7 Hot News
A Karnataka Times Affiliate Kannada News Portal

ಕಿಚ್ಚ ಸುದೀಪ್ ಪುತ್ರಿ ಸಾನ್ವಿ ಮತ್ತು ಅರುಣ್ ಸಾಗರ್ ಪುತ್ರಿ ಅತಿಥಿ, ಸುಂದರ ಕ್ಷಣಗಳು ಫೋಟೋಸ್ ಇಲ್ಲಿವೆ ನೋಡಿ!!

advertisement

ಕನ್ನಡ ಸಿನಿಮಾದ ಸಾಕಷ್ಟು ಸ್ಟಾರ್ ನಟ ನಟಿಯರು ಅಮೂಲ್ಯವಾದ ಸ್ನೇಹ ಬಾಂಧವ್ಯವನ್ನು ಕಾಯ್ದುಕೊಂಡು ಬಂದಿದ್ದಾರೆ ಅವರ ಮಕ್ಕಳು ಕೂಡ ತಮ್ಮ ಪೋಷಕರಂತೆ ಆತ್ಮೀಯವಾದ ಬಂಧವನ್ನು ಬೆಳೆಸಿಕೊಂಡು ಬರುತ್ತಿದ್ದು, ಅದರಲ್ಲೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kiccha sudeep)ಮಗಳು ಸಾನ್ವಿ ಸುದೀಪ್ ಮತ್ತು ಕಲಾಕಾರ ಅರುಣ್ ಸಾಗರ್ (Arun Sagar) ಅವರ ಪುತ್ರಿ ಅದಿತಿ ಸಾಗರ್ (Aditi Sagar) ಇಬ್ಬರೂ ಬೆಸ್ಟ್ ಫ್ರೆಂಡ್ಸ್.

advertisement

ನಿಮ್ಮೆಲ್ಲರಿಗೂ ತಿಳಿದಿರುವ ಹಾಗೆ ಅರುಣ್ ಸಾಗರ್ ಮತ್ತು ಕಿಚ್ಚ ಸುದೀಪ್ ಅವರ ಬಾಂಧವ್ಯ ಹಲವು ವರ್ಷಗಳಿಂದ ಗಟ್ಟಿಯಾಗಿದೆ. ಬಿಗ್ ಬಾಸ್ ಸೀಸನ್ 1 ರ ಸ್ಪರ್ಧಿಯಾಗಿ ದೊಡ್ಮನೆಯನ್ನು ಪ್ರವೇಶ ಮಾಡಿದಂತಹ ಅರುಣ್ ಸಾಗರ್ ಅವರು ತಮ್ಮ ಅದ್ಭುತ ಆಟಗಾರಿಕೆಯ ಮೂಲಕ ಕಿರುತೆರೆ ಪ್ರೇಕ್ಷಕರಿಗೆ ಪರಿಚಯಗೊಂಡರು. ಆನಂತರ ಕಿಚ್ಚ ಸುದೀಪ್ ಅವರ ಜಸ್ಟ್ ಮಾತ್ ಮಾತಲ್ಲಿ, ಮಾತಾಡು ಮಾತಾಡು ಮಲ್ಲಿಗೆ, ಚಂದು, ಈ ಶತಮಾನದ ವೀರ ಮದಕರಿ ಹಾಗೂ ವಿಷ್ಣುವರ್ಧನ ಸೇರಿದಂತೆ ಹಲವು ಸಿನಿಮಾಗಳಲ್ಲಿ ಕಿಚ್ಚ ಹಾಗೂ ಅರುಣ್ ಸಾಗರ್ ಅವರ ಜುಗಲ್ ಬಂದಿಯನ್ನು ನೋಡಬಹುದಾಗಿದೆ.

advertisement

ಕೆಲವು ಸಿನಿಮಾಗಳಲ್ಲಿ ಒಬ್ಬರು ಖಳನಟನಾಗಿ ಕಾಣಿಸಿಕೊಂಡರೆ ಮತ್ತೊಬ್ಬರು ಯಥಾಪ್ರಕಾರ ನಾಯಕನಾಗಿ ಮಿಂಚಿದ್ದಾರೆ.‌ ಉಳಿದೆಲ್ಲ ಸಿನಿಮಾಗಳಲ್ಲಿ ಆತ್ಮೀಯ ಸ್ನೇಹಿತರಾಗಿ ನಟಿಸಿದ್ದಾರೆ. ಹೀಗೆ ಇಂದಿಗೂ ಅದೇ ಬಾಂದವ್ಯವನ್ನು ಉಳಿಸಿಕೊಂಡು ಬಂದಿರುವ ಅರುಣ್ ಸಾಗರ್ ಮತ್ತು ಕಿಚ್ಚ ಸುದೀಪ್ ಅವರ ನಂತರ ಈಗ ಮಕ್ಕಳ ಸರದಿ ಎಂದರೆ ತಪ್ಪಾಗಲಾರದು. ಕಿಚ್ಚ ಸುದೀಪ್ ಅವರ ಏಕೈಕ ಪುತ್ರಿ ಸಾನ್ವಿ ಮತ್ತು ಅರುಣ್ ಸಾಗರ್ ಮಗಳು ಅದಿತಿ ಸಾಗರ್ ಇಬ್ಬರೂ ಆತ್ಮೀಯ ಸ್ನೇಹಿತರಾಗಿದ್ದು,

advertisement

advertisement

ಒಬ್ಬರ ವೃತ್ತಿ ಬದುಕಿಗೆ ಮತ್ತೊಬ್ಬರು ಪ್ರೋತ್ಸಾಹಿಸುತ್ತಾ ಆಗಾಗ ಪರಸ್ಪರರ ಫೋಟೋಗಳನ್ನು ತಮ್ಮ-ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡು ವೈರಲಾಗುತ್ತಿರುತ್ತಾರೆ. ಹೀಗಿರುವಾಗ ಕಳೆದ ಕೆಲವು ದಿನಗಳ ಹಿಂದಷ್ಟೇ ಸಾನ್ವಿ ಮತ್ತು ಅದಿತಿ ಇವೆಂಟ್ ಒಂದರಲ್ಲಿ ಭೇಟಿ ಮಾಡಿ, ಜೊತೆಗೆ ನಿಂತು ಫೋಟೋ ತೆಗೆಸಿಕೊಂಡಿದ್ದಾರೆ. ಈ ಕೆಲವು ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.

advertisement

advertisement

ಈಗಾಗಲೇ ಶಿವಣ್ಣನ 125ನೇ ವೇದಾ ಸಿನಿಮಾದ ಮೂಲಕ ಅದಾದ ಮೇಲೆ ಬಣ್ಣದ ಲೋಕಕ್ಕೆ ಪಾದರ್ಪಣೆ ಮಾಡಿರುವಂತಹ ಅರುಣ್ ಸಾಗರ್ (Arun Sagar) ಅವರ ಮಗಳು ಅತಿಥಿ ಸಾಗರ್ ತಮ್ಮ ಮೊದಲ ಚಿತ್ರದಲ್ಲಿಯೇ ವಿಮರ್ಶಕರಿಂದ ಅದ್ಭುತ ಮೆಚ್ಚುಗೆಗಳನ್ನು ಪಡೆದುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ರಗಡ್ ಪಾತ್ರಗಳ ಮೂಲಕ ಮಿಂಚಲಿದ್ದಾರಾ? ಎಂಬುದನ್ನು ಕಾದು ಮಾಡಬೇಕಿದೆ. ಇನ್ನು ಕಿಚ್ಚನ ಮಗಳು ಸಾನ್ವಿ ಸುದೀಪ್(Sanvi Sudeep) ಕೂಡ ಜಿಮ್ಮಿ ಸಿನಿಮಾದ ಹಾಡಿನಿಂದ ಬಣ್ಣದ ಲೋಕವನ್ನು ಪ್ರವೇಶ ಮಾಡಿದ್ದು ಇವರ ಅದ್ಭುತ ಕಂಠಸಿರಿಗೆ ವಿಶೇಷವಾದ ಅಭಿಮಾನಿ ಬಳಗ ಸೃಷ್ಟಿಯಾಗಿದೆಯೆಂದರೆ ತಪ್ಪಾಗಲಾರದು.

advertisement

Leave A Reply

Your email address will not be published.