7 Hot News
A Karnataka Times Affiliate Kannada News Portal

ಬಿಗ್ ಬಾಸ್ ಮನೆಯ ಖೀಲಾಡಿ ತುಕಾಲಿ ಸಂತೋಷ್ ಅವರ ಭವ್ಯವಾದ ಅರಮನೆ ಹೇಗಿದೆ ಗೊತ್ತಾ? ಇವರ ಪತ್ನಿ ಯಾರು ಗೊತ್ತಾ? ಇಲ್ಲಿದೆ ನೋಡಿ ಮಾಹಿತಿ!!

advertisement

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದಂತಹ ಕಾಮಿಡಿ ಕಿಲಾಡಿಗಳು (Comedy Kiladigalu) ಎಂಬ ಹಾಸ್ಯ ಕಾರ್ಯಕ್ರಮದ ಸೀಸನ್ ಮೂರರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿ ತಮ್ಮ ಅದ್ಭುತ ಹಾಸ್ಯ ಪ್ರತಿಭೆಯಿಂದ ಎಲ್ಲರ ಮನಸ್ಸನ್ನು ಗೆದ್ದಿದಂತಹ ತುಕಾಲಿ ಸಂತೋಷ ಅವರು ಕಾರ್ಯಕ್ರಮದ ರನ್ನರ್ ಆಗಿಯೂ ಹೊರಹೊಮ್ಮಿದರು. ಹೀಗೆ ಈ ಹಾಸ್ಯ ಕಾರ್ಯಕ್ರಮದ ನಂತರ ಸಾಕಷ್ಟು ರಿಯಾಲಿಟಿ ಶೋಗಳಲ್ಲಿ ಹಾಗೂ ಸೀರಿಯಲ್ ಗಳಲ್ಲಿ ಅವಕಾಶವನ್ನು ಪಡೆದುಕೊಂಡು ಜನರಿಗೆ ತಮ್ಮದೇ ಆದ ಹಾಸ್ಯ ಭರಿತ ಮನೋರಂಜನೆ ನೀಡುತ್ತ ಗುರುತಿಸಿಕೊಂಡಿದ್ದಂತಹ ತುಕಾಲಿ,

advertisement

ಇದೀಗ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕನ್ನಡ ಸೀಸನ್ 10ರಲ್ಲಿ ಸ್ಪರ್ಧಿಯಾಗಿ ತಮ್ಮ ಅದ್ಬುತ ಆಟಗಾರಿಕೆಯ ಮೂಲಕ ವೀಕ್ಷಕರಿಗೆ ಮನಸ್ಸನ್ನು ಗೆಲ್ಲುತ್ತಿದ್ದಾರೆ. ಆದರೆ ಹಾಸ್ಯ ನಟನಾಗಿ ದೊಡ್ಮನೆಯನ್ನು ಪ್ರವೇಶ ಮಾಡಿದಂತಹ ತುಕಾಲಿ ಸಂತೋಷ್(Tukali Santhosh) ಅವರಿಗೆ ಹಾಸ್ಯ ಎಂಬುದು ಕೈ ಹಿಡಿಯುತ್ತಿಲ್ಲ, ಹೌದು ಗೆಳೆಯರೇ ಬೇರೆಯವರ ಮೇಲೆ ಅಥವಾ ತಮ್ಮ ಮೇಲೆ ತಾವೇ ಹಾಸ್ಯ ಮಾಡಿಕೊಳ್ಳುವಾಗ ಎಡವಟ್ಟನ್ನು ಮಾಡಿಕೊಳ್ಳುವಂತಹ ತುಕಾಲಿ ಸಂತೋಷ ಒಂದಲ್ಲ ಒಂದು ಸಮಸ್ಯೆಯನ್ನು ತಮ್ಮ ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ.

advertisement

ಬಿಗ್ ಬಾಸ್ ಮನೆಗೆ ಕಾಲಿಟ್ಟ ಮೊದಲ ವಾರದಲ್ಲಿ ಡ್ರೋನ್ ಪ್ರತಾಪ್ ಅವರ ಕುರಿತಾಗಿ ಹಾಸ್ಯ ಮಾಡುತ್ತಾ ಅವರ ಮನಸ್ಸಿಗೆ ನೋವನ್ನು ಉಂಟು ಮಾಡಿದಂತಹ ತುಕಾಲಿ ಅವರು ಜನರಿಂದ ನಿಂದನೆಗೆ ಒಳಗಾಗುವುದರ ಜೊತೆಗೆ ಕಿಚ್ಚ ಸುದೀಪ್ ಅವರಿಂದಲೂ ಸರಿಯಾದ ಕ್ಲಾಸ್ ಪಡೆದುಕೊಂಡಿದ್ದರು. ಹೀಗೆ ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ಮಾಡಿದಂತಹ ತಪ್ಪನ್ನು ಅವರಿಗೆ ಅರ್ಥವಾಗುವಂತೆ ತಿಳಿ ಹೇಳಿದ ನಂತರ ಅದರ ಮುಂದಿನ ವಾರ ತಮ್ಮ ಮೇಲೆ ತಾವೇ ಕಾಮಿಡಿ ಮಾಡಿಕೊಳ್ಳಲು ಶುರು ಮಾಡಿದರು.

advertisement

advertisement

ಅಲ್ಲದೆ ನಟಿ ಭಾಗ್ಯಶ್ರೀ(Bhagyashree) ಸ್ನೇಹಿತರನ್ನು ನಾಮಿನೇಟ್ ಮಾಡಿದ್ದಕ್ಕಾಗಿ ಅವರ ಮೇಲೆ ತಮ್ಮ ಕೋಪಕೋಶವನ್ನು ವ್ಯಕ್ತ ಪಡಿಸುತ್ತಾ ತುಕಾಲಿ ಸಂತೋಷ ಕಣ್ಣೀರು ಹಾಕಿದ್ದು ಎಲ್ಲರಿಗೂ ಒಮ್ಮೆಲೆ ಆಶ್ಚರ್ಯ ಉಂಟು ಮಾಡಿತ್ತು. ಹೌದು ಸ್ನೇಹಿತರೆ. ಕಳೆದ ವಾರ ಎಲ್ಲಾ ಘಟಾನುಘಟಿಗಳೇ ನಾಮಿನೇಟ್ ಆಗಿದ್ದರಿಂದ ಭಾಗ್ಯಶ್ರೀ ಅವರು ಸರಿಯಾದ ಕಾರಣ ನೀಡದೆ ಸ್ನೇಹಿತ ಅವರನ್ನು ವೋಟ್ ಮಾಡಿದರು ಎಂದು ತಿಳಿದಂತಹ ತುಕಾಲಿ ಸಂತೋಷ ಇಲ್ಲಸಲ್ಲದ ವಿಚಾರಕ್ಕೆ ಅವರ ಜೊತೆಗೆ ಜಗಳ ಮಾಡಿದರು ಹಾಗೂ ಕಣ್ಣೀರನ್ನು ಹಾಕಿದರು.

advertisement

Bigg Boss Contestant Tukali Santhosh Wife
Bigg Boss Contestant Tukali Santhosh Wife

advertisement

ಈ ವಿಚಾರವಾಗಿ ಕಿಚ್ಚ ಸುದೀಪ್ ಕೂಡ ಕಳೆದ ವಾರ ತಮ್ಮ ಮಾತಿನ ಮೂಲಕವೇ ತುಕಾಲಿ ಸಂತೋಷ್(Tukali Santhosh) ಅವರ ವರ್ತನೆಗೆ ಚಡಿ ಏಟನ್ನು ನೀಡಿದರು. ಹೌದು ಗೆಳೆಯರೇ ಕಾಮಿಡಿ ಕಾಮಿಡಿ ಎಂದು ಅದನ್ನೇ ಅಸ್ತ್ರವನ್ನಾಗಿ ಮಾಡಿಕೊಳ್ಳಬೇಡಿ ಎಂಬ ಕಿವಿ ಮಾತನ್ನು ಕಿಚ್ಚ ತುಖಾಲಿ ಸಂತೋಷಗೆ ಹೇಳಿದರು. ಹೀಗೆ ಎಲ್ಲರನ್ನೂ ನಗಿಸುವ ನಿಟ್ಟಿನಲ್ಲಿ ತುಕಾಲಿ ಸಂತೋಷ ಅವರೇ ನಗೆ ಪಾಟಲಿಗೆ ತುತ್ತಾಗುತ್ತಿದ್ದಾರೆ ಎಂಬುದು ಸೂಕ್ಷ್ಮವಾಗಿ ತಿಳಿದು ಬರುತ್ತದೆ.

advertisement

Leave A Reply

Your email address will not be published.