ಕನ್ನಡ ಸಿನಿಮಾರಂಗದಲ್ಲಿ ಪ್ರೀತಿಸಿ ಮದುವೆಯಾದ ಜೋಡಿಗಳು ಅನೇಕರಿದ್ದಾರೆ. ಕೆಲವು ಜೋಡಿಗಳು ಪ್ರೀತಿಸಿ ಮದುವೆಯಾಗಿ ಸುಖವಾಗಿ ಸಂಸಾರ ಮಾಡುತ್ತಿದ್ದಾರೆ. ಅಂತಹ ಜೋಡಿಗಳ ಸಾಲಿಗೆ ನಟ ಶ್ರೀ ಮುರುಳಿ (Shree Muruli) ಹಾಗೂ ಅವರ ಪತ್ನಿ ವಿದ್ಯಾ (Vidhya) ಕೂಡ ಸೇರಿಕೊಳ್ಳುತ್ತಾರೆ. ಚಂದನವನದ ಈ ಮುದ್ದಾದ ಜೋಡಿಯನ್ನು ಕಂಡರೆ ನಿಜಕ್ಕೂ ಖುಷಿಯೆನಿಸುತ್ತದೆ. ಅಷ್ಟೊಂದು ಆತ್ಮೀಯತೆ, ಬಾಂಧವ್ಯ ಈ ಜೋಡಿಯಲ್ಲಿದೆ. ಇದೀಗ ಈ ಜೋಡಿಯು ಎಷ್ಟೊಂದು ಪ್ರೀತಿಸುತ್ತಾರೆ ಎನ್ನುವ ವಿಡಿಯೋವೊಂದು ವೈರಲ್ ಆಗಿದೆ.
ಹೌದು ನಟ ಶ್ರೀಮುರಳಿ ಹಾಗೂ ವಿದ್ಯಾ (Shreemuruli And Vidhya) ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆಯಲ್ಲಿ ಪೂಜೆಯ ವೇಳೆಯಲ್ಲಿ ಶ್ರೀಮುರುಳಿಯವರು ಪತ್ನಿಯ ಹಣೆಗೆ ಕುಂಕುಮ ಇಟ್ಟಿದ್ದಾರೆ. ಈ ವೇಳೆಯಲ್ಲಿ ಪತಿ ಶ್ರೀ ಮುರುಳಿಯ ಹೆಸರನ್ನು ಕೈಯಲ್ಲಿ ಟ್ಯಾಟೋ ಹಾಕಿಸಿಕೊಂಡಿರುವುದು ರಿವೀಲ್ ಆಗಿದೆ. ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಈ ವಿಡಿಯೋ ನೋಡಿದ ನೆಟ್ಟಿಗರು ಈ ಜೋಡಿಯನ್ನು ಹಾಡಿ ಹೊಗಳಿದ್ದಾರೆ.
ಶ್ರೀಮುರುಳಿ (Shreemuruli) ಕೂಡ ಒಬ್ಬರು. ಕನ್ನಡ ಚಿತ್ರರಂಗದಲ್ಲಿ ರೋರಿಂಗ್ ಸ್ಟಾರ್ ಎಂದೇ ಖ್ಯಾತಿ ಪಡೆದಿರುವ ಶ್ರೀಮುರಳಿ ಪ್ರತಿಭಾವಂತ ನಟರಾಗಿದ್ದಾರೆ. ವೃತ್ತಿ ಜೀವನದಲ್ಲಿ ಬ್ಯುಸಿಯಾಗಿರುವ ಶ್ರೀಮುರುಳಿಯವರದ್ದು ಸುಂದರವಾದ ಕುಟುಂಬ. ಈ ದಂಪತಿಗಳಿಗೆ ಒಂದು ಗಂಡು ಒಂದು ಹೆಣ್ಣು ಮಕ್ಕಳಿದ್ದಾರೆ.
ಸೋಶಿಯಲ್ ಮೀಡಿಯದಾಲ್ಲಿ ಇವರ ಪತ್ನಿ (Vidhya) ಸದಾ ಸಕ್ರಿಯರಾಗಿದ್ದು, ಆಗಾಗ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ನಟ ಶ್ರೀಮುರುಳಿ ಹಾಗೂ ವಿದ್ಯಾರವರದ್ದು ಲವ್ ಮ್ಯಾರೇಜ್ ಆಗಿದ್ದು, ಸುಖವಾಗಿ ಜೀವನ ಸಾಗಿಸುತ್ತಿದ್ದಾರೆ. ನಟ ಶ್ರೀಮುರುಳಿಯವರ ಬಗ್ಗೆ ಹೇಳುವುದಾದರೆ, ನಟ ಶ್ರೀಮುರುಳಿಯವರು 1981 ಡಿಸೆಂಬರ್ 17ರಂದು ಬೆಂಗಳೂರಿನಲ್ಲಿ ಮುರಳಿ ಜನಿಸಿದರು.
ಎಸ್.ನಾರಾಯಣ ನಿರ್ದೇಶನದ ಚಂದ್ರ ಚಕೋರಿ (Chakori) ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಆ ಬಳಿಕ ಇವರ ನಟನೆಯ `ಕಂಠಿ’ (Kanti)ಚಿತ್ರವೂ ಹಿಟ್ ಆಯಿತು. ಆದಾದ ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾದರು. ಕನ್ನಡ ಮಾತ್ರವಲ್ಲದೇ, ಒಂದೆರೆಡು ಮಲಯಾಳಂ ಚಿತ್ರಗಳಲ್ಲಿ ಕೂಡ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಶ್ರೀಮುರಳಿಯವರ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿದ್ದು ಬ್ಯುಸಿಯಾಗಿದ್ದಾರೆ.