ನಮ್ಮಮ್ಮ ಸೂಪರ್ ಸ್ಟಾರ್ ಖ್ಯಾತಿಯ ವಿಂದ್ಯಾ ಅವರ ಸುಂದರ ಕುಟುಂಬ ಹೇಗಿದೆ ನೋಡಿ!! 

ಕಳೆದ ಕೆಲವು ತಿಂಗಳುಗಳ ಹಿಂದಷ್ಟೇ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾದಂತಹ ನಮ್ಮಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮ ಚಂದನವನಕ್ಕೆ ಸಾಕಷ್ಟು ಪುಟಾಣಿ ಪಂಟ್ರುಗಳನ್ನು ನೀಡಿದೆ ಎಂದರೆ ತಪ್ಪಾಗಲಾರದು. ಈ ಕಾರ್ಯಕ್ರಮದ ಮೂಲಕ ಬೆಳಕಿಗೆ ಬಂದಂತಹ ಮಾಸ್ಟರ್ ಆನಂದ್ (Master Anand) ಅವರ ಮಗಳು ವಂಶಿಕ ಅಂಜಲಿ ಕಶ್ಯಪ ಇಂದು ಕನ್ನಡ ಕಿರುತೆರೆಯ ಬಹು ಬೇಡಿಕೆಯ ಕಲಾವಿದೆಯಾಗಿ ಗುರುತಿಸಿಕೊಂಡಿದ್ದಾರೆ.

ಇನ್ನು ತನ್ನ ತೊದಲು ಮಾತಿನ ಮೂಲಕವೇ ಕನ್ನಡಿಗರ ಹೃದಯ ಗೆಲ್ಲುವಲ್ಲಿ ಯಶಸ್ವಿ ಆದಂತಹ ರೋಹಿತ್ ಕೂಡ ಬಾರಿ ಜನಪ್ರಿಯತೆ ಪಡೆದಿದ್ದರು. ಹೌದು ಗೆಳೆಯರೇ ರೋಹಿತ್ ತನ್ನ ಪರ್ಫಾರ್ಮೆನ್ಸ್ಗಿಂತ ಹೆಚ್ಚಾಗಿ ಆಟ ತುಂಟಾಟ, ಇದರನ್ನು ತಮ್ಮ ಡೈಲಾಗ್ನಿಂದ ನಗಿಸುವುದರ ಮೂಲಕ ಹೆಚ್ಚು ಫೇಮಸ್ ಆದರು. ಆತ ಗೆಲ್ಲುವುದು ಬಿಡುವುದು ಸೆಕೆಂಡರಿ ಆದರೆ ಅವನ ತುಂಟಾಟಗಳನ್ನು ನಾವು ಟಿವಿಯಲ್ಲಿ ನೋಡಿದರೆ ಸಾಕು ಎಂದು ಅದೆಷ್ಟೋ ಕಿರುತೆರೆ ಪ್ರೇಕ್ಷಕರು ಕಾದು ಕುಳಿತಿದ್ದುಂಟು.

ಹೀಗೆ ತಮ್ಮ ಕ್ಯೂಟ್ನೆಸ್ ಮೂಲಕವೇ ಕನ್ನಡಿಗರ ಹೃದಯ ಗೆದ್ದಿದ್ದ ರೋಹಿತ್(Rohith) ಮತ್ತು ತಾಯಿ ವಿಂದ್ಯಾ(Vindhya) ವೇದಿಕೆಯ ಮೇಲೆ ತಮ್ಮ ಬದುಕಿನ ಕರಾಳ ಕಥೆಯನ್ನು ಹೇಳಿಕೊಂಡು ಕಣ್ಣೀರು ಹಾಕಿದ್ದಿದೆ. ಹೌದು ಗೆಳೆಯರೇ ನಟಿ ವಿಂದ್ಯವರನ್ನು ನಾವು ಕಲರ್ಸ್ ಕನ್ನಡ ವಾಹಿನಿಯಲ್ಲಿ ಈ ಹಿಂದೆ ಪ್ರಸಾರವಾಗುತ್ತಿದ್ದ ಗೀತಾ ಸೀರಿಯಲ್ನಲ್ಲಿ ಕಾಣಬಹುದಾಗಿತ್ತು . ಇದರ ಮೂಲಕ ಗುರುತಿಸಿಕೊಂಡು ನಮ್ಮಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮಕ್ಕೆ ಸ್ಪರ್ಧಿಸುವಂತಹ ಅವಕಾಶ ಪಡೆದ ವಿಂಧ್ಯಾ ಹಾಗೂ ರೋಹಿತ್ ಮೂರನೇ ಸ್ಥಾನವನ್ನು ಪಡೆದು ವಿಜೇತರಾದರು.

ವೇದಿಕೆಯ ಮೇಲೆ ತಾನು ಮನಸಾರೆ ಪ್ರೀತಿಸಿದಂತಹ ಪತಿ ಇಂದು ನಮ್ಮೊಂದಿಗಿಲ್ಲ, ನಾನು ಸಿಂಗಲ್ ಪೇರೆಂಟ್(single parent) ಎಂದು ಹೇಳಿಕೊಂಡು ವಿಂದ್ಯ ಕಣ್ಣೀರು ಹಾಕಿದ್ದಿದೆ. ಹೌದು ಗೆಳೆಯರೇ ಕಾರ್ಯಕ್ರಮದ ಆರಂಭಿಕ ದಿನಗಳಲ್ಲಿ ವಿಂಧ್ಯ ಅವರು ಈ ರೀತಿ ಹೇಳಿದಾಗ ಸೋಶಿಯಲ್ ಮೀಡಿಯಾದಲ್ಲಿ ಕರುಣೆಗಿಟ್ಟಿಸಿಕೊಳ್ಳುವ ಸಲುವಾಗಿ ಈ ರೀತಿ ಹೇಳುತ್ತಿದ್ದಾರೆ ಎಂದೆಲ್ಲ ನಕಾರಾತ್ಮಕ ಅಭಿಪ್ರಾಯಗಳು ಕೂಡ ವ್ಯಕ್ತವಾದವು.

ಆದರೆ ವಿಂದ್ಯ ಅವರ ಉದ್ದೇಶ ಇದಾಗಿರಲಿಲ್ಲ, ಬದಲಿಗೆ ಯಾವುದೇ ವೇದಿಕೆಯ ಮೇಲು ತಮ್ಮ ಪತಿಯ ಹೆಸರನ್ನಾಗಲಿ ಅಥವಾ ಅವರ ಕುರಿತು ಕೆಟ್ಟದಾಗಿ ಮಾತನಾಡುವುದನ್ನು ವಿಂದ್ಯ ಮಾಡಲೇ ಇಲ್ಲ. ರೋಹಿತ್(Rohith) ಹಾಗು ಪತಿ ಇರುವಂತಹ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ(social media) ಬಾರಿ ವೈರಲಾಗುತ್ತಿದ್ದು, ಕಳೆದ ಕೆಲ ದಿನಗಳ ಹಿಂದೆ ತಮ್ಮ ಮುನಿಸು ಮನಸ್ತಾಪಗಳೆಲ್ಲವೂ ಕಳೆದು ಹೋಗಿ ಮತ್ತೆ ತಮ್ಮ ಪತಿಯೊಂದಿಗೆ ಒಂದಾಗಿರುವ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಕೊನೆಗೂ ನಮ್ಮ ಕುಟುಂಬ ಒಂದಾಯಿತು ಎಂದು ಕ್ಯಾಪ್ಷನ್ ಬರೆಯುವ ಮೂಲಕ ವಿಂದ್ಯಾ(Vindhya) ಸಂತಸ ವ್ಯಕ್ತಪಡಿಸಿದ್ದಾರೆ.

Public News

Leave a Reply

Your email address will not be published. Required fields are marked *