7 Hot News
A Karnataka Times Affiliate Kannada News Portal

ಸಮುದ್ರದಲ್ಲಿ ಸೈಕಲ್ ಓಡಿಸಿದ ನಟಿ ಶ್ವೇತಾ ಶ್ರೀವಾತ್ಸವ್! ಸಿಂಪಲ್ ಸುಂದರಿಯ ಸೈಕಲ್ ಸವಾರಿ ನೋಡಿ!!

advertisement

ತಮ್ಮ ಮಗಳೊಂದಿಗೆ ಮುದ್ದಾದ ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಸೋಶಿಯಲ್ ಮೀಡಿಯಾದ ಕ್ವೀನ್ ಎಂದೇ ಕರೆಯಲ್ಪಡುವಂತಹ ನಟಿ ಶ್ವೇತಾ ಶ್ರೀವಾತ್ಸವ ಇದೀಗ ಮತ್ತೊಮ್ಮೆ ಸಮ್ಮರ್ ಹಾಲಿಡೇ ಎಂಜಾಯ್ ಮಾಡುವ ಸಲುವಾಗಿ ತಮ್ಮ ಮಗಳೊಂದಿಗೆ ಗೋವಾಗೆ ತೆರಳಿ ಅಲ್ಲಿ ಸೈಕ್ಲಿಂಗ್ ಮಾಡಿರುವಂತಹ ವಿಡಿಯೋ ಶೇರ್ ಮಾಡಿದ್ದಾರೆ. ಬೀಚ್ನ ದಡದಲ್ಲಿ ಅಮ್ಮ ಶ್ವೇತ ಹಾಗೂ ಮಗಳು ಅಸ್ಮಿತ ಇಬ್ಬರು ಸೈಕ್ಲಿಂಗ್ ಮಾಡುತ್ತಿರುವಂತಹ ವಿಡಿಯೋ ಇದಾಗಿದ್ದು.

advertisement

ಫ್ರೀ ಹೇರ್ ಬಿಟ್ಟು ಶಾರ್ಟ್ಸ್ ಹಾಕಿಕೊಂಡು 36 ವರ್ಷದ ಈ ನಟಿ ಬೋಲ್ಡ್ ಆಗಿ ಕಾಣಿಸಿಕೊಂಡಿರುವುದು ನೆಟ್ಟಿಗರ ಆಕರ್ಷಣೆಗೆ ಗ್ರಾಸವಾಗಿದೆ. ಹೌದು ಗೆಳೆಯರೇ ಸಿಂಪಲ್ ನಟಿ ಎಂದೇ ಕರೆಯಲ್ಪಡುವ ಇವರು ವಾರದಲ್ಲೇ ಎರಡರಿಂದ ಮೂರು ಪೋಸ್ಟ್ಗಳನ್ನು ಮಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಇರುವಂತಹ ನಂಬರ್ ಒನ್ ನಟಿ ಎಂಬ ಖ್ಯಾತಿಯನ್ನು ಪಡೆದುಕೊಂಡಿದ್ದಾರೆ.

advertisement

2013ರಲ್ಲಿ ರಕ್ಷಿತ್ ಶೆಟ್ಟಿ ಅವರ ಜೊತೆಗೆ ಸಿಂಪಲ್ ಆಗಿ ಒಂದು ಲವ್ ಸ್ಟೋರಿ ಎಂಬ ಸಿನಿಮಾದ ಮೂಲಕ ನಾಯಕ ನಟಿಯಾಗಿ ಗುರುತಿಸಿಕೊಂಡಂತಹ ಇವರು ಸಿನಿಮಾಗಳಲ್ಲಿ ಅಭಿನಯಿಸಿ ಪೋಷಕ ಪಾತ್ರಗಳಿಗೂ ಜೀವ ತುಂಬಿ ತಮ್ಮದೇ ಆದ ವಿಶಿಷ್ಟ ಅಭಿನಯದ ಛಾಪನ್ನು ಕನ್ನಡದಲ್ಲಿ ಮೂಡಿಸಿದ್ದಾರೆ. ಹೀಗೆ ಸಿಂಪಲ್ ನಟಿ ಎಂದೆ ಪ್ರಖ್ಯಾತಿ ಪಡೆದಿದ್ದಂತಹ ಶ್ವೇತಾ ಅವರು ಕಿರುಗೂರಿನ ಗಯ್ಯಾಳಿಗಳು ಎಂಬ ಸಿನಿಮಾದ ಮೂಲಕ ತಮ್ಮ ಅಭಿನಯದ ಚಾಪನ್ನು ಇನ್ನಷ್ಟು ಹೆಚ್ಚಿಸಿಕೊಂಡರು.

advertisement

advertisement

ಸಿನಿಮಾ ರಂಗದಿಂದ ಬ್ರೇಕ್ ಪಡೆದು ತಮ್ಮ ಮಗಳ ಆರೈಕೆಯಲ್ಲಿ ಬಿಜಿ ಇರುವಂತಹ ಶ್ವೇತಾ ಅವರು ಆಗಾಗ ಆಕೆಯೊಂದಿಗೆ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುವ ಮುಖಾಂತರ ಭಾರೀ ಟ್ರೆಂಡ್ ನಲ್ಲಿರುತ್ತಾರೆ. ಹೌದು ಶ್ವೇತ ಮತ್ತು ಅಸ್ಮಿತಾ ಏನೇ ಮಾಡಿದರು ಆ ವಿಡಿಯೋಗಳು ಬಾರಿ ವೈರಲ್ ಆಗುತ್ತಿರುತ್ತದೆ.

advertisement

 

View this post on Instagram

 

A post shared by Shwetha Srivatsav (@shwethasrivatsav)

advertisement

advertisement

ಇದೀಗ ಬೇಸಿಗೆ ರಜೆಯನ್ನು ಎಂಜಾಯ್ ಮಾಡುವ ಸಲುವಾಗಿ ಪತಿ ಅಮಿತ್, ಮಗಳು ಅಸ್ಮಿತ ಜೊತೆ ಗೋವಾಗೆ ತೆರಳಿರುವಂತಹ ಶ್ವೇತಾ ಅವರು ಅಲ್ಲಿನ ಬೀಚ್ ಬಳಿ ಸೈಕ್ಲಿಂಗ್ ಮಾಡುವಂತಹ ವಿಡಿಯೋ ಹಂಚಿಕೊಂಡಿದ್ದು ಎರಡು ಲಕ್ಷಕ್ಕೂ ಅಧಿಕ ಲೈಕ್ಸ್ ಹಾಗೂ ಕಮೆಂಟ್ಗಳನ್ನು ಮೂಲಕ ಅಭಿಮಾನಿಗಳು ತಮ್ಮ ಪ್ರೀತಿಯ ತೋರ್ಪಡಿಸುತ್ತಿದ್ದಾರೆ.

advertisement

Leave A Reply

Your email address will not be published.