ನಟ ಅರ್ಜುನ್ ಸರ್ಜಾ ಕುಟುಂಬದ ಮುದ್ದಾದ ಫೋಟೋಸ್! ಸುಂದರ ಕ್ಷಣಗಳು ಹೇಗಿತ್ತು ನೋಡಿ!!

advertisement
ದಕ್ಷಿಣ ಭಾರತ ಸಿನಿಮಾ ರಂಗದಲ್ಲಿ ತಮ್ಮ ಅಮೋಘ ನಟನೆಯ ಮೂಲಕ ಬಹು ಬೇಡಿಕೆಯನ್ನು ಗಿಟ್ಟಿಸಿಕೊಂಡು ಹಲವಾರು ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿರುವಂತಹ ನಟ ಅರ್ಜುನ್ ಸರ್ಜಾ (Arjun Sarja) ಕನ್ನಡ ಮಾತ್ರವಲ್ಲದೆ ತೆಲುಗು ತಮಿಳು ಮಲಯಾಳಂ ಹಾಗೂ ಹಿಂದಿ ಸಿನಿಮಾಗಳಲ್ಲಿ ಅಭಿನಯಿಸುತ್ತ ನಟ ನಿರ್ಮಾಪಕ ಹಾಗೂ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ಸ್ವತಃ ಅರ್ಜುನ್ ಸರ್ಜಾ ಅವರೇ ಸಂದರ್ಶನಗಳಲ್ಲಿ ಹೇಳಿರುವ ಹಾಗೆ ಅವರಿಗೆ ಚಿಕ್ಕಂದಿನಿಂದಲೂ ಪೊಲೀಸ್ ಅಧಿಕಾರಿಯಾಗಬೇಕೆಂಬ ಆಸೆ ಇರುತ್ತದೆ.
advertisement
ಆದರೆ ಅದೃಷ್ಟ ಎಂಬುದು ಅವರನ್ನು ಬೇರೆಡೆಗೆ ಕರೆದುಕೊಂಡು ಹೋಯಿತು. ಹೌದು ಗೆಳೆಯರೇ ತಮ್ಮ ತಾತ ಹಾಗೂ ತಂದೆಯಂತೆ ಅತಿ ಚಿಕ್ಕ ವಯಸ್ಸಿಗೆ ಸಿನಿಮಾ ಇಂಡಸ್ಟ್ರಿಯನ್ನು ಪ್ರವೇಶ ಮಾಡಿದಂತಹ ಅರ್ಜುನ್ ಸರ್ಜಾ(Arjun Sarja) ಅವರು ಆರಂಭಿಕ ದಿನಗಳಲ್ಲಿ ಕನ್ನಡ ಚಿತ್ರಗಳ ಮೂಲಕ ಹೆಚ್ಚಾಗಿ ಗುರುತಿಸಿಕೊಂಡು ಆನಂತರ ತಮಿಳು ತೆಲುಗು ಹಾಗೂ ಹಿಂದಿ ಚಿತ್ರರಂಗಕ್ಕೆ ಕಾಲಿಡುತ್ತಾರೆ.
advertisement
ಹೀಗೆ ತಮ್ಮ ಅದ್ಭುತ ನಟನೆ ಹಾಗೂ ಸ್ಟಂಟ್ಸ್ ಗಳ ಮೂಲಕ ಜನರ ಪ್ರೀತಿಯನ್ನು ಗಳಿಸಿಕೊಂಡಿದಂತಹ ಅರ್ಜುನ್ ಸರ್ಜಾ ಆಕ್ಷನ್ ಕಿಂಗ್ ಎಂದೆ ಪ್ರಸಿದ್ಧಿ ಪಡೆದು ಇಂದಿಗೂ ಕೂಡ ಅಷ್ಟೇ ಬೇಡಿಕೆಯನ್ನು ಉಳಿಸಿಕೊಂಡು ಬಂದಿದ್ದಾರೆ. ಇನ್ನು ಅರ್ಜುನ್ ಸರ್ಜಾ ನಿವೇದಿತಾ ಎಂಬುವರನ್ನು ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಈ ದಂಪತಿಗಳಿಗೆ ಐಶ್ವರ್ಯ ಸರ್ಜಾ ಮತ್ತು ಅಂಜನಾ ಸರ್ಜಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಅರ್ಜುನ್ ಸರ್ಜಾ ಅವರ ಕಿರಿಯ ಪುತ್ರಿ ವಿದ್ಯಾಭ್ಯಾಸದ ಜೊತೆಗೆ ಸ್ವಂತ ಉದ್ಯಮ ಒಂದನ್ನು ಶುರು ಮಾಡಿದ್ದು ತಮ್ಮದೇ.
advertisement
advertisement
advertisement
ಆದ ಬ್ರಾಂಡ್ ಬಟ್ಟೆ ಅಂಗಡಿಯನ್ನು ತೆರೆದು ಬಿಸಿನೆಸ್ ವಿಮೆನ್ ಆಗಿ ಗುರುತಿಸಿಕೊಂಡರೆ ಅಕ್ಕ ಐಶ್ವರ್ಯ ಸರ್ಜಾ ಕನ್ನಡ ಹಾಗೂ ತೆಲುಗು ಸಿನಿಮಾಗಳ ಮೂಲಕ ಚಿತ್ರ ಪ್ರೇಕ್ಷಕರ ನೆಚ್ಚಿನ ನಟಿಯಾಗಿದ್ದಾರೆ. ಹೌದು ಗೆಳೆಯರೇ ಕಿರುತೆರೆ ನಟ ಚಂದನ್ ಕುಮಾರ್ ಅವರ ಜೊತೆಗೆ ಪ್ರೇಮ ಬರಹ ಸಿನಿಮಾದಲ್ಲಿ ಕಾಣಿಸಿಕೊಂಡಂತಹ ಐಶ್ವರ್ಯ ಸರ್ಜಾ (Aishwarya Sarja) ಮೊದಲ ಸಿನಿಮಾದಲ್ಲಿಯೇ ತಮ್ಮದೇ ಆದ ವಿಶೇಷ ಅಭಿಮಾನಿ ಬಳಗವನ್ನು ಸಂಪಾದಿಸುವಲ್ಲಿ ಯಶಸ್ವಿಯಾದರು.
advertisement
advertisement
ಕಳೆದ ಕೆಲವು ದಿನಗಳ ಹಿಂದೆ ಟಾಲಿವುಡ್ ನಟ ಉಮಾಪತಿ ರಾಮಯ್ಯ (Umapathi Ramaiah) ಅವರೊಂದಿಗೆ ನಿಶ್ಚಿತಾರ್ಥವನ್ನು ಮಾಡಿಕೊಂಡಿರುವ ಐಶ್ವರ್ಯ ಮದುವೆಯಾದ ನಂತರವೂ ಚಿತ್ರರಂಗದಲ್ಲಿ ತೊಡಗಿಕೊಳ್ಳಲಿದ್ದಾರಾ? ಎಂಬುದನ್ನು ಕಾದು ನೋಡಬೇಕಿದೆ. ಅದರಂತೆ ತಮ್ಮ ತಂದೆಯ ಹುಟ್ಟು ಹಬ್ಬದ (Birthday) ಅಂಗವಾಗಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಫ್ಯಾಮಿಲಿ ಫೋಟೋಗಳನ್ನು ಹಂಚಿಕೊಂಡು ಅಪ್ಪನಿಗೆ ಬಹಳ ಮುದ್ದಾಗಿ ಐಶ್ವರ್ಯ ಸದ್ಯ ಶುಭಾಶಯ ಕೋರಿದ್ದು ಈ ಫೋಟೋ ಸದ್ಯ ನೆಟ್ಟಿಗರ ಗಮನ ಸೆಳೆಯುತ್ತದೆ.
advertisement