ದುನಿಯಾ ವಿಜಯ್ ಪುತ್ರಿ ಯಾವ ಸ್ಟಾರ್ ಹೀರೋಯಿನ್ ಗು ಕಮ್ಮಿ ಇಲ್ಲ ಕಣ್ರೀ! ಮುದ್ದಾದ ಫೋಟೋಗಳು ಇಲ್ಲಿವೆ ನೋಡಿ!!

ಸ್ಯಾಂಡಲ್ ವುಡ್ ಜೊತೆಗೆ ಪರಭಾಷೆಯಲ್ಲಿ ಬ್ಯುಸಿಯಾಗಿರುವ ನಟರಲ್ಲಿ ದುನಿಯಾ ವಿಜಯ್ (Duniya Vijay)ಕೂಡ ಒಬ್ಬರಾಗಿದ್ದಾರೆ. ಸಿನಿಮಾದ ಬಗ್ಗೆ ಚಿಕ್ಕ ವಯಸ್ಸಿನಲ್ಲಿಯೇ ಒಲವು ಇಟ್ಟುಕೊಂಡಿದ್ದ ನಟ ಇಂದು ಸಿನಿಮಾದಲ್ಲಿಯೇ ಬದುಕು ಕಟ್ಟಿಕೊಂಡಿದ್ದಾರೆ. ಅಪ್ಪನ ಕಣ್ಣು ತಪ್ಪಿಸಿ ಸಿನಿಮಾ ನೋಡುತ್ತಿದ್ದ ಕಾಲವೊಂದಿತ್ತು. ಆದರೆ ಇದೀಗ ಸ್ಯಾಂಡಲ್ ವುಡ್ ನಲ್ಲಿ ಕರಿಚಿರತೆ ಎಂದೇ ಬಿರುದು ಸಂಪಾದಿಸಿಕೊಂಡಿದ್ದಾರೆ. ಬಾಡಿ ಬಿಲ್ಡಿಂಗ್ ಮೂಲಕ ಫೈಟ್ ಅಸಿಸ್ಟೆಂಟ್ (Fight Assistent) ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಇವರು ಇಂದು ನಾಯಕನಟನಾಗಿ ಹಾಗೂ ನಿರ್ದೇಶಕನಾಗಿ ಖ್ಯಾತಿ ಗಳಿಸಿಕೊಂಡಿದ್ದಾರೆ.

ವೃತ್ತಿ ಜೀವನದಲ್ಲಿ ಯಶಸ್ಸು ಕಂಡಿದ್ದರೂ ಕೂಡ ವೈಯುಕ್ತಿಕ ಜೀವನದಲ್ಲಿ ನಾನಾ ವಿಚಾರಗಳಿಂದ ಸುದ್ದಿಯಾಗಿದ್ದೇ ಹೆಚ್ಚು. ಚಂದನವನದಲ್ಲಿ ಗುರುತಿಸಿಕೊಂಡಿದ್ದ ದುನಿಯಾ ವಿಜಯ್ (Duniya Vijay) ಸಂಸಾರದಲ್ಲಿನ ಕಲಹಗಳಿಂದಾಗಿ ಸುದ್ದಿಯಾಗಿದ್ದರು. ಕೆಲವು ವರ್ಷಗಳ ಹಿಂದೆ ಮೊದಲ ಪತ್ನಿ ನಾಗರತ್ನ ಡೈವೋರ್ಸ್ ನೀಡಿದರು. ತದನಂತರದಲ್ಲಿ ಕೀರ್ತಿ (Keerthi) ಯವರನ್ನು ಮದುವೆ ಮಾಡಿಕೊಂಡಿದ್ದು, ಒಬ್ಬ ಮಗನಿದ್ದಾನೆ.

ನಾಗರತ್ನ ಮತ್ತು ದುನಿಯಾ ವಿಜಯ್ ಗೆ ಮೋನಿಕಾ (Monika) ಮತ್ತು ಮೋನಿಷಾ (Monisha) ಎಂಬ ಮುದ್ದಾದ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಅದರಲ್ಲಿಯು ಕಿರಿಯ ಮಗಳು ಮೋನಿಷಾ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಆಕ್ಟಿವ್ ಆಗಿದ್ದಾಳೆ. ಹೊಸ ಫೋಟೋ ಶೂಟ್ ಗಳನ್ನು ಮಾಡಿಸಿ, ಈ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿರುತ್ತಾಳೆ. ತಮ್ಮ ವೈಯುಕ್ತಿಕ ಬದುಕಿನ ಬಗ್ಗೆ ಅಪ್ಡೇಟ್ ನೀಡುವ ದುನಿಯಾ ವಿಜಯ್ ಮಗಳು ಮೋನಿಷಾ ವಿಜಯ್ ಅವರ ಇದೀಗ ಪೋಸ್ಟ್ ವೊಂದು ಎಲ್ಲರ ಗಮನ ಸೆಳೆಯುತ್ತಿದೆ.

ನಟ ದುನಿಯಾ ವಿಜಯ್ ಅವರ ಮಗಳು ಮೋನಿಷಾರವರು ಫೋಟೋಗಳನ್ನು ಶೇರ್ ಮಾಡಿಕೊಂಡು ಗ್ರಾಜುಯೇಟೆಡ್ (Graduated) ಎಂದು ಬರೆದುಕೊಂಡು ಬಿ.ಎ ಥಿಯೇಟರ್, ಇಂಗ್ಲಿಷ್, ಸೈಕಾಲಜಿ ಎಂದು ಸಬ್ಜೆಕ್ಟ್ ಗಳ ಹೆಸರನ್ನು ಕೂಡ ಮೆಂಕ್ಷನ್ ಮಾಡಿದ್ದಾರೆ. ನಟನ ಮಗಳು ಶೇರ್ ಮಾಡಿಕೊಂಡಿರುವ ಈ ಪೋಸ್ಟ್ ಗೆ ನೆಟ್ಟಿಗರು ಶುಭಾಶಯಗಳ ಮಹಾಪೂರವನ್ನೇ ಹರಿಸಿದ್ದಾರೆ.

ಅಂದಹಾಗೆ, ಮೋನಿಷಾರವರು ಶುಗರ್ ಬೈ ಮೋನಿಷಾ (Sugar Buy Monisha) ಎಂಬ ಬಟ್ಟೆ ವ್ಯಾಪಾರ ಮಾಡುವ ಆನ್ ಲೈನ್ ಶಾಪಿಂಗ್ ಬ್ಯುಸಿನೆಸ್ ಶುರು ಮಾಡಿದ್ದಾರೆ. ಮೋನಿಷಾ ಮಾಡೆಲಿಂಗ್ (Modeling) ಹಾಗೂ ಫ್ಯಾಷನ್ ಡಿಸೈನ್ (Fashion Design) ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾಳೆ. ಹೀಗಾಗಿ ತಂದೆ ವಿಜಯ್ ಹಾಗೆಯೇ ಮಗಳು ಮೋನಿಷಾ ಕೂಡ ಸಿನಿಮಾರಂಗಕ್ಕೆ ಎಂಟ್ರಿ ಕೊಡುವುದರಲ್ಲಿ ಯಾವುದೇ ಅನುಮಾನವಿಲ್ಲ.

Public News

Leave a Reply

Your email address will not be published. Required fields are marked *