ಸ್ಪಂದನಾ ನೋಡ್ತಿದ್ರೆ ಇನ್ನೂ ಬದುಕಿದ್ದಾಳೆ ಅನ್ನಿಸುತ್ತೆ, ಗೊಳಾಡಿ ಕಣ್ಣೀರಿಟ್ಟ ಗಿರಿಜಾ ಲೋಕೇಶ್!!

ಸ್ಯಾಂಡಲ್ ವುಡ್ ನಟ ವಿಜಯ್ ರಾಘವೇಂದ್ರ (Vijay Raghavendra) ಪತ್ನಿಗೆ ಹೃದಯಾಘಾತವಾಗಿದ್ದು ಬ್ಯಾಂಕಾಕ್ (Bankak) ನಲ್ಲಿ ನಿ-ಧನರಾಗಿದ್ದಾರೆ ಎನ್ನಲಾಗಿದೆ. ಈ ಸುದ್ದಿಯು ರಾಜ್ ಕುಟುಂಬ ಹಾಗೂ ಸ್ಯಾಂಡಲ್ ವುಡ್ ಗೆ ಭಾರಿ ಆಘಾತವಾಗಿದೆ. ಇತ್ತೀಚೆಗೆ ಯೂರೋಪ್ ಪ್ರವಾಸ ಕೈಗೊಂಡಿದ್ದ ವಿಜಯ್ ರಾಘವೇಂದ್ರ ಮತ್ತು ಪತ್ನಿ ಸ್ಪಂದನಾ (Spandana), ಬ್ಯಾಂಕಾಕ್ ನಲ್ಲಿ ತೀವ್ರ ಹೃದಯಾಘಾತ ಸಂಭವಿಸಿ ಇಹಲೋಕ ತ್ಯಜಿಸಿದ್ದಾರೆ.

ಸ್ಪಂದನಾ ನವರು ರಾತ್ರಿ ಮಲಗಿದ್ದ ಸಂದರ್ಭದಲ್ಲಿ ಹೃದಯಾಘಾತವಾಗಿದೆ. ರಾತ್ರಿ ಮಲಗಿದ್ದಲ್ಲಿಯೇ ಮೃತ ಪಟ್ಟಿದ್ದಾರೆ ಎನ್ನುವ ಮಾಹಿತಿಯೊಂದು ಹೊರಬಿದ್ದಿದೆ. ಸ್ಪಂದನಾರವರನ್ನು ಆ ಕೂಡಲೇ ಹತ್ತಿರದ ಆಸ್ಪತ್ರೆಗೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಿದ್ದರು, ಆದರೆ ಚಿಕಿತ್ಸೆ ಫಲಕಾರಿಯಾಗದೇ ಬದುಕಿನ ಯಾತ್ರೆ ಮುಗಿಸಿದ್ದಾರೆ ಎನ್ನಲಾಗಿದೆ.

ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನರವರು ನಟಿ ಕಮ್ ನಿರ್ಮಾಪಕಿ ಕೂಡ. ವಿಜಯ್ ರಾಘವೇಂದ್ರ ಹಾಗೂ ಸ್ಪಂದನರವರು ಪ್ರೀತಿಸಿ ಮದುವೆ (Love Marriage) ಯಾದವರು. ಸುಖವಾಗಿ ಸಂಸಾರ ಮಾಡುತ್ತಿದ್ದ ಈ ದಂಪತಿಗಳಿಗೆ ಒಬ್ಬ ಮಗನಿದ್ದಾನೆ. ನಟ ವಿಜಯ ರಾಘವೇಂದ್ರ ಅವರು ಮೊದಲ ಬಾರಿಗೆ ಸ್ಪಂದನರವರನ್ನು ಮಲ್ಲೇಶ್ವರಂ ನ ಕಾಫಿ ಡೇ (Coffee Day) 2004ರಲ್ಲಿ ಭೇಟಿಯಾದರು.

ಆದರೆ ಎರಡನೇ ಬಾರಿ ಭೇಟಿಯ ವೇಳೆ ಸ್ಪಂದನಾ ಬಳಿ ವಿಜಯ ರಾಘವೇಂದ್ರನವರು ಪ್ರೀತಿಯನ್ನು ಹೇಳಿಕೊಂಡರು. ಕೊನೆಗೆ ಸ್ಪಂದನಾ ತಂದೆ ಚೆನ್ನೇಗೌಡರಿಗೆ ಪರಿಚಯವಿದ್ದ ಕಾರಣ ಇವರಿಬ್ಬರ ಮದುವೆ ಮಾತುಕತೆ ನಡೆಸಿ ಮದುವೆಗೆ ತಯಾರಿ ನಡೆಸಿತ್ತು. ಈ ಬಳಿಕ ಒಂದೇ ತಿಂಗಳಿಗೆ ಆಗಸ್ಟ್ 2007 ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇನ್ನು ವಿಜಯ್ ರಾಘವೇಂದ್ರರವರಿಗೆ ಪತ್ನಿಯೇ ಎಲ್ಲಾ ಆಗಿದ್ದರು. ಪತ್ನಿಯನ್ನು ಒಂದು ಕ್ಷಣಕೂಡ ಬಿಟ್ಟಿಲಾರಲು ಸಾಧ್ಯವಿಲ್ಲ ಎನ್ನುವಂತೆ ಇದ್ದ ವಿಜಯ್ ರಾಘವೇಂದ್ರರವರಿಗೆ ಈ ಸುದ್ದಿ ಶಾಕ್ ತಂದಿದೆ.

ಸದ್ಯಕ್ಕೆ ಸ್ಪಂದನಾರವರ ಮೃ-ತ ದೇಹ ಬ್ಯಾಂಕಾಕ್ ನಿಂದ ವಿಜಯ್ ರಾಘವೇಂದ್ರ ಅವರ ಮನೆ ತಲುಪಿದ್ದು, ಗಣ್ಯಾತಿ ಗಣ್ಯರು ಮತ್ತು ಕುಟುಂಬಸ್ಥರ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ, ಇದೇ ವೇಳೆ  ಸ್ಪಂದನ ಅವರ ಅಂತಿಮ ದರ್ಶನ ಪಡೆದ ಹಿರಿಯ ನಟಿ ಗಿರಿಜಾ ಲೋಕೇಶ್ ಮಧ್ಯಮದ ಜೊತೆ ಮಾತಾಡಿ ಸ್ಪಂದನವರನ್ನು ನೋಡುತ್ತಿದ್ದರೆ ಇನ್ನೊಬ್ಬದು ಭಾಸವಾಗುತ್ತಿದೆ ಎಂದು ಗೋಳಾಡಿ ಕಣ್ಣೀರಿಟ್ಟರು.

Public News

Leave a Reply

Your email address will not be published. Required fields are marked *