ಸಿನಿಮಾ ರಂಗದಲ್ಲಿ ಇರುವರು ಏನೇ ಮಾಡಿದರೂ ಸುದ್ದಿಯಾಗುತ್ತೆ. ಅವರ ವೈಯಕ್ತಿಕ ಜೀವನದ ಬಗ್ಗೆ ಎಂದು ಜನರಿಗೆ ಕುತೂಹಲ ತುಸು ಜಾಸ್ತಿಯೇ ಎನ್ನಬಹುದು. ಈ ಬಾರಿ ತಮಿಳು ಕಿರುತೆರೆ ಲೋಕ ಕಣ್ಣು ನೆಟ್ಟಿದ್ದು ರವೀಂದರ್ ಹಾಗೂ ಮಹಾಲಕ್ಷ್ಮಿ ಜೋಡಿಯ ಮೇಲೆ. ಕಳೆದ ಸಪ್ಟೆಂಬರ್ ನಲ್ಲಿ ಮದುವೆಯಾದ ಮಹಾಲಕ್ಷ್ಮಿ ಹಾಗೂ ರವೀಂದ್ರ ಜೋಡಿಯನ್ನ ಮಿಸ್ ಜೋಡಿ ಎಂದು ಮಾಡಲಾಗಿದೆ. ಆದರೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ರವೀಂದರ್ ಮಾತ್ರ ತಮ್ಮ ಹೊಸ ಪತ್ನಿಯ ಜೊತೆ ಸುಖವಾಗಿ ಕಾಲ ಕಳೆಯುತ್ತಿದ್ದಾರೆ.
ಹೌದು, ತಮಿಳು ಧಾರಾವಾಹಿ ನಿರ್ಮಾಪಕ ರವೀಂದ್ರ ಹಾಗೂ ಧಾರಾವಾಹಿಯ ನಟಿ ಹಾಗೂ ನಿರೂಪಕಿ ಆಗಿರುವ ಮಹಾಲಕ್ಷ್ಮಿ ಅವರ ಮದುವೆ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದು ನಿಮಗೂ ಗೊತ್ತಿರಬಹುದು. ತಮಿಳಿನ ಧಾರಾವಾಹಿಯನ್ನು ನಿರ್ಮಿಸುತ್ತಿದ್ದ ರವೀಂದರ್ ಅವರು ಅದೇ ಧಾರಾವಾಹಿಯಲ್ಲಿ ನಟಿಸುತ್ತಿದ್ದ ಮಹಾಲಕ್ಷ್ಮಿ ಅವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ.
ಇನ್ನು ರವೀಂದರ್ ಅವರು ’ತೂಕ’ದ ವ್ಯಕ್ತಿ ಅವರನ್ನು ನೋಡಿ ಇಷ್ಟು ಸುಂದರವಾಗಿರುವ ಮಹಾಲಕ್ಷ್ಮಿ ಇಂಥವರನ್ನ ಮದುವೆಯಾಗಿದ್ದು ಯಾಕೆ ಅಂತ ಜನ ಪ್ರಶ್ನಿಸಿದ್ರು. ಇನ್ನು ಸಾಕಷ್ಟು ಜನ ದುಡ್ಡಿಗಾಗಿಯೇ ಮಹಾಲಕ್ಷ್ಮಿ ರವೀಂದರ್ ಅವರನ್ನು ಮದುವೆಯಾಗಿದ್ದಾರೆ ಅಂತ ಟ್ರೊಲ್ ಮಾಡಿದ್ದಾರೆ. ಆದರೆ ಟ್ರೋಲಿಗರ ಮಾತಿಗೆಲ್ಲ ತಲೆ ಕೆಡಿಸಿಕೊಳ್ಳದ ಈ ಜೋಡಿ ತಮ್ಮ ಮದುವೆಯ ಮಧುರ ಕ್ಷಣಗಳನ್ನು ಎಂಜಾಯ್ ಮಾಡುತ್ತಿದೆ.
ರವೀಂದರ್ ಅವರು ತಮ್ಮ ಮದುವೆಯಾದ ನಂತರ ತುಸು ಹೆಚ್ಚು ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿದ್ದಾರೆ ಅಂತ ಹೇಳಬಹುದು. ಈಗಾಗಲೇ ತಮ್ಮ ಮದುವೆಯ ನಂತರದ ಸುಮಧುರ ಕ್ಷಣಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ರವೀಂದರ್. ಮದುವೆಯಾಗುತ್ತಿದ್ದ ಹಾಗೆ ರವೀಂದರ್ ಅವರು ಮಹಾಲಕ್ಷ್ಮಿ ಅವರನ್ನ ಕರೆದುಕೊಂಡು ಸಾಕಷ್ಟು ದೇವಾಲಯಗಳನ್ನು ಸುತ್ತಿದ್ದಾರೆ.
ಗಂಡ ಹೆಂಡತಿ ದೃಷ್ಟಿಯಾಗಬಾರದು ಅಂತ ದೇವರಿಗೆ ಕೈ ಮುಗಿಯುತ್ತಿದ್ದಾರೆ ಎಂದು ಕಮೆಂಟ್ ಮಾಡಲಾಗಿತ್ತು. ಇನ್ನು ತಾವು ಎಲ್ಲೇ ಹೋದರು ಅದರ ಫೋಟೋಗಳನ್ನ ತೆಗೆದು ರವೀಂದರ್ ತಮ್ಮ ಸಾಮಾಜಿಕ ಖಾತೆಯಲ್ಲಿ ಹಂಚಿಕೊಳ್ಳುತ್ತಾರೆ. ಮದುವೆಯಾಗುತ್ತಿದ್ದ ಹಾಗೆ ದೇವಸ್ಥಾನಕ್ಕೂ ಭೇಟಿ ನೀಡಿದ ನಂತರ ಮಹಾಲಕ್ಷ್ಮಿ ಹಾಗೂ ರವೀಂದರ್ ಜೋಡಿ ಅಮೆರಿಕಾಕ್ಕೂ ಹಾರಿತು ನಂತರ ಹಿಂತಿರುಗಿದ ಮಹಾಲಕ್ಷ್ಮಿ ಶೂಟಿಂಗ್ ನಲ್ಲಿ ಮತ್ತೆ ಬ್ಯುಸಿಯಾಗಿದ್ದಾರೆ.
ಅಂದ ಹಾಗೆ ಹೆಂಡತಿ ಶೂಟಿಂಗ್ ನಲ್ಲಿ ಬ್ಯುಸಿ ಆಗಿದ್ರೆ ನನಗೆ ಊಟ ಕೊಡುವ ಕೆಲಸ ಅಂತ ರವೀಂದರ್ ತಮಾಷೆಯಾಗಿ ಇನ್ಸ್ಟಾಗ್ರಾಮ್ ನಲ್ಲಿಯೂ ಕೂಡ ಬರೆದುಕೊಂಡಿದ್ದರು. ಇದೀಗ ಸಿಕ್ಕಾಪಟ್ಟೆ ಟ್ರೆಂಡ್ ಆಗಿರುವ ರವೀಂದ್ರ ಹಾಗೂ ಮಹಾಲಕ್ಷ್ಮಿ ಜೋಡಿ ಶಾಕಿಂಗ್ ಸುದ್ದಿ ಎಂದು ಕೊಟ್ಟಿದೆ. ಹೌದು ಇತ್ತೀಚಿಗೆ ಸಂದರ್ಶನ ಒಂದರಲ್ಲಿ ಮಾತನಾಡಿದ ರವೀಂದರ್ ಅವರು ತಮ್ಮ ಮುಂದಿನ ನಡೆಯ ಬಗ್ಗೆ ಸಣ್ಣ ಹಿಂಟ್ ಕೊಟ್ಟಿದ್ದಾರೆ. ಇದು ತಮಿಳು ಚಿತ್ರರಂಗದಲ್ಲಿ ಸಾಕಷ್ಟು ಸೆನ್ಸೇಷನ್ ಕ್ರಿಯೇಟ್ ಮಾಡಿದೆ.
ಹೌದು, ಕೂಡ ಬಿಗ್ ಬಾಸ್ ಸೀಸನ್ 6 ಇನ್ನೇನು ಆರಂಭವಾಗಲಿದೆ. ಮದುವೆಯಾಗಿ ಈ ಜೋಡಿ ಇನ್ನು ಹಲವು ಸ್ಥಳಗಳಿಗೆ ಭೇಟಿ ನೀಡುವುದರ ಬದಲಿಗೆ ನೇರವಾಗಿ ಬಿಗ್ ಬಾಸ್ ಮನೆಗೆ ಹೋಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಬಿಗ್ ಬಾಸ್ ಮನೆಯಲ್ಲಿ ಈ ಜೋಡಿ ಹೇಗಿರುತ್ತಾರೆ ಅಂತ ನೋಡೋದಕ್ಕೆ ಅಭಿಮಾನಿಗಳು ಕಾತುರರಾಗಿದ್ದಾರಂತೆ. ವಿ ಆರ್ ವೇಟಿಂಗ್ ಅಂತ ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ.
ರವೀಂದರ್ ಹಾಗೂ ಮಹಾಲಕ್ಷ್ಮಿ ಇಬ್ಬರಿಗೂ ಇದು ಎರಡನೇ ಮದುವೆ. ಹಾಗಾಗಿ ಈ ಮದುವೆಯಲ್ಲಿ ಇವರಿಬ್ಬರೂ ಬಹಳ ಮುತುವರ್ಜಿಯಿಂದ ಸಂಸಾರ ನಡೆಸಲು ಮುಂದಾದಂತೆ ಕಾಣುತ್ತಿದೆ. ಒಟ್ಟಿನಲ್ಲಿ ಟ್ರೆಂಡಿಂಗ್ ಜೋಡಿ ಬಿಗ್ ಬಾಸ್ ಮನೆಯಲ್ಲೂ ಕಾಣುವುದಕ್ಕೆ ಸಿಗುತ್ತಾ ಎನ್ನುವುದೇ ಎಲ್ಲರ ಪ್ರಶ್ನೆ.