ಹಿಂದೂ ಕಾರ್ಯಕರ್ತೆಯಂದು ಕೇಳಿಕೊಂಡು ಎಲ್ಲರಿಂದ ಹಣ ಸುಲಿಗೆ ಮಾಡುತ್ತಿರುವಂತಹ ಚೈತ್ರ ಕುಂದಾಪುರರನ್ನು ಪೊಲೀಸರು ವಷಕ್ಕೆ ಪಡೆದುಕೊಂಡ ಬೆನ್ನಲ್ಲೇ ಹಲವು ಕಾರಣ ನೀಡಿ ಜನರಿಂದ ಹಣ ವಸೂಲಿ ಮಾಡಿ ವಂಚನೆ ಮಾಡಿರರವಂತಹ ಸಾಲು ಸಾಲು ಆರೋಪಗಳನ್ನು ಬಯಲಿಗೆ ಎಳೆಯುತ್ತಿದ್ದಾರೆ. ವಿವಿಧ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿ ಜನರಿಗೆ ವಂಚಿಸಿ ತಲೆ ಮರೆಸಿಕೊಂಡಿದ್ದಂತಹ ಚೈತ್ರ ಕುಂದಾಪುರಳನ್ಮು ಕಳೆದ ಕೆಲವು ದಿನಗಳ ಹಿಂದಷ್ಟೆ ತಮ್ಮ ಹದ್ದಿನ ಬೇಟೆಯಿಂದ ವಶಕ್ಕೆ ಪಡೆದುಕೊಂಡು ಸಿಸಿಬಿ ಕಚೇರಿಗೆ ಕರೆತಂದರು.
ಹೀಗೆ ತನಿಕೆ ಪ್ರಾರಂಭಿಸಿದಂತಹ ಪೊಲೀಸರಿಗೆ ಅಚ್ಚರಿಗಳ ಮೇಲೆ ಅಚ್ಚರಿಯನ್ನು ಉಂಟುಮಾಡುವಂತಹ ಸಂಗತಿಗಳು ದೊರಕುತ್ತಾ ಹೋಗುತ್ತವೆ. ಚಿಕ್ಕಮಗಳೂರಿನ ಆರ್ ಎಸ್ ಎಸ್ ಮುಖ್ಯಸ್ಥ ವಿಶ್ವನಾಥ್(Vishwanath) ಅವರ ಹೆಸರನ್ನು ಹೇಳಿಕೊಂಡು ಬರೋಬ್ಬರಿ 93,000 ಕೋಟಿ ರೂಪಾಯಿಯನ್ನು ನೀಡಿ ಬಿಜೆಪಿ ಸದಸ್ಯರನ್ನಾಗಿ ಮಾಡಿದ್ದಾರೆ. ಆನಂತರ ಆರ್‌ಎಸ್‌ಎಸ್ ಪ್ರಚಾರಕನಾಗಿದ್ದ ಧನರಾಜಗೆ 1.2ಲಕ್ಷ ರೂಪಾಯಿ ನೀಡುವಂತೆ ಬೇಡಿಕೆಯನ್ನು ಇಟ್ಟಿದ್ದಾಳೆ.
ಇಷ್ಟೇ ಅಲ್ಲದೆ ಅಭಿನವ ಹಾಲಾಶ್ರೀ ಸ್ವಾಮೀಜಿಗೆ ಬರೋಬ್ಬರಿ 1.5 ಕೋಟಿ ಹಣವನ್ನು ಕೊಡಿಸಿ ಉದ್ಯಮಿ ಒಬ್ಬರಿಗೆ ಟಿಕೆಟ್ ಕೊಡಿಸುವುದಾಗಿ ಭರವಸೆ ನೀಡಿದ್ದಾಳೆ. ಹೌದು ಗೆಳೆಯರೇ ಅಭಿನವ ಹಾಲಾಶ್ರೀ ಸ್ವಾಮೀಜಿಗಳು (Abhinav Halashree Swamiji) ಹೇಳಿದ್ರೆ ಮುಗೀತು, ಪಕ್ಕಾ ಟಿಕೆಟ್ ಸಿಗುತ್ತೆ ಎಂದು ನಂಬಿಸಿ ಚೈತ್ರ ಕುಂದಾಪುರ ಉದ್ಯಮಿಗೆ ಟೋಪಿ ಹಾಕಿರುವಂತಹ ಪ್ರಕರಣದಡಿ ಬಂಧಿಸಲಾಗಿದೆ. ಹೌದು ಗೆಳೆಯರೇ ಉದ್ಯಮಿ ಗೋವಿಂದ್ ಪೂಜಾರಿ ನೀಡಿರುವಂತಹ ದೂರಿನ ಅನ್ವಯದಡಿ ಚೈತ್ರ ಕುಂದಾಪುರದ(Chaitra Kundapura) ಮೇಲೆ ಬೆಂಗಳೂರು ಸಿಸಿಬಿ ಪೊಲೀಸರು ಕೇಸ್ ದಾಖಲು ಮಾಡಿ ಉಡುಪಿಯಲ್ಲಿ ಆಕೆಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಒಂದು ಪ್ರಕರಣದಲ್ಲಿ ಗಗನ್ ಕಡೂರು, ಅಭಿನವ ಪ್ರಸಾದ್, ಹಾಲಶ್ರೀ ಸ್ವಾಮೀಜಿ, ರಮೇಶ್ ನಾಯ್ಕ ಸೇರದಂತೆ ಮುಂತಾದವರು ಕೂಡ ನೀಡಿದ್ದು, ಇವರನ್ನು ಪೊಲೀಸರು ವಿಚಾರಣೆಗೆ ಕರೆಸಿ ಐಪಿಸಿ ಸೆಕ್ಷನ್ 420ರ ಅಡಿಯಲ್ಲಿ ದೂರು ದಾಖಲು ಮಾಡಿದ್ದಾರೆ. ಹೀಗೆ ಬೈದನೂರು ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ವತಿಯಿಂದ ಟಿಕೆಟ್ ಸಿಗುತ್ತದೆ ಎಂಬ ಆಸೆಯಿಂದ ಕೋಟಿ ಕೋಟಿ ಹಣವನ್ನು ತಂದು ಚೈತ್ರ ಕುಂದಾಪುರ ಮೇಲೆ ಸುರಿದಂತಹ ಉದ್ಯಮಿ ಗೋವಿಂದ್ ಬಾಬು(Govind Babu) ಬೇಸತ್ತು.
ಪೊಲೀಸರಿಗೆ ದೂರು ನೀಡಿದ ಕೆಲವೇ ಕೆಲವು ದಿನಗಳಲ್ಲಿ ಪೊಲೀಸರು ಬೆಂಗಳೂರು ಮತ್ತು ಉಡುಪಿಯಲ್ಲಿ ಹದ್ದಿನಂತೆ ಹುಡುಕ ತೊಡಗಿದರು. ಬಳಿಕ ಆರೋಪಿ ಪೊಲೀಸರ ವಶಕ್ಕೆ ಸಿಲುಕಿಕೊಂಡಿದ್ದು, ಚೈತ್ರ ಜೊತೆಗೆ ಇನ್ನೂ ಮೂವರು ಆರೋಪಿಗಳನ್ನು ವಂಚನೆ ಆರೋಪದಡಿ ಪೊಲೀಸರು ಬಂಧಿಸಿ ಸಿಸಿಬಿ ಕಚೇರಿಯಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.