ಕೆಲ ಸೆಲೆಬ್ರಿಟಿಗಳಿಗೆ ಕೈಯಲ್ಲಿ ಕೆಲಸ ಇಲ್ಲದಿದ್ದರೂ ಬೇಡದ ವಿಚಾರಗಳಿಂದ ಸುದ್ದಿಯಾ ಗುವುದೇ ಹೆಚ್ಚು. ಸಿನಿಮಾರಂಗದಲ್ಲಿ ಇಂತಹ ಸೆಲೆಬ್ರಿಟಿಗಳಿಗೇನು ಕೊರತೆಯಿಲ್ಲ ಬಿಡಿ. ಸಾರ್ವಜನಿಕ ವಲಯದಲ್ಲಿ ಹೆಚ್ಚು ಚರ್ಚೆಯಲ್ಲಿರುವ ನಟ ನಟಿಯರು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗುವುದಿದೆ. ಬೇಕಾ ಬಿಟ್ಟಿಯಾಗಿ ಮಾತನಾಡುವ ನಟಿಯರ ಸಾಲಿಗೆ ತೆಲುಗು ನಟಿ ಶ್ರೀ ರಾಪಕಾ (Shree Rapakaa) ಕೂಡ ಸೇರಿಕೊಳ್ಳುತ್ತಾರೆ. ಆದರೆ ನಟಿಗೆ ಸಿನಿಮಾಗಳಲ್ಲಿ ಹೇಳಿಕೊಳ್ಳುವಷ್ಟೇನು ಅವಕಾಶಯಿಲ್ಲ.
ಆದರೆ ಇದೀಗ ತಮ್ಮ ಬೋಲ್ಡ್ ಕಾಮೆಂಟ್ ಮೂಲಕ ರಾಪಕಾ (Rapaka) ಸುದ್ದಿಯಲ್ಲಿದ್ದಾರೆ. ಹೌದು, ವಾಹಿನಿಯೊಂದರ ಸಂದರ್ಶನದಲ್ಲಿ ಶ್ರೀ ರಾಪಕಾ, ತಮ್ಮ ಗೆಳತಿಯ ಜೀವನದಲ್ಲಿ ನಡೆದಿರುವ ಘಟನೆಯನ್ನು ತೆಗೆದುಕೊಂಡು ಸಾರ್ವಜನಿಕವಾಗಿ ಹೇಳಿಕೊಂಡಿದ್ದಾರೆ. ಅವರು ಹೇಳಿದ ವಿಚಾರ ಹಾಗೂ ಹೇಳಿಕೆಯು ಸದ್ಯಕೆ ವೈರಲ್ ಆಗುತ್ತಿದ್ದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗುವಂತೆ ಮಾಡಿದೆ.
ಅಂದಹಾಗೆ, ಮದುವೆಯ ಮುನ್ನ ಸೆ-ಕ್ಸ್ ಮಾಡುವುದು ತಪ್ಪು ಅಲ್ಲ, ತಮ್ಮ ಭಾವಿ ಪತಿಯ ಜೊತೆ ದಯವಿಟ್ಟು ಸೆಕ್ಸ್ ಮಾಡಿ, ಅವನು ಗಂಡು ಹೌದೋ ಅಥವಾ ಅಲ್ಲವೋ ಎನ್ನುವುದನ್ನು ಟೆಸ್ಟ್ ಮಾಡಿ ಎಂದಿದ್ದಾರೆ. ನಟಿಯ ಈ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. “ತನ್ನ ಸ್ನೇಹಿತೆಯೊಬ್ಬರು ವೈದ್ಯರೊಬ್ಬರನ್ನು ಮದುವೆಯಾಗಿದ್ದರು. ತುಂಬಾ ಕನಸು ಕಟ್ಟಿಕೊಂಡು ಹೊಸ ಜೀವನಕ್ಕೆ ಕಾಲಿಟ್ಟಿದ್ದರಂತೆ.
ಆದರೆ, ಫಸ್ಟ್ ನೈಟ್ ದಿನ ಅವನು ಸಲಿಂಗಿ ಎಂದು ಗೊತ್ತಾಗಿ, ಅವಳ ಕನಸಿನ ಸೌಧವೇ ಮುರಿದು ಬಿದ್ದಿತ್ತು. ಹಾಗಾಗಿ ಮದುವೆಯ ಮುನ್ನ ಸೆಕ್ಸ್ ಮಾಡಿ ಗಂಡನ್ನ ಟೆಸ್ಟ್ ಮಾಡಿ” ಎಂದಿದ್ದಾರೆ. ನಟಿಯ ಈ ಮಾತುಗಳು ಕೇಳಿ ಗರಂ ಆಗಿರುವ ನೆಟ್ಟಿಗರು, ಗೆಳತಿಯ ಬದುಕಿನಲ್ಲಿ ನಡೆದದ್ದು, ಎಲ್ಲರಿಗೂ ಅನ್ವಯಿಸಲ್ಲ ಎಂದು ಕೆಲವರು ಕಾಮೆಂಟ್ ಮಾಡಿದರೆ, ಮತ್ತೊಬ್ಬರು ಒಬ್ಬ ನಟಿಯಾಗಿ ಜವಾಬ್ದಾರಿಯುತ ಮಾತುಗಳನ್ನು ಆಡಿ ಎಂದು ಹೇಳಿದ್ದಾರೆ.
ನಟಿ ಶ್ರೀರಾಪಕಾ ಅವರು ನಿರ್ದೇಶಕ ರಾಮ್ ಗೋಪಾಲ್ ವರ್ಮಾರ ನಗ್ನ (Nagna) ಸಿನಿಮಾದಲ್ಲಿ ನಟಿಸಿದ್ದಾರೆ. ದೇಶಮುದುರು (Deshamuduru), ಚಂದಮಾಮ (Chandamama) ಮತ್ತು ನಚ್ಚವುಲೆ (Nacchavule) ಸೇರಿದಂತೆ ಕೆಲವು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ ಇತ್ತೀಚೆಗಷ್ಟೇ ಬಿಗ್ಬಾಸ್ ಶೋ (Big Boss show) ನಲ್ಲೂ ಇವರು ಭಾಗವಹಿಸಿದ್ದು ಸದಾ ಸುದ್ದಿಯಲ್ಲಿರುತ್ತಾರೆ.