7 Hot News
A Karnataka Times Affiliate Kannada News Portal

2023ರಲ್ಲಿ ವಿಚ್ಛೇದನ ಪಡೆದ ಕನ್ನಡದ ಸ್ಟಾರ್ ಸೆಲೆಬ್ರಿಟಿಗಳು ಯಾರೆಲ್ಲ ಇದ್ದಾರೆ ನೋಡಿ!

advertisement

2023ರ ವರ್ಷದಲ್ಲಿ ಕನ್ನಡ ಚಿತ್ರರಂಗದಲ್ಲಿ ನಾನಾ ರೀತಿಯಾದಂತಹ ಬದಲಾವಣೆಗಳು ಕಂಡವು ಕೇವಲ ಬೆರಳೆಣಿಕೆಯಷ್ಟು ಸಕಾರಾತ್ಮಕ ಘಟನೆಗಳು ನಡೆದರೆ ಇನ್ನು ಹತ್ತು ಹಲವು ವಿಚಾರಗಳು ಎಲ್ಲರಲ್ಲಿಯೂ ನೋವನ್ನು ಮೂಡಿಸಿತ್ತು. ಹೀಗೆ ಈ ವರ್ಷ ಅದೆಷ್ಟೋ ಸೆಲೆಬ್ರಿಟಿಗಳು ತಮ್ಮ ಪ್ರೀತಿ ಪಾತ್ರರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರೆ, ಇನ್ನಷ್ಟು ಸೆಲೆಬ್ರೆಟಿಗಳು ವಿಚ್ಛೇದನ ಪಡೆದುಕೊಳ್ಳುವ ಮೂಲಕ ತಮ್ಮ ವೈಯಕ್ತಿಕ ಬದುಕಿಗೆ ಅಂತ್ಯ ಹಾಡಿದರು.

advertisement

ಇನ್ನೇನು ಕೆಲವೇ ಕೆಲವು ದಿನಗಳಲ್ಲಿ 2023ರ ವರ್ಷಕ್ಕೆ ಸುಖಾಂತ್ಯವನ್ನು ಹಾಡಲಿದ್ದೇವೆ. ಹೀಗಿರುವಾಗ ಈ ವರ್ಷ ಯಾವೆಲ್ಲಾ ಸೆಲೆಬ್ರಿಟಿಗಳು ತಮ್ಮ ವೈಯಕ್ತಿಕ ಜೀವನವನ್ನು ಈ ವರ್ಷ ಕೊನೆಗೊಳಿಸಿದರು. ಹಲವು ವರ್ಷಗಳ ಕಾಲ ಪ್ರೀತಿಸಿ ಬಹಳ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಈ ವರ್ಷ ವಿಚ್ಛೇ-ದನವನ್ನು ಪಡೆದುಕೊಂಡ ಸೆಲೆಬ್ರಿಟಿಗಳು ಯಾರ್ಯಾರು ಎಂಬ ಎಲ್ಲ ಸಂಪೂರ್ಣ ವಿವರವನ್ನು ಈ ಪುಟದ ಮುಖಾಂತರ ತಿಳಿಸಲು ಹೊರಟಿದ್ದೇವೆ. ಹೀಗಾಗಿ ತಪ್ಪದೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

advertisement

ನಿಹಾರಿಕಾ-ಚೈತನ್ಯ ತೆಲುವಿನ ಸ್ಟಾರ್ ನಟ ನಾಗಬಾಬು(Nagababu) ಅವರ ಮಗಳು ನಿಹಾರಿಕಾ ಕೊನಿಡೆಲಾ ಮತ್ತು ಚೈತನ್ಯ (Niharika Konidela & Chaitanya) ಅವರು ಹಲವು ವರ್ಷಗಳ ಕಾಲ ಪ್ರೀತಿಸಿ ಮನೆಯವರೆಲ್ಲರ ಒಪ್ಪಿಗೆ ಪಡೆದು ಬಹಳ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ಜೋಡಿಗಳಿಗೆ ವಿಶೇಷವಾದ ಅಭಿಮಾನಿ ಬಳಗ ಸೃಷ್ಟಿಯಾಗಿತ್ತು ಪ್ರತಿ ಕೆಲಸದಲ್ಲಿಯೂ ಇವರಿಬ್ಬರ ನಡುವೆ ಇದ್ದಂತಹ ಅನ್ಯೋನ್ಯತೆ ಹೊಂದಾಣಿಕೆ ಇತರರಿಗೆ ಆದರ್ಶ ವಾಗುವಂತಿತ್ತು. ಆದರೆ ಇದೇ ವರ್ಷ ಇವರಿಬ್ಬರು ವಿಚ್ಛೇ-ದನ ಪಡೆದುಕೊಂಡು ದೂರಾಗುವ ಮೂಲಕ ಎರಡು ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದಾರೆ.

advertisement

advertisement

ಕಿರಿಕ್ ಕೀರ್ತಿ-ಅರ್ಪಿತ ಜೋಡಿ ನಂಬರ್ ಒನ್ ಕಾರ್ಯಕ್ರಮದಲ್ಲಿ ಆದರ್ಶ ಜೋಡಿಗಳಾಗಿ ಕಾಣಿಸಿಕೊಂಡಿದಂತಹ ಕಿರಿಕ್ ಕೀರ್ತಿ ಮತ್ತು ಅರ್ಪಿತ (Kirik Keerthi & Arpitha) ಅವರು ಕೂಡ ತಮ್ಮ ವೈಯಕ್ತಿಕ ಕಾರಣಗಳಿಂದಾಗಿ ವಿಚ್ಛೇ-ದನ ಪಡೆದು ದೂರಾಗಿರುವಂತಹ ಮಾಹಿತಿಯನ್ನು ಸ್ವತಹ ಕಿರಿಕ್ ಕೀರ್ತಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಇನ್ನು ಮುಂದೆ ನನಗೂ ಮತ್ತು ಅರ್ಪಿತ ಅವರ ವೈಯಕ್ತಿಕ ವಿಚಾರಗಳಿಗೂ ಸಂಬಂಧವಿಲ್ಲ, ಇನ್ನು ಮುಂದೆ ಅವರ ಕರಿಮಣಿ ಮಾಲೀಕ ನಾನಲ್ಲ ಎನ್ನುವ ಮೂಲಕ ಹಲವು ವರ್ಷಗಳ ಸಾಂಸಾರಿಕ ಜೀವನಕ್ಕೆ ಅಂತ್ಯ ಹಾಡಿದ್ದಾರೆ.

advertisement

ಚೈತ್ರ ವಾಸುದೇವನ್-ಸತ್ಯನಾರಾಯಣ ಕನ್ನಡ ಸಿನಿಮಾ ರಂಗದಲ್ಲಿ ನಟಿ ಹಾಗೂ ನಿರೂಪಕಿಯಾಗಿ ಹೆಸರುವಾಸಿಯಾಗಿರುವಂತಹ ಚೈತ್ರ (Chaitra) ಅವರು ಈ ವರ್ಷ ತಮ್ಮ ಪತಿ ಸತ್ಯ(Sathya) ಅವರೊಂದಿಗೆ ಅಧಿಕೃತವಾಗಿ ವಿಚ್ಛೇ-ದನ ಪಡೆಯುವ ಮೂಲಕ ಹಲವು ವರ್ಷಗಳ ಸಾಂಸಾರಿಕ ಜೀವನಕ್ಕೆ ಅಂತ್ಯ ಹಾಡಿದ್ದಾರೆ. ಇವರಿಬ್ಬರ ನಡುವೆ ಹೊಂದಾಣಿಕೆ ಸರಿಬರದ ಕಾರಣ ಚೈತ್ರ ಅವರು ಈ ನಿರ್ಧಾರವನ್ನು ತೆಗೆದುಕೊಂಡಿದ್ದು ಸದ್ಯ ತಮ್ಮ ವೃತ್ತಿ ಬದುಕಿನಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

advertisement

ಆಂಕರ್ ಜಾನ್ವಿ-ಕಾರ್ತಿಕ್ ತಮ್ಮ ಅದ್ಭುತ ಆಂಕರಿಂಗ್ ಶೈಲಿಯಿಂದ ಸಾಕಷ್ಟು ನ್ಯೂಸ್ ಚಾನೆಲ್ಗಳಲ್ಲಿ ಕೆಲಸ ಮಾಡಿದಂತಹ ಜಾನ್ವಿ(Jhanvi) ಯವರು ನಮ್ಮಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮದ ಮೂಲಕ ತಮ್ಮ ಮಗ ಗ್ರಂಥ್(Granth) ಅವರೊಡನೆ ಕಿರುತೆರೆ ವೀಕ್ಷಕರಿಗೆ ಪರಿಚಯಗೊಂಡರು, ಅದೇ ಕಾರ್ಯಕ್ರಮದಲ್ಲಿ ಪತಿ ಕಾರ್ತಿಕ್ ಕೂಡ ಭಾಗವಹಿಸಿರುತ್ತಾರೆ. ಹೀಗೆ ಕಾರ್ಯಕ್ರಮದಲ್ಲಿ ಬಹಳ ಹೊಂದಾಣಿಕೆಯಿಂದ ಇದ್ದಂತಹ ಈ ಜೋಡಿಗಳು ಕೆಲ ವೈಯಕ್ತಿಕ ಕಾರಣಗಳಿಂದ ತಮ್ಮ ವಿವಾಹಕ್ಕೆ ಅಂತ್ಯ ಹಾಡಿದ್ದಾರೆ.

advertisement

Leave A Reply

Your email address will not be published.