BPL Ration Card : ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಗುಡ್ ನ್ಯೂಸ್, ಆಹಾರ ಇಲಾಖೆಯಿಂದ ಭರ್ಜರಿ ಉಡುಗೊರೆ! ನಿಮ್ಮ ಬಳಿ ರೇಷನ್ ಕಾರ್ಡ್ ಇದ್ದರೆ ಈ ಒಂದು ಕೆಲಸ ಮಾಡಿ ಸಾಕು!!

BPL Ration Card : ರಾಷ್ಟ್ರೀಯ ಆಹಾರ ಹಕ್ಕು ಕಾಯ್ದೆಯ ಅಡಿ ಮಿತಿಯನ್ನು ಮೀರಿದ ಲಕ್ಷಕ್ಕೂ ಅಧಿಕ ಬಿಪಿಎಲ್ ಕಾರ್ಡ್ ಗಳನ್ನು ರದ್ದು ಮಾಡಲಾಗಿತ್ತು, ತಿಂಗಳುಗಳು ಕಳೆದರೂ ಕೂಡ ಹೊಸ ಬಿಪಿಎಲ್ ಕಾರ್ಡಿಗೆ ಅರ್ಜಿ ಸಲ್ಲಿಸುವಂತಹ ಅವಕಾಶವನ್ನು ಆರೋಗ್ಯ ಇಲಾಖೆ ನೀಡಿರಲಿಲ್ಲ. ಸರ್ಕಾರವು ಗೃಹಲಕ್ಷ್ಮಿಯಂತಹ ಯೋಜನೆಗಳನ್ನು(Gruha Lakshmi Yojane) ಜಾರಿಗೊಳಿಸಿದ ಸಂದರ್ಭದಲ್ಲಿ ಕಾರ್ಡುಗಳನ್ನು ರದ್ದು ಮಾಡಿದ್ದು ಜನರ ಆಕ್ರೋಶಕ್ಕೆ ಕಾರಣವಾಗಿತ್ತು. 

ಇದರ ನಡುವೆ ಪಡಿತರ ಚೀಟಿಯಲ್ಲಿ ಪುರುಷ ಮುಖ್ಯಸ್ಥರ ಹೆಸರಿದ್ದರೆ ಅದರಿಂದ ಮನೆಯ ಯಜಮಾನಿ ಸರ್ಕಾರದ (Governament) ಸೌಲಭ್ಯಗಳಿಂದ ವಂಚಿತರಾಗುತ್ತಾರೆ ಎಂಬ ಕಾರಣಕ್ಕೆ ಮನೆಯ ಮುಖ್ಯಸ್ಥರ ಹೆಸರು ಬದಲಾವಣೆಯನ್ನು ಸೆಪ್ಟೆಂಬರ್ ಒಂದರಿಂದ ಸೆಪ್ಟೆಂಬರ್ 11ನೇ ತಾರೀಖಿನವರೆಗೂ ಗಡುವು ನೀಡಿ ಬದಲಿಸಿಕೊಳ್ಳುವಂತೆ ಸರ್ಕಾರ ತಿಳಿಸಿತು. ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ದೊರಕುವಂತಹ 2,000 ಹಣದ ಪ್ರಯೋಜನವನ್ನು ಪಡೆದುಕೊಳ್ಳಬೇಕಾದರೆ ಮನೆಯ ಪಡಿತರ ಚೀಟಿಯಲ್ಲಿ ಕಡ್ಡಾಯವಾಗಿ ಮಹಿಳೆಯರ ಹೆಸರಿರಬೇಕಿತ್ತು,

ಹೀಗೆ ರಾಜ್ಯದ ಶೇಕಡಾ 7 ಲಕ್ಷಕ್ಕೂ ಅಧಿಕ ಬಿಪಿಎಲ್ ಕಾರ್ಡ್ ನಲ್ಲಿ ಪುರುಷ ಮುಖ್ಯಸ್ಥರ ಹೆಸರಿದ್ದ ಕಾರಣ ಅದನ್ನು ಬದಲಿಸಿಕೊಂಡ ನಂತರ ಮತ್ತೆ ಅರ್ಜಿ ಸಲ್ಲಿಸುವಂತೆ ಸರ್ಕಾರ ತಿಳಿಸಿ ಕಾಲವಕಾಶ ನೀಡಿತ್ತು. ಈ ಕಾರಣದಿಂದ ರದ್ದಾದಂತಹ ಬಿಪಿಎಲ್ ಕಾರ್ಡ್ಗಳನ್ನು(BPL Card) ಮರು ಅಪ್ಲೈ ಮಾಡಲು ಅವಕಾಶ ನೀಡಿರಲಿಲ್ಲ. ಅದರಿಂದ ಆಹಾರ ಇಲಾಖೆಯು ಗುಡ್ ನ್ಯೂಸ್ ಒಂದನ್ನು ನೀಡಿದ್ದು.(ಇದನ್ನು ಓದಿ)Reliance Jio : ಗ್ರಾಹಕರಿಗೆ ಬಂಪರ್ ಆಫರ್ ನೀಡಿದ ಜಿಯೋ ಸಂಸ್ಥೆ, ನಿಮ್ಮ ಬಳಿ ಏನಾದರೂ ಜಿಯೋ ಸಿಮ್ ಇದ್ದರೆ ಖಂಡಿತ ಈ ಪ್ಲಾನ್ ಗೆ ಫಿದಾ ಆಗಿ ಹೋಗ್ತೀರಾ! 

ಅರ್ಜಿ ಸಲ್ಲಿಕೆ ಆಗಿರುವ ಮೂರು ಲಕ್ಷ ಬಿಪಿಎಲ್ ಕಾರ್ಡ್ ಅರ್ಜಿಗಳಲ್ಲಿ ಶೇ.75 ಕಾರ್ಡ್ಗಳ ದೃಡೀಕರಣವು ಪೂರ್ಣಗೊಂಡಿದ್ದು, ಸದ್ಯದಲ್ಲೇ ಈ ಎಲ್ಲಾ ಕಾಡುಗಳನ್ನು ವಿತರಣೆ ಮಾಡಲಾಗುವುದು. ಹೀಗೆ ಈ ಎಲ್ಲಾ ಕಾರ್ಡ್ಗಳನ್ನು ವಿತರಿಸಿದ ಬಳಿಕ ಹೊಸದಾಗಿ ಅರ್ಜಿ ಹಾಕುವವರಿಗೆ ಅನುವು ಮಾಡಿಕೊಡುತ್ತಾರೆ. ಇದರ ಜೊತೆಗೆ ಮೃತಪಟ್ಟವರ ಹೆಸರನ್ನು ಡಿಲೀಟ್ ಮಾಡುವ ಕಾರ್ಯ ಹಾಗೂ ಆಹಾರ ಇಲಾಖೆ ಕಾಯ್ದೆಯ ನಿಯಮವನ್ನು ಉಲ್ಲಂಘಿಸಿ ಬಳಸುತ್ತಿರುವವರನ್ನು ಪತ್ತೆ ಮಾಡುವ ಕೆಲಸವನ್ನು ಮಾಡಲಿದ್ದಾರಂತೆ.

BPL Ration Card
Image Credit to Original Source

ಹೀಗೆ ಕಾರ್ಡ್ ನಲ್ಲಿರುವ ದಿನಾಂಕ ಮಿತಿಮೀರಿದ (date expiry) ಕಾರಣ 5 ಲಕ್ಷಕ್ಕೂ ಅಧಿಕ ಪಡಿತರ ಚೀಟಿಯನ್ನು ಆರೋಗ್ಯ ಇಲಾಖೆಯವರು ರದ್ದು ಮಾಡಿದರು. ಇದರಿಂದಾಗಿ ಜನರು ಯೋಜನೆಗಳ ಫಲವನ್ನು ಪಡೆದುಕೊಳ್ಳಲಾಗದೆ ರೋಸಿ ಹೋಗಿದ್ದರು, ಅಂತವರಿಗಾಗಿ ಇಲಾಖೆ ಸದ್ಯ ಜರೂರಾದ ಕ್ರಮವನ್ನು ತೆಗೆದುಕೊಳ್ಳುತ್ತಿದ್ದು,  (BPL Ration Card) ಕೆಲವೇ ಕೆಲವು ದಿನಗಳಲ್ಲಿ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವವರ ಕೈಯಲ್ಲಿ ಮಹಿಳಾ ಮುಖ್ಯಸ್ಥರು ಹೆಸರಿರುವಂತಹ ಬಿಪಿಎಲ್ ಕಾರ್ಡ್ ದೊರಕುವುದು ಖಂಡಿತ ಎಂಬ ಭರವಸೆಯನ್ನು ಆರೋಗ್ಯ ಇಲಾಖೆ ನೀಡುವ ಮೂಲಕ ತಮ್ಮ ರೇಷನ್ ಕಾರ್ಡನ್ನು ಎದುರು ನೋಡುತ್ತಿದ್ದವರಿಗೆ ಸಿಹಿ ಸುದ್ದಿಯನ್ನು ತಿಳಿಸಿದೆ.

Public News

Leave a Reply

Your email address will not be published. Required fields are marked *