World Ev Day : ಸ್ನೇಹಿತರೆ, ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳು ಜನರನ್ನು ಅತ್ಯಾಕರ್ಷಿಸುತ್ತಿದ್ದು, ಎಲೆಕ್ಟ್ರಿಕ್ ಬೈಕ್ ಹಾಗೂ ಎಲೆಕ್ಟ್ರಿಕ್ ಕಾರುಗಳು ಸಾಮಾನ್ಯ ಡೀಸೆಲ್ ಕಾರುಗಳಿಗೆ ಸೆಡ್ಡುವಂತಹ ಸ್ಪರ್ಧೆ ನೀಡುತ್ತ ಮಾರ್ಕೆಟ್ ನಲ್ಲಿ ಬಹು ಬೇಡಿಕೆಯನ್ನು ಪಡೆದುಕೊಳ್ಳುತ್ತಿದೆ. ಹೀಗಿರುವಾಗ ನಾವಿವತ್ತು ದೇಶದಲ್ಲಿ ತಮ್ಮ ಅತ್ಯಾಕರ್ಷಕ ಫೀಚರ್ಸ್ ಹಾಗೂ ಬೆಲೆಯಿಂದಾಗಿ ಅತಿ ಹೆಚ್ಚು ಖರೀದಿಯಾಗಿರುವಂತಹ ಕಾರುಗಳು ಯಾವ್ಯಾವು?
ಅದರ ಬೆಲೆ ಎಷ್ಟು? ಎಂಬ ಸಂಪೂರ್ಣ ವಿವರವನ್ನು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದು, ನಿಮಗೂ ಕೂಡ ಈ ಒಂದು ಆಸಕ್ತಿಕರ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಗೆಳೆಯರೇ ಭಾರತ ಸೇರಿದಂತೆ ಇತರ ದೇಶಗಳಲ್ಲಿಯೂ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲಾಗುತ್ತಿದೆ.
ಈ ಕಾರಣದಿಂದ ಸೆಪ್ಟೆಂಬರ್ 9 ರಂದು ವಿಶ್ವ ಇವಿ ದಿನವನ್ನು (World Ev day) ಕೂಡ ಬಹಳ ಅದ್ದೂರಿಯಾಗಿ ಆಚರಿಸಲಾಗಿತ್ತು. ಇದರ ಬೆನ್ನೆಲೆ ಭಾರತದಲ್ಲಿ ಲಭ್ಯವಿರುವಂತಹ ಅತಿ ಕಡಿಮೆ ಎಲೆಕ್ಟ್ರಿಕ್ ಕಾರ್ ಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಅದರ ಅನ್ವಯ ಟಾಟಾ ಟಿಯಾಗೋ ಇವಿ(Tata Tiago EV) ಕಾರು ಮಾರುಕಟ್ಟೆಯಲ್ಲಿ ಇತರ ಕಾರುಗಳಿಗೆ ಸೆಡ್ಡು ಹೊಡೆಯುವಂತಹ ಫೀಚರ್ಸ್ಗಳನ್ನು ಹೊಂದಿದ್ದು ಅತಿ ಹೆಚ್ಚು ಖರೀದಿಸಲ್ಪಟ್ಟಂತಹ ಕಾರು ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.
ಹೌದು ಗೆಳೆಯರೇ ಎರಡು ಬ್ಯಾಟರಿ ಆಯ್ಕೆಯನ್ನು ಹೊಂದಿರುವ ಈ ಕಾರಿನಲ್ಲಿ 19.2 kWh ಬ್ಯಾಟರಿ ಪ್ಯಾಕ್ ಇದ್ದು, 61 PS ಗರಿಷ್ಠ ಪವರ್ ಹಾಗೂ 110 Nm ಪೀಕ್ ಟಾರ್ಕ್ ಅನ್ನು ಕೂಡ ಉತ್ಪಾದಿಸುತ್ತದೆ. ಅಲ್ಲದೆ ಈ ಕಾರನ್ನು ಒಮ್ಮೆ ಸಂಪೂರ್ಣ ಜಾರ್ಜ್ ಮಾಡಿದರೆ ಬರೋಬರಿ 250 ಕಿಲೋ ಮೀಟರ್ ರೇಂಜ್ ನೀಡುತ್ತದೆ. ಜೊತೆಗೆ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಆಪಲ್ ಕಾರ್ ಪ್ಲೇ, ನಾಲ್ಕು ಸ್ಪೀಕರ್ ಸೌಂಡ್ ಸಿಸ್ಟಮ್ ಗಳನ್ನು ಕೂಡ ಅಳವಡಿಸಲಾಗಿದೆ. ಇಷ್ಟೆಲ್ಲಾ ಅತ್ಯಾಕರ್ಷಕ ಫೀಚರ್ಸ್ ಗಳನ್ನು ಹೊಂದಿರುವ ಟಾಟಾ ಟಿಯಾಗೋ ಇವಿ(Tata Tiago EV) ಕೇವಲ 8.69 ಲಕ್ಷದಿಂದ 12.04 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಲಭ್ಯವಿದೆ.
ಟಾಟಾ ಟಿಗೂರ್ ಇವಿ(Tata Tigor EV) 26 ಕಿಲೋ ವ್ಯಾಟ್ ಸಾಮರ್ಥ್ಯದ ಬ್ಯಾಟರಿ ಪ್ಯಾಕನ್ನು ಹೊಂದಿರುವ ಈ ಒಂದು ಕಾರು ಕೇವಲ 12.49 ಲಕ್ಷದಿಂದ 13.75 ಲಕ್ಷ ರೂಪಾಯಿಗಳಿಗೆ ದೊರಕುತ್ತಿದ್ದು, ಇದರಲ್ಲಿರುವಂತಹ ಅತ್ಯಾಕರ್ಷಕ ಫೀಚರ್ಸ್ ಗಳಿಗೆ ಮನಸೋತು ಇದನ್ನು ಖರೀದಿಸಲು ಜನ ಮುಗಿಬಿದ್ದಿದ್ದಾರೆ. ಹೌದು ಗೆಳೆಯರೇ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿದ್ದು, ಸುರಕ್ಷತಾ ದೃಷ್ಟಿಯಿಂದ ಎರಡೆರಡು ಏರ್ ಬ್ಯಾಗ್ ಗಳನ್ನು ಅಳವಡಿಕೆ ಮಾಡಲಾಗಿದೆ.(ಇದನ್ನು ಓದಿ)Gold Rate : ಚಿನ್ನ ಪ್ರಿಯರಿಗೆ ಗುಡ್ ನ್ಯೂಸ್! ಭಾರತದಲ್ಲಿ ಚಿನ್ನದ ಬೆಲೆಯು ತೀರ ಕುಸಿತ, ನೀವೇನಾದರೂ ಚಿನ್ನ ಖರೀದಿಸುವ ಯೋಜನೆಯಲ್ಲಿ ಇದ್ದೀರಾ? ಹಾಗಾದ್ರೆ ಚಿನ್ನ ಬೆಳ್ಳಿ ಬೆಲೆಯ ವಿವರ ಇಲ್ಲಿದೆ ನೋಡಿ!
ಎಂಜಿ ಕಾಮೆಟ್ ಟಿವಿ(MG Comet Tv) ಭಾರತದಲ್ಲಿ ಕೇವಲ 7.98 ಲಕ್ಷ ರೂಪಾಯಿಗಳಿಂದ 9.98 ಲಕ್ಷ ರೂಪಾಯಿಗಳಿಗೆ ಲಭ್ಯವಿರುವಂತಹ ಈ ಕಾರು ಬರೋಬ್ಬರಿ 17.3 kWh ಬ್ಯಾಟರಿ ಬ್ಯಾಕ್ ಅಪನ್ನು ಹೊಂದಿದ್ದು, ಒಮ್ಮೆ ಸಂಪೂರ್ಣ ಚಾರ್ಜ್ ಮಾಡಿದರೆ ಬರೋಬ್ಬರಿ 230 km ರೇಂಜ್ ನೀಡುತ್ತದೆ. ಈ ಪುಟ್ಟ ಕಾರಿನಲ್ಲಿ ಸಾಕಷ್ಟು ಆಧುನಿಕ ಫೀಚರ್ಸ್ಗಳನ್ನು ಅಳವಡಿಕೆ ಮಾಡಲಾಗಿದ್ದು, ಇನ್ಫೋಟೈನ್ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ ಹೀಗೆ ಮುಂತಾದ ಗ್ರಾಹಕರಿಗೆ ಇಷ್ಟವಾಗುವಂತಹ ವೈಶಿಷ್ಟ್ಯಗಳನ್ನು ಅಳವಡಿಸಿ ಜನರನ್ನು ಆಕರ್ಷಿಸಿದ್ದಾರೆ.

ಸಿಟ್ರಸ್ ಈಸಿ 3(Citrus eC3) ಕೇವಲ 11.50 ಲಕ್ಷದಿಂದ 12.43 ಲಕ್ಷ ಬೆಲೆಗೆ ದೊರಕುತ್ತಿರುವಂತಹ ಈ ಕಾರನಲ್ಲಿ ಹತ್ತಾರು ವೈಶಿಷ್ಟ್ಯಗಳನ್ನು ಅಳವಡಿಸಲಾಗಿದ್ದು 29.2 kWh ಬ್ಯಾಟರಿ ಪ್ಯಾಕ್ ಹಾಗೂ ಒಮ್ಮೆ ಸಂಪೂರ್ಣ ಚಾರ್ಜ್ ಮಾಡಿದರೆ ಬರೋಬ್ಬರಿ 320 ಕಿಲೋಮೀಟರ್ ರೆಂಜ್ ಕೊಡುವ ಸಾಮರ್ಥ್ಯವನ್ನು ಎಲೆಕ್ಟ್ರಿಕ್ ಕಾರು ಹೊಂದಿದ್ದು, 143 Nm ಪೀಕ್ ಟಾರ್ಕ್ನ್ನು ಸಹ ಉತ್ಪಾದಿಸುತ್ತದೆ. ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಮ್ಯಾನುವಲ್ ಎಸಿ, ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಹಾಗೂ ಏರ್ ಬ್ಯಾಗ್ಗಳಂತಹ ಅತ್ಯಾಕರ್ಷಕ ಆಧುನಿಕ ವೈಶಿಷ್ಟ್ಯವನ್ನು ಅಳವಡಿಸಲಾಗಿದೆ.