7 Hot News
A Karnataka Times Affiliate Kannada News Portal

34 ಲಕ್ಷ ಮತಗಳು ಪಡೆದರೂ, ಬಿಗ್ ಬಾಸ್ ಮನೆಯಲ್ಲಿ ಇರುವುದಿಲ್ಲ, ನನ್ನನ್ನು ಮನೆಗೆ ಕಳುಹಿಸಿ ಎಂದ ವರ್ತೂರ್ ಸಂತೋಷ್! ಬೆಚ್ಚಿಬಿದ್ದ ಕಿಚ್ಚ ಸುದೀಪ್!!

advertisement

ಈ ಬಾರಿಯ ಬಿಗ್ ಬಾಸ್ ಸೀಸನ್ ಹತ್ತಿರ ಕಾರ್ಯಕ್ರಮ ಒಂದಲ್ಲ ಒಂದು ವಿಚಾರದಿಂದ ತೀವ್ರ ಸ್ವರೂಪವನ್ನು ಪಡೆದುಕೊಂಡು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಬಿಗ್ ಬಾಸ್ ಕಾರ್ಯಕ್ರಮ ಪ್ರಸಾರವಾದ ಆರಂಭಿಕ ದಿನಗಳಲ್ಲಿ ಸ್ಪರ್ಧಿಗಳ ಆಯ್ಕೆಯ ವಿಚಾರದಿಂದ ವೀಕ್ಷಕರಲ್ಲಿ ಬೇಸರವನ್ನು ತರಿಸಿತ್ತು ಹೀಗೆ ಕಾಲಕ್ರಮೇಣ ಜನರು ಯಾರನ್ನು ದ್ವೇಷಿಸುತ್ತಿದ್ದರೋ ಅವರನ್ನೇ ಇಷ್ಟ ಪಡುವಂತಾಗಿದೆ.

advertisement

ಜೊತೆಗೆ ಸಂತೋಷ್ ಅವರ ಹುಲಿ ಉಗರಿನ ಪೆಂಡೆಂಟ್ ನಿಂದ ರಾಜ್ಯದಾದ್ಯಂತ ತೀವ್ರ ಸಂಚಲನವನ್ನು ಹುಟ್ಟು ಹಾಕಿದಂತಹ ಬಿಗ್ ಬಾಸ್ (Big boss) ಕಾರ್ಯಕ್ರಮ ಇದೀಗ ಮತ್ತೊಮ್ಮೆ ಅವರ ವಿಚಾರದ ಕುರಿತಾಗಿ ಚರ್ಚೆಗೆ ಕಾರಣವಾಗಿದೆ. ಸಂತೋಷ್ ಅವರು ಹುಲಿ ಉಗುರಿನ ಪ್ರಕರಣದ ಬೆನ್ನೆಲ್ಲೆ ಜೈಲು ಪಾಲಾಗಿದ್ದರು. ಇದಾದ ಬಳಿಕ ಜಾಮೀನು ಸಿಕ್ಕಿ ಮತ್ತೆ ಬಿಗ್ ಬಾಸ್ ಮನೆಗೆ ಹಳ್ಳಿಕಾರ್ ಒಡೆಯ ಸಂತೋಷ್ ಅವರು ಕಂಬ್ಯಾಕ್ ಮಾಡಿದ್ದು ವಾರವಿಡೀ ಎಲ್ಲಾ ಆಟಗಳಲ್ಲಿಯೂ ಅದ್ಭುತ ಪರ್ಫಾರ್ಮೆನ್ಸ್ ನೀಡುತ್ತಾ ಜನರಿಗೆ ಜಬರ್ದಸ್ತ್ ಎಂಟರ್ಟೈನ್ಮೆಂಟ್ ನೀಡಿದರು.

advertisement

advertisement

ಹೀಗಿರುವಾಗ ಕಿಚ್ಚ ಸುದೀಪ್ ಅವರು ಸೇಫ್ ಆದಂತಹ ಸ್ಪರ್ಧಿಯಾಗಿ ವರ್ತೂರ್ ಸಂತೋಷ್ ಅವರ ಹೆಸರನ್ನು ತೆಗೆದುಕೊಂಡಾಗ ಸಂತೋಷ್ ಎಂದು ಕೈಮುಗಿದು ಧನ್ಯವಾದಗಳನ್ನು ತಿಳಿಸುವುದರ ಜೊತೆಗೆ ನಿಮ್ಮ ಪ್ರೀತಿಗೆ ನಾನು ಸದಾ ಚಿರಋಣಿಯಾಗಿರುತ್ತೇನೆ ಆದರೆ ನನಗೆ ಇಲ್ಲಿ ಇರಲು ಆಗುತ್ತಿಲ್ಲ ಎನ್ನುವಂತಹ ಮಾತುಗಳನ್ನಾಡಿದ್ದಾರೆ. ಹೌದು ಗೆಳೆಯರೇ ಅತಿ ಹೆಚ್ಚಿನ ವೋಟ್ ಪಡೆದು ಎಲಿಮಿನೇಷನ್ ಪ್ರಕ್ರಿಯೆಯಿಂದ ವರ್ತುರ್ ಸಂತೋಷ್(Varthur Santhosh) ಸೇಫ್ ಆದರೂ ಕೂಡ ಮನೆಯಿಂದ ಹೊರ ಹೋಗುವಂತಹ ಬಯಕೆಯನ್ನು ವ್ಯಕ್ತಪಡಿಸಿರುವುದು ಎಲ್ಲರಿಗೂ ಆಘಾತವನ್ನು ತಂದಂತಹ ಸುದ್ದಿಯಾಗಿದೆ.

advertisement

ಇದಕ್ಕೆ ಕಿಚ್ಚ ಸುದೀಪ್ ಅವರು ಕೂಡ ಖಡಕ್ಕಾದ ಮಾತುಗಳ ಮೂಲಕ ದಿಟ್ಟ ನಿರ್ಧಾರವನ್ನು ತೆಗೆದುಕೊಂಡಿದ್ದು ವರ್ತೂರ್ ಈ ವಾರ ಖಾಯಂ ಆಗಿ ಬಿಗ್ ಬಾಸ್ ಮನೆಯಿಂದ ಹೊರ ಹೋಗಲಿದ್ದಾರಾ ಎಂಬುದನ್ನು ತಿಳಿದುಕೊಳ್ಳಿ. ಹೌದು ಗೆಳೆಯರೇ ಬಿಗ್ ಬಾಸ್ ಕಾರ್ಯಕ್ರಮವು ಬಿಡುಗಡೆ ಮಾಡಿರುವಂತಹ ಪ್ರಮೋದಲ್ಲಿ ಕಿಚ್ಚ ಸುದೀಪ್ ಅವರು ವರ್ತೂರ್ ನೀವು ಸೇಫ್ ಎಂದು ತಿಳಿಸುತ್ತಾರೆ ಅದಕ್ಕೆ ಎದ್ದು ನಿಂತು ಕೈ ಮುಗಿಯುತ್ತ ಕಣ್ಣಲ್ಲಿ ನೀರು ತುಂಬಿಕೊಂಡು “ಹೊರಗಡೆ ಒಂದು ಇನ್ಸಿಡೆಂಟ್(Incident) ನಡೀತು ಅದರಿಂದ ಹೊರಬಂದು ಆಡಬೇಕೆಂದರೆ ನನಗೆ ಆಗುತ್ತಿಲ್ಲ ಇಲ್ಲಿ. ನಾನು ಹೊರಗಡೆ ಇರಬೇಕೆಂದು ಇಷ್ಟಪಡುತ್ತೇನೆ” ಎಂದು ಕಣ್ಣೀರು ಹಾಕುತ್ತಾ ತಮ್ಮ ನಿಲುವನ್ನು ತಿಳಿಸಿದ್ದಾರೆ.

advertisement

ಇದಕ್ಕೆ ಇತರೆ ಸ್ಪರ್ಧಿಗಳು ಕೂಡ ಅಚ್ಚರಿಗೊಳಗಾಗಿದ್ದು ಆಗ ಕಿಚ್ಚ ಸುದೀಪ್ ನಿಮಗೆ ಬಂದಿರುವುದು 34,15,47 ವೋಟುಗಳು ಎನ್ನುತ್ತಾ ಜನ ವರ್ತೂರು ಸಂತೋಷ್ ಅವರನ್ನು ಎಷ್ಟು ಪ್ರೀತಿ ಮಾಡುತ್ತಾರೆ ಎಂಬುದನ್ನು ಅರ್ಥ ಮಾಡಿಸುವ ಪ್ರಯತ್ನ ಮಾಡಿದಾಗ ಸಂತೋಷ್ ಅವರು ನನಗೆ ಆಗ್ತಾ ಇಲ್ಲ ಅಣ್ಣ ಎಂದು ಕಣ್ಣೀರು ಹಾಕಿದ್ದಾರೆ. ಆ ಸಂದರ್ಭದಲ್ಲಿ ಕಿಚ್ಚ ಸುದೀಪ್(Kiccha Sudeep) ಅವರು ಕೂಡ ಜನಗಳ ವಿರುದ್ಧ ನಾವು ಹೋಗುವುದಕ್ಕಾಗುವುದಿಲ್ಲ ಯೋಚಿಸಿ ಎಂದು ಸಮಯ ಕೊಟ್ಟಾಗ ವರ್ತೂರು ಸಂತೋಷ್ ನನಗೆ ಇಲ್ಲಿ ಇರಲು ಆಗುವುದಿಲ್ಲ ನಾನು ಹೋಗುತ್ತೇನೆ ಎಂದು ಡೋರಿನ ಬಳಿ ಹೋಗುತ್ತಿರುವಾಗ ಇತರೆ ಸ್ಪರ್ಧಿಗಳು ವರ್ತೂರು ಸಂತೋಷ್(Varthur Santhosh) ಅವರ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ.

advertisement

Leave A Reply

Your email address will not be published.