7 Hot News
A Karnataka Times Affiliate Kannada News Portal

ಮುದ್ದು ಮಗಳ ಫೋಟೋ ಹಂಚಿಕೊಂಡ ಪ್ರಣಿತ ಶುಭಾಷ್, ನೀವೇ ಕಣ್ರೀ ಸಂತೂರ್ ಮಮ್ಮಿ ಎಂದ ನೆಟ್ಟಿಗರು!!

advertisement

ಕನ್ನಡ ತಮಿಳು ತೆಲುಗು ಹಾಗು ಮಲಯಾಳಂ ಭಾಷೆಯ ಸಿನಿಮಾಗಳಲ್ಲಿ ಅಭಿನಯಿಸುತ್ತ ಮದುವೆಯಾಗಿ ಒಂದು ಮಗು ಜನಿಸಿದರು ಕೂಡ ತಮ್ಮ ಬೇಡಿಕೆಯನ್ನು ಕಿಂಚಿತ್ತು ಇರಿಸಿಕೊಳ್ಳದ ಪ್ರಣಿತ ಸುಭಾಷ್(Pranitha Subhash) ಇಂದಿಗೂ ಕೂಡ ಸಿನಿಮಾ ರಂಗದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದು, ಯಶಸ್ವಿ ಸಿನಿಮಾಗಳಲ್ಲಿ ಅಭಿನಯಿಸುತ್ತ ತಮ್ಮ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಎಲ್ಲದರ ನಡುವೆ ತಮ್ಮ ವೈಯಕ್ತಿಕ ಬದುಕಿಗೂ ಸಮಯ ನೀಡುವಂತಹ ಪ್ರಣಿತ.

advertisement

ಆಗಾಗ ತಮ್ಮ ಮುದ್ದು ಮಗಳೊಟ್ಟಿಗೆ ಸಮಯ ಕಳೆಯುವಂತಹ ಸುಂದರ ಕ್ಷಣಗಳ ಫೋಟೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಾ ವೈರಲಾಗುತ್ತಿರುತ್ತಾರೆ. ಬಿಡುವು ಸಿಕ್ಕಾಗಲೆಲ್ಲ ಮಗಳ ಜೊತೆಗೆ ಟ್ವಿನಿಂಗ್ ಉಡುಪನ್ನು(twinning dress) ಧರಿಸಿ ಬಹಳ ಮೋಹಕವಾಗಿ ಫೋಟೋಶೂಟ್ ಮಾಡಿಸಿಕೊಂಡು ಫೋಟೋಗಳನ್ನು ತಮ್ಮ ಅನುಯಾಯಿಗಳ ಜೊತೆಗೆ ಪ್ರಣಿತ ಹಂಚಿಕೊಂಡಿದ್ದಾರೆ.

advertisement

2010ರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging star Darshan) ಅವರ ಪೊರ್ಕಿ ಚಿತ್ರದ ಮೂಲಕ ನಾಯಕ ನಟಿಯಾಗಿ ಬಣ್ಣದ ಲೋಕವನ್ನು ಪ್ರವೇಶ ಮಾಡಿದ ಪ್ರಣಿತ ಸುಭಾಷ್(Pranitha Subhash) ಅವರ ಸಿನಿ ಬದುಕು ಅದ್ಭುತ ಯಶಸ್ಸನ್ನು ಪಡೆದುಕೊಳ್ಳುತ್ತದೆ. ನಾನಾ ಭಾಷೆಯಲ್ಲಿ ಅಭಿನಯಿಸಲು ಪ್ರಾರಂಭಿಸಿದಂತಹ ಪ್ರಣಿತ ಸುಭಾಷ್ ಇಂದು ತೆಲುಗಿನಲ್ಲಿ ಹೆಚ್ಚಿನ ಜನ ಮನ್ನಣೆ ಪಡೆದಿದ್ದಾರೆ. ಭಾವ ಎಂಬ ಸಿನಿಮಾದ ಮೂಲಕ ಟಾಲಿವುಡ್ ಅಂಗಳವನ್ನು ಪ್ರವೇಶಿಸಿದ ಪ್ರಣಿತ ಮತ್ತೆಂದು ಹಿಂದಿರುಗಿ ನೋಡಿಯೇ ಇಲ್ಲ.

advertisement

advertisement

ಒಂದು ಮಗುವಾದರೂ ಕೂಡ ತಮ್ಮ ಬೇಡಿಕೆಯನ್ನು ಕಿಂಚಿತ್ತು ಕರಗಿಸಿಕೊಳ್ಳದ ಪ್ರಣಿತ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಳ್ಳುತ್ತಾ ಉತ್ತುಂಗದ ಶಿಖರದಲ್ಲಿರುವಂತಹ ನಟಿ. ಹೀಗೆ ಸಾವಿರಾರು ಸಂಖ್ಯೆಯ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿದಂತಹ ಪ್ರಣಿತ ಸುಭಾಷ್(Pranitha Subhash) ಕ-ರೋನ ಲಾಕ್ಡೌನ್ ಸಮಯದಲ್ಲಿ ಯಾರಿಗೂ ತಿಳಿಸಿದ ಹಾಗೆ ಗುಟ್ಟಾಗಿ ನಿತಿನ್ ರಾಜು ಎಂಬ ಉದ್ಯಮಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಂತಹ ಸುದ್ದಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿತ್ತು.

advertisement

ಆನಂತರ ಅದರ ಹಿಂದಿನ ಕಾರಣವನ್ನು ತಿಳಿಸಿ ಪ್ರಣಿತ ತಮ್ಮ ಸ್ನೇಹಿತರು ಹಾಗು ಅಭಿಮಾನಿಗಳಿಗೆ ಕ್ಷಮೆಯಾಚಿಸಿದರು. ಸದ್ಯ ಈ ದಂಪತಿಗಳು ಅರ್ನಾ (Arna) ಎಂಬ ಮುದ್ದು ಮಗುವಿನೊಂದಿಗೆ ಸುಖ ಸಂಸಾರಿಕ ಜೀವನ ನಡೆಸುತ್ತಿದ್ದು, ಆಗಾಗ ತಮ್ಮ ಮಗಳ ಜೊತೆಗೆ ಫೋಟೋಶೂಟ್ ಮಾಡಿಸಿಕೊಂಡು ಪ್ರಣಿತ ಅದನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ.

advertisement

advertisement

ಹೀಗಿರುವಾಗ ಕಳೆದ ಕೆಲವು ದಿನಗಳ ಹಿಂದೆ ಅಮ್ಮ ಮಗಳಿಬ್ಬರು ಹಾಲಿನಂತೆ ಇರುವ ಬಿಳಿ ಬಣ್ಣದ ಫ್ರಾಕ್ ಅನ್ನು ಧರಿಸಿ ಬಹಳ ಮುದ್ದಾಗಿ ಫೋಟೋ ತೆಗೆಸಿಕೊಂಡಿದ್ದಾರೆ. ಅಮ್ಮ ಮಗಳ ಈ ಫೋಟೋಗಳು ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲಾಗುತ್ತಿದ್ದು ನೆಟ್ಟಿಗರು ಕಮೆಂಟ್ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಿದ್ದಾರೆ.

advertisement

Leave A Reply

Your email address will not be published.