ಹೊಸ ಔಟ್ ಫಿಟ್ ಉಡುಗೆಯಲ್ಲಿ ಕ್ಯಾಮೆರಾಗೆ ಪೋಸ್ ನೀಡಿದ ಕರುನಾಡ ಅತ್ತಿಗೆ ನಟಿ ಮೇಘನಾ ರಾಜ್, ವಿಡಿಯೋ!!

ನಟಿ ಮೇಘನಾ ರಾಜ್ (Sandalwood Actress Meghana Raj) ಕನ್ನಡ ಹಾಗೂ ಮಲಯಾಳಂ ಸಿನಿಮಾರಂಗದ ಬಹುಬೇಡಿಕೆಯ ನಟಿ. ಹಿರಿಯ ನಟ ಸುಂದರ್ ರಾಜ್ ಹಾಗೂ ಪ್ರಮೀಳಾ ಜೋಷಾಯಿ ದಂಪತಿಗಳ ಮುದ್ದಿನ ಸುಪುತ್ರಿ, ದಿ ಚಿರಂಜೀವಿ ಸರ್ಜಾರವರ ಮಡದಿ. ಬದುಕಿನಲ್ಲಿ ನಡೆದ ಕಹಿ ಘಟನೆಗಳನ್ನು ಮರೆತು ಇದೀಗ ಮತ್ತೆ ಸಿನಿಲೋಕದಲ್ಲಿ ಸೆಕೇಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ. ಹೀಗಾಗಿ ನಟಿ ಮೇಘನಾ ರಾಜ್ ಅವರನ್ನು ತೆರೆ ಮೇಲೆ ನೋಡಬೇಕೆನ್ನುವ ಕಾತುರ ಪ್ರೇಕ್ಷಕ ವರ್ಗಕ್ಕೆ ಇದೆ.

ತತ್ಸಮ ತದ್ಭವ (Tatsama Tadbhava)ದ ಮೂಲಕ ಬಣ್ಣದ ಲೋಕಕ್ಕೆ ನಟಿ ಮೇಘನಾ ರಾಜ್ ಮತ್ತೆ ಬಣ್ಣದ ಲೋಕಕ್ಕೆ ಮರಳುತ್ತಿದ್ದೂ ಈ ಸಿನಿಮಾದ ಬಗ್ಗೆ ಬಹಳಷ್ಟು ಕಾತುರವಿದೆ. ಇದೀಗ ನಟಿ ಮೇಘನಾ ರಾಜ್ ಅವರು ಹೊಸ ಔಟ್ ಫಿಟ್ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ. ಬ್ಲಾಕ್ ಕಲರ್ ಜೀನ್ಸ್ ಹಾಗೂ ವೇಲ್ವೆಟ್ ಕಲರ್ ಶರ್ಟ್ ನಲ್ಲಿ ಕ್ಯಾಮೆರಾಗೆ ವಿವಿಧ ರೀತಿಯಲ್ಲಿ ಪೋಸ್ ನೀಡಿದ್ದಾರೆ. ಈ ಫೋಟೋವನ್ನು ಪಿಕೆ ಸ್ಟುಡಿಯೋ ಫೋಟೋಗ್ರಾಫಿ ಎನ್ನುವ ಇನ್ಸ್ಟಾಗ್ರಾಮ್ ಅಕೌಂಟ್ ನಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. ನಟಿಯ ಈ ಹೊಸ ಲುಕ್ ಗೆ ಮೆಚ್ಚುಗೆಯ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

ತತ್ಸಮ ತದ್ಬವ’ (Tatsama Tadbhava) ಸಿನಿಮಾ ಮೂಲಕ ಮತ್ತೆ ಕಮ್ ಬ್ಯಾಕ್ ಮಾಡಿದ್ದ ಮೇಘನಾ ರಾಜ್ ಅವರ ಈ ಸಿನಿಮಾದ ಚಿತ್ರೀಕರಣವು ಕಂಪ್ಲೀಟ್ ಆಗಿದೆ. ಈ ಹಿಂದೆ ನಟಿ ಮೇಘನಾ ರಾಜ್ ಹುಟ್ಟುಹಬ್ಬಕ್ಕಾಗಿ ಚಿತ್ರತಂಡ ಅವರ ಪೋಸ್ಟರ್ (Poster)ಬಿಡುಗಡೆ ಮಾಡಿತ್ತು. ತದನಂತರದಲ್ಲಿ ತತ್ಸಮ ತದ್ಭವ ಸಿನಿಮಾ ಟ್ರೈಲರ್ (Trailer) ಬಿಡುಗಡೆ ಆಗಿದೆ. ಈ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದ ನಟಿ ಮೇಘನಾ ರಾಜ್ ಅವರು ಟ್ರೈಲರ್ ನೋಡಿ ಹಾರೈಸಿ ಎಂದು ಬರೆದುಕೊಂಡಿದ್ದರು. ಸಿನಿಮಾ ಟ್ರೈಲರ್ ಕೂಡ ಈ ಬಗೆಗಿನ ನಿರೀಕ್ಷೆಯನ್ನು ಡಬಲ್ ಮಾಡಿದೆ.

ಮೇಘನಾ ರಾಜ್ ಕಮ್ ಬ್ಯಾಕ್ ಮಾಡಿರುವ ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್ (Prajwal Devaraj) ಕೂಡ ನಟಿಸಿದ್ದಾರೆ. ಈ ಸಿನಿಮಾದಲ್ಲಿ ನಟಿಸುವ ಬಗ್ಗೆ ಖುಷಿ ವ್ಯಕ್ತಪಡಿಸಿದ್ದ ನಟ ಪ್ರಜ್ವಲ್ ದೇವರಾಜ್, ‘ನನಗೆ ನಿರ್ದೇಶಕರು ಕಥೆ ಹೇಳಿದಾಗ ಬಹಳ ಇಷ್ಟವಾಯಿತು. ಕಥೆಯಲ್ಲಿ ಒಂದು ಮುಖ್ಯಪಾತ್ರ ಬರುತ್ತದೆ. ಈ ಪಾತ್ರ ಯಾರು ಮಾಡುತ್ತಿದ್ದಾರೆ ಎಂದು ಕೇಳಿದೆ. ಅವರು ನೀವೇ ಮಾಡುತ್ತಿದ್ದೀರ ಎಂದರು. ಸ್ನೇಹಿತರ ಸಿನಿಮಾ‌ದಲ್ಲಿ ಅಭಿನಯಿಸಿದ ಖುಷಿಯಿದೆ’ ಎಂದು ಹೇಳಿಕೊಂಡಿದ್ದರು.

ತತ್ಸಮ ತದ್ಬವ ಸಿನಿಮಾವು ಇದೊಂದು ಮಹಿಳಾ ಪ್ರಧಾನ ಸಿನಿಮಾವಾಗಿದ್ದು, ಇದರಲ್ಲಿ ಮೇಘನಾ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ತೆರೆ ಮೇಲೆ ಹಿರಿಯ ನಟಿ ಶ್ರುತಿ (Shruti) ಕೂಡ ಮನೋವೈದ್ಯರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾಕ್ಕೆ ಪನ್ನಗಾಭರಣ (Pannagabharana) ಹಾಗೂ ಸ್ಫೂರ್ತಿ ಅನಿಲ್‌ (Spoorthi Anil) ಅವರು ಬಂಡವಾಳ ಸುರಿದಿದ್ದಾರೆ. ವಿಶಾಲ್‌ ಆತ್ರೇಯ (Vishal Atreya) ಅವರು ಸಿನಿಮಾಕ್ಕೆ ಆಕ್ಷನ್‌ ಕಟ್‌ ಹೇಳುವ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

Public News

Leave a Reply

Your email address will not be published. Required fields are marked *