7 Hot News
A Karnataka Times Affiliate Kannada News Portal

ಫೇಮಸ್ ಕಿರುತೆರೆ ನಟಿ ರೂಪಾ ಅವರ ಸುಂದರ ಕುಟುಂಬ ಹೇಗಿದೆ ಗೊತ್ತಾ? ಪತಿ ಮತ್ತು ಮಗುವಿನ ಜೊತೆ ಮುದ್ದಾದ ಕ್ಷಣಗಳು ನೋಡಿ!!

advertisement

ಕನ್ನಡ ತೆಲುಗು ಹಾಗೂ ತಮಿಳು ಸೇರಿದಂತೆ ದಕ್ಷಿಣ ಭಾರತದ ಬಹುತೇಕ ಸೀರಿಯಲ್ ಗಳಲ್ಲಿ ನಾಯಕ ನಟಿಯಾಗಿ ಕಾಣಿಸಿಕೊಳ್ಳುವ ಮೂಲಕ ಕಿರುತೆರೆ ಪ್ರೇಕ್ಷಕರಿಗೆ ಜಬರ್ದಸ್ತ್ ಎಂಟರ್ಟೈನ್ಮೆಂಟ್ ನೀಡುತ್ತಿದ್ದಂತಹ ನಟಿ ರೂಪ ಅವರನ್ನು ಎಂದಾದರೂ ಮರೆಯಲು ಸಾಧ್ಯವೇ? ಎಂತಹ ಪಾತ್ರ ನೀಡಿದರು ಪಾತ್ರವೇ ತಾವಾಗಿ ಅಭಿನಯಿಸುತ್ತಿದ್ದಂತಹ ರೂಪ ಶ್ರವಣ್ರವರು ಸದ್ಯ ಬಣ್ಣದ ಬದುಕಿನಿಂದ ಕಾಯ್ದುಕೊಂಡಿದ್ದರು ಕೂಡ ಅವರ ಅಭಿಮಾನಿಗಳ ಸಂಖ್ಯೆ ಕಡಿಮೆಯಾಗಿಲ್ಲ.

advertisement

ಮುದ್ದಿನ ಮಗಳಾಗಿ, ಮುಗ್ಧ ಸೊಸೆಯಾಗಿ, ಐತಿಹಾಸಿಕ ಪಾತ್ರಗಳಲ್ಲಿ ಧಾರ್ಮಿಕ ಪಾತ್ರಗಳಲ್ಲಿ ನಟಿಸಿ ನಮ್ಮೆಲ್ಲರನ್ನು ರಂಜಿಸಿದ ರೂಪ(Roopa) ಅವರು ಸದ್ಯ ಧಾರವಾಹಿಗಳಿಂದ ದೂರವಾಗಿ ತಮ್ಮ ವೈಯಕ್ತಿಕ ಬದುಕಿನಲ್ಲಿ ಹೆಚ್ಚು ಸಂತೋಷವಾಗಿದ್ದಾರೆ. ಹೌದು ಸ್ನೇಹಿತರೆ ಸೆಪ್ಟೆಂಬರ್ 29, 1992 ರಂದು ಬೆಂಗಳೂರಿನಲ್ಲಿ ಜನಿಸಿದಂತಹ ರೂಪ(Roopa) ಅವರಿಗೆ ಚಿಕ್ಕಂದಿನಿಂದಲೂ ನಟನೆ ಹಾಗೂ ಲಲಿತ ಕಲೆಗಳಲ್ಲಿ ಬಹಳನೇ ಆಸಕ್ತಿ ಇರುತ್ತದೆ.

advertisement

ಈ ಕಾರಣದಿಂದ ರೂಪ ಪಿಯುಸಿ ಮುಗಿಸಿದ ನಂತರ ಕುಬೇರಪ್ಪ ಅಂಡ್ ಸನ್ಸ್(Kuberappa and sons) ಎಂಬ ಸೀರಿಯಲ್ ನಲ್ಲಿ ನಟಿಸುವಂತಹ ಅವಕಾಶ ದೊರಕುತ್ತದೆ. ಸಿಕ್ಕಂತಹ ಅವಕಾಶವನ್ನು ಬಿಡದೆ ಸದುಪಯೋಗಪಡಿಸಿಕೊಂಡಂತಹ ರೂಪ ಅವರು 2010ರಲ್ಲಿ ಚಿನ್ನ ಕೊಡಲು ಎಂಬ ತೆಲುಗಿನ ಧಾರವಾಹಿಯ ಮೂಲಕ ಟಾಲಿವುಡ್ ಅಂಗಳವನ್ನು ಪ್ರವೇಶಿಸಿದರು.

advertisement

advertisement

advertisement

ಆನಂತರ ಸಾಲು ಸಾಲು ಸೀರಿಯಲ್ ಗಳಲ್ಲಿ ಅಭಿನಯಿಸುತ್ತಾ ಕಿರುತೆರೆಯಲ್ಲಿ ಬಹಳನೇ ಜನಪ್ರಿಯತೆ ಪಡೆದಿದ್ದಂತಹ ರೂಪ(Roopa) 5ನೇ ತಾರೀಕು ಆಗಸ್ಟ್ 2016 ರಂದು ಶ್ರವಣ್ ರೆಡ್ಡಿ (Shravan Reddy) ಎಂಬುವರನ್ನು ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ದಂಪತಿಗಳಿಗೆ ಓರ್ವ ಮುದ್ದಿನ ಮಗಳಿದ್ದು ಆಗಾಗ ತಮ್ಮ ಪತಿ ಹಾಗೂ ಮಗಳ ಜೊತೆಗೆ ಸುಂದರ ಫೋಟೋಗಳನ್ನು ರೂಪ ಶ್ರಮಣ್ ಅವರು ಇನ್ಸ್ಟಾಗ್ರಾಮ್ ಹಾಗೂ ಫೇಸ್ಬುಕ್ ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ವೈರಲ್ ಆಗುತ್ತಿರುತ್ತಾರೆ.

advertisement

advertisement

ಮದುವೆಯಾದ ನಂತರ ಬಣ್ಣದ ಬದುಕಿನಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿ ಇದ್ದಂತಹ ರೂಪ ಅವರಿಗೆ ಕಾಲಕ್ರಮೇಣ ಅವಕಾಶಗಳು ಕಡಿಮೆ ಆದ್ದರಿಂದ ಕೇವಲ ಬೆರಳೆಣಿಕೆಯಷ್ಟು ಧಾರವಾಹಿಗಳಲ್ಲಿ ನಟಿಸುತ್ತಾ ತಮ್ಮ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಈ ಸುಂದರ ಕುಟುಂಬದ ಫೋಟೋಗಳನ್ನು instagram ನ ಹಲವು ಪೇಜ್ ಗಳಲ್ಲಿ ಹಂಚಿಕೊಳ್ಳಲಾಗಿದ್ದು, ಇದನ್ನು ಕಂಡಂತ ನೆಟ್ಟಿಗರು ಸೂಪರ್ ಫ್ಯಾಮಿಲಿ, ನೂರು ಕಾಲ ಹೀಗೆ ಸುಖವಾಗಿ ಬಾಳಿ ಎಂದೆಲ್ಲ ಶುಭ ಹಾರೈಸಿದ್ದಾರೆ.

advertisement

Leave A Reply

Your email address will not be published.