ಖ್ಯಾತ ಕನ್ನಡ ನಟಿ ಹಂಸ ನಾರಾಯಣ್ ಸ್ವಾಮಿ ಅವರ ಮುದ್ದಾದ ಕುಟುಂಬ ಹೇಗಿದೆ ನೋಡಿ! ಸುಂದರವಾದ ಫೋಟೋಸ್ ಇಲ್ಲಿವೆ!!

ಪ್ರತಿದಿನ ಸಂಜೆಯಾದರೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಪುಟ್ಟಕ್ಕನ ಮಕ್ಕಳು ಧಾರವಾಹಿಯನ್ನು ನೋಡುವ ಸಲುವಾಗಿ ಮನೆಯಲ್ಲಿರುವಂತಹ ವಯಸ್ಸಾದ ಹಿರಿಯರಿಂದ ಪುಟ್ಟ ಪುಟ್ಟ ಮಕ್ಕಳವರೆಗೂ ಅದರಲ್ಲೂ ನಟಿ ಉಮಾಶ್ರೀ(Umashree) ಅವರ ಅಭಿನಯವನ್ನು ನೋಡುವ ಸಲುವಾಗಿ ಕಾದು ಕುಳಿತಿರುತ್ತಾರೆ. ಸೀರಿಯಲ್ ಪ್ರಸಾರವಾದ ಮೊದಲ ದಿನದಿಂದ ಹಿಡಿದು ಇಂದಿನವರೆಗೂ ಅದೇ ಜನಪ್ರಿಯತೆ ಹಾಗೂ ಕ್ರೇಜನ್ನು ಪ್ರೇಕ್ಷಕರಲ್ಲಿ ಸೃಷ್ಟಿ ಮಾಡುತ್ತ ಪ್ರತಿದಿನ ಒಂದರ ಮೇಲೊಂದರಂತೆ ತಿರುಗುಗಳನ್ನು ಪಡೆದುಕೊಳ್ಳುತ್ತ ಯಶಸ್ವಿಯಾಗಿ ಸಾಗುತ್ತಿರುವಂತಹ ಈ ಒಂದು ಧಾರಾವಾಹಿಗೆ ಕಟ್ಟಾ ಅಭಿಮಾನಿಗಳಿದ್ದಾರೆ ಎಂದರೆ ತಪ್ಪಾಗಲಾರದು.

ಅದರಂತೆ ಈ ಒಂದು ಧಾರವಾಹಿಯ ಖಡಕ್ ವಿಲ್ಲನ್ ಆಗಿ ಅಭಿನಯಿಸುತ್ತಿರುವಂತಹ ಹಂಸ ನಾರಾಯಣ ಸ್ವಾಮಿ(Hamsa Narayanaswamy) ಅಳಿಯಾಸ್ ರಾಜೇಶ್ವರಿ ಯಾರಿಗೆ ತಾನೇ ಪರಿಚಯವಿರದಿರಲು ಸಾಧ್ಯ ಹೇಳಿ? ಅತಿ ಚಿಕ್ಕ ವಯಸ್ಸಿಗೆ ಬಹುದೊಡ್ಡ ಪಾತ್ರವನ್ನು ನಿಭಾಯಿಸುತ್ತಿರುವಂತಹ ಈ ನಟಿ ಸದ್ಯ ಕನ್ನಡ ಕಿರುತೆರೆಯ ಲೇಡಿ ವಿಲ್ಲನ್ ಕ್ಯಾಟಗರಿಯಲ್ಲಿ ಅಗ್ರಸ್ಥಾನವನ್ನು ಅಲಂಕರಿಸುತ್ತಾರೆ ಎಂದರೆ ತಪ್ಪಾಗಲಾರದು.

ಏನಾದರೂ ಕಸರತ್ತನು ಮಾಡಿ ಪುಟ್ಟಕ್ಕನನ್ನು ಕಷ್ಟಕ್ಕೆ ಸಿಲುಕಿಸಲೇಬೇಕು ಎನ್ನುವ ಪಾತ್ರ ಇವರದ್ದಾಗಿದ್ದು, ಹೀಗೆ ಎಂತಹ ಪಾತ್ರ ನೀಡಿದರು ಅದರೊಳಗೆ ಪರಕಾಯ ಪ್ರವೇಶ ಮಾಡಿ ಜನರ ಮನಸ್ಸನ್ನು ಗೆಲ್ಲುವ ಹಂಸ ಸೋಶಿಯಲ್ ಮೀಡಿಯಾದಲ್ಲಿಯೂ ಸಕ್ಕತ್ ಆಕ್ಟಿವ್ವಿದ್ದು, ಆಗಾಗ ತಮ್ಮ ಕ್ಯೂಟ್ಟೆಸ್ಟ್ ಫೋಟೋಗಳ (Cutest photos) ಮೂಲಕ ನೆಟ್ಟಿಗರ ಗಮನ ಸೆಳೆಯುತ್ತಿರುತ್ತಾರೆ.

ಹೌದು ಗೆಳೆಯರೇ ಇತ್ತೀಚಿಗಷ್ಟೇ ತಮ್ಮ ಎಲ್ಲಾ ಫೋಟೋಗಳನ್ನು ವಿಡಿಯೋ ಮಾಡಿ ಅದನ್ನು ಇನ್ಸ್ಟಾಗ್ರಾಮ್ ಪೇಜ್ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಒಂದೊಂದು ಫೋಟೋದಲ್ಲಿ ಇವರ ಮುದ್ದಾದ ನಗುವನ್ನು ಕಂಡಂತಹ ನೆಟ್ಟಿಗರು ಪ್ರೀತಿಯ ಸುರಿಮಳೆಯನ್ನೇ ಹರಿಸುತ್ತಿದ್ದಾರೆ. ಹಂಸನಾರಾಯಣಸ್ವಾಮಿ (Hamsa Narayanaswamy) ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ಆಕ್ಟಿವ್ ಆಗಿ ಇರುವಂತಹ ಕಲಾವಿದೆ.

ಇವರ ಫೋಟೋ ವೈರಲ್ ಆದಾಗೆಲ್ಲ ನೆಟ್ಟಿಗರು ಆಂಟಿನೋ ಹುಡುಗಿನೋ ಗೊತ್ತಾಗ್ತಿಲ್ಲ, ನಿಜವಾಗಲೂ ಒಳ್ಳೆ ಬೆಣ್ಣೆತರ ಕಾಣಿಸ್ತೀರಾ, ಎಂದೆಲ್ಲ ಕಮೆಂಟ್ ಮಾಡುತ್ತಿದ್ದಾರೆ. ಹೀಗೆ ತಮ್ಮ ಅಮೋಘ ಅಭಿನಯದ ಮೂಲಕ ಸಾಕಷ್ಟು ಸಿನಿಮಾ ಹಾಗೂ ಸೀರಿಯಲ್ಗಳಲ್ಲಿ ಅವಕಾಶವನ್ನು ಪಡೆದುಕೊಂಡಿರುವ ಹಂಸ ನಾರಾಯಣ ಸ್ವಾಮಿ(Hamsa Narayanaswamy) ಮುಂದಿನ ದಿನಗಳಲ್ಲಿ ಇನ್ನಷ್ಟು ಒಳ್ಳೆ ಪಾತ್ರಗಳ ಅವಕಾಶವನ್ನು ಗಿಟ್ಟಿಸಿಕೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

Public News

Leave a Reply

Your email address will not be published. Required fields are marked *