ಯುವಕರು ಮದುವೆಯಾಗುವ ಹಾಗೆ ಇಲ್ಲ. ಹೀಗೆ ಸರ್ಕಾರಿ ಉದ್ಯೋಗಸ್ಥರಿಗೆ ಡಿಮ್ಯಾಂಡ್ ಹೆಚ್ಚಾದ ಬೆನ್ನಲ್ಲೇ ವರನು ತನಗೆ ಸರ್ಕಾರಿ ಉದ್ಯೋಗ ಇರುವ ಕಾರಣ ಹುಡುಗಿ ಮನೆ ಕಡೆಯವರಿಂದ ದುಬಾರಿ ವರದಕ್ಷಿಣೆ ಹಣವನ್ನು ಡಿಮ್ಯಾಂಡ್ ಮಾಡಿರುವಂತಹ ವಿಡಿಯೋ ಸದ್ಯ ಅಂತರ್ಜಾಲದಲ್ಲಿ ವ್ಯಾಪಕ ಶೇರ್ ಆಗುತ್ತಿದೆ.

advertisement

ಮದುವೆ ಸೀಸನ್ ಇರುವುದರಿಂದ ಮದುವೆಯಾಗದೆ ಇರುವಂತಹ ಅವಿವಾಹಿತರೆಲ್ಲರೂ ತಮಗೆ ಸೂಕ್ತವಾಗಿರುವಂತಹ ಜೋಡಿಗಳನ್ನು ಹುಡುಕಿ ದಾಂಪತ್ಯ ಜೀವನವೆಂಬ ಬಂದವನ್ನು ಬೆಸೆದುಕೊಳ್ಳುತ್ತಿದ್ದಾರೆ ಹೀಗಿರುವಾಗ ಸರ್ಕಾರಿ ಶಿಕ್ಷಕನೊಬ್ಬನು ಹುಡುಗಿಯ ಮನೆಗೆ ಹೋಗಿ ಹುಡುಗಿಯನ್ನು ಮೆಚ್ಚಿಕೊಂಡು ಮದುವೆಯಾಗುವುದಾಗಿ ತಿಳಿಸುತ್ತಾನೆ. ಅದರಂತೆ ಮನೆಯವರೆಲ್ಲರೂ ಮದುವೆಗೆ ಸಿದ್ಧತೆ ಮಾಡಿಕೊಂಡು ರೆಡಿಯಾದಾಗ ತನ್ನ ಬೇಡಿಕೆಯನ್ನು ಪೋಷಕರ ಮುಂದೆ ಇಟ್ಟಿದ್ದಾನೆ.

advertisement

ಮದುವೆ ಮಂಟಪದಲ್ಲಿ ಜನರೆಲ್ಲರೂ ಸೇರಿರುವಂತಹ ಸಂದರ್ಭದಲ್ಲಿ ಸರ್ಕಾರಿ ಶಿಕ್ಷಕನು ವರದಕ್ಷಿಣೆ ವಿಚಾರವಾಗಿ ಮಾತನ್ನು ಎತ್ತಿದ್ದು, ಮದುವೆ ಮಾತುಕತೆ ನಡೆಸಿದ ಸಂದರ್ಭದಲ್ಲಿ ವರನಿಗೆ ಸರ್ಕಾರಿ ಕೆಲಸ ಇದೆ ಎಂಬ ಕಾರಣಕ್ಕೆ ಹುಡುಗಿಯ ಮನೆಯವರು 2 ಲಕ್ಷ ಹಣವನ್ನು ವರದಕ್ಷಿಣೆಯನ್ನಾಗಿ ನೀಡಲು ಒಪ್ಪಿಕೊಂಡು ಕೆಲವು ಸಮಯಗಳ ಕಾಲ ಕಾಲಾವಕಾಶವನ್ನು ಕೇಳಿ ಪಡೆದಿರುತ್ತಾರೆ‌. ಆದರೆ ಮದುವೆಯ ದಿನ ಹತ್ತಿರ ಬಂದರೂ ಕೂಡ 50,000 ಹಣ ಮಾತ್ರ ವರನ ಕೈಗೆ ಸೇರಿರುತ್ತದೆ.

advertisement

advertisement

advertisement

advertisement

ಇದರಿಂದ ಕೋಪಗೊಂಡಂತಹ ವರನು ಹಸಿಮಣೆಯನ್ನು ಹೇರಿ ಇನ್ನೇನು ತಾಳಿ ಕಟ್ಟಬೇಕು ಎನ್ನುವಂತಹ ಸಂದರ್ಭದಲ್ಲಿ ಇನ್ನು 1.50 ಲಕ್ಷ ಹಣವನ್ನು ನೀಡಿದ ಬಳಕವೇ ಆಕೆಯನ್ನು ಮದುವೆಯಾಗುವುದಾಗಿ ಜನರೆಲ್ಲರ ಮುಂದೆ ಹಠ ಮಾಡಿದ್ದಾನೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ವಿಡಿಯೋ ಶೇರ್ ಮಾಡಲಾದ ಕೆಲವೇ ಕೆಲವು ಗಂಟೆಗಳಲ್ಲಿ ಬರೋಬ್ಬರಿ ಮೂರು ಲಕ್ಷಕ್ಕೂ ಅಧಿಕ ವ್ಯೂಸ್ ಹಾಗೂ ಲೈಕ್ಸ್ ಗಳ ಸುರಿಮಳೆಯೇ ಹರಿದು ಬಂದಿದೆ.

advertisement

Leave A Reply

Your email address will not be published.