ನಿಜ ಜೀವನದಲ್ಲಿ ಒಂದಾಗಲು ಸಜ್ಜಾದ ಕಾಮಿಡಿ ಖೀಲಾಡಿಗಳು ಖ್ಯಾತಿಯ ಜಗ್ಗಪ್ಪ ಮತ್ತು ಸುಶ್ಮಿತಾ! ಸದ್ಯದಲ್ಲೇ ಒಂದಾಗಲಿದೆ ಈ ಜೋಡಿ ನೋಡಿ!!

advertisement
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವಂತಹ ಕಾಮಿಡಿ ಕಿಲಾಡಿಗಳು (Comedy Kiladigalu) ಕಾರ್ಯಕ್ರಮದಿಂದಾಗಿ ಅದೆಷ್ಟೋ ಪ್ರತಿಭೆಗಳು ತಮ್ಮೊಳಗಿರುವಂತಹ ಹಾಸ್ಯ ಕಲೆಯನ್ನು ಅನಾವರಣಗೊಳಿಸುತ್ತಾ ಬಹುದೊಡ್ಡ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಅಲ್ಲದೆ ಈ ಕಾರ್ಯಕ್ರಮದಿಂದಾಗಿ ಸಿನಿಮಾ ಹಾಗೂ ಸೀರಿಯಲ್ ಗಳಲ್ಲಿ ಅವಕಾಶ ಗಿಟ್ಟಿಸಿಕೊಂಡು ಕನ್ನಡ ಸಿನಿಮಾ ಇಂಡಸ್ಟ್ರಿಗೂ ಎಂಟ್ರಿ ಕೊಟ್ಟಿದ್ದಾರೆ.
advertisement
ಹೀಗೆ ಇದೇ ಸಾಲಿನಲ್ಲಿ ಕಾಮಿಡಿ ಕಿಲಾಡಿಗಳು ಸೀಸನ್ 2 ಮೂಲಕ ಪ್ರಖ್ಯಾತಿ ಪಡೆದಂತಹ ಸುಶ್ಮಿತಾ (Sushmitha) ಹಾಗೂ ಜಗಪ್ಪ(Jagappa) ಕೂಡ ಇದ್ದು ಈಗಾಗಲೇ ಸಾಕಷ್ಟು ಟಿವಿ ರಿಯಾಲಿಟಿ ಶೋ ಗಳಲ್ಲಿ ಕಾಣಿಸಿಕೊಂಡಂತಹ ಈ ಜೋಡಿಗಳು ಸಿನಿಮಾ ಹಾಗೂ ಸೀರಿಯಲ್ಗಳಲ್ಲಿ ಕಾಣಿಸಿಕೊಳ್ಳುತ್ತ ಸಹ ನಟ ನಟಿಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
advertisement
ಈ ಜೋಡಿಗಳು ಭರ್ಜರಿ ಬ್ಯಾಚುಲರ್ಸ್ (Barjari Bachelors) ಎಂಬ ಕಾರ್ಯಕ್ರಮದಲ್ಲಿ ಸ್ಪರ್ಧಿಗಳಾಗಿ ಆಟವಾಡುತ್ತಿದ್ದು, ವೇದಿಕೆಯಲ್ಲಿ ಅಧಿಕೃತವಾಗಿ ತಮ್ಮ ಪ್ರೀತಿಯ ವಿಚಾರವನ್ನು ಬಹಿರಂಗಪಡಿಸಿ, ಉಂಗುರ ಬದಲಿಸಿ ಕೊಂಡು ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. ಜೀ ಕನ್ನಡ ವಾಹಿನಿ ಈ ಕುರಿತಾದ ಪ್ರೋಮೊ ಒಂದನ್ನು ಹಂಚಿಕೊಂಡಿದ್ದು ಇವರಿಬ್ಬರ ಲವ್ ಸ್ಟೋರಿ ಕುರಿತು ಮಾಹಿತಿ ತಿಳಿದುಕೊಂಡಂತಹ ಅಭಿಮಾನಿಗಳು ಸಿಕ್ಕಾಪಟ್ಟೆ ಸಂತೋಷಕ್ಕೊಳ್ಳಾಗಿದ್ದಾರೆ.
advertisement
advertisement
ಹೌದು ಸ್ನೇಹಿತರೆ ಎಲ್ಲಾ ಸ್ಕಿನ್ಗಳಲ್ಲಿಯೂ ಬಹಳ ರೋಮ್ಯಾಂಟಿಕ್ ಆಗಿ ಕಾಣಿಸಿಕೊಳ್ಳುತ್ತಿದ್ದಂತಹ ಈ ಜೋಡಿಗಳು ಒಂದಾಗಬೇಕೆಂಬುದು ಹಲವರ ಆಸೆಯಾಗಿತ್ತು. ಸಹ ನಟ ನಟಿಯರಿಗೂ ಕೂಡ ಇವರಿಬ್ಬರ ನಡುವೆ ಪ್ರೀತಿ ಇದೆ ಎಂಬ ಸಂಶಯವಿತ್ತು. ಅದರಂತೆ ಭರ್ಜರಿ ಬ್ಯಾಚುಲರ್ಸ್ (Barjari Bachelors) ಕಾರ್ಯಕ್ರಮದಲ್ಲಿ ಜಗ್ಗಪ್ಪ ಮತ್ತು ಸುಶ್ಮಿತಾ ಪ್ರೇಮದಿಂದ ಮಾಡಿಕೊಳ್ಳುವುದರ ಜೊತೆಗೆ ಎಂಗೇಜ್ಮೆಂಟ್ ಕೂಡ ಮಾಡಿಕೊಂಡು ತಮ್ಮ ಪ್ರೀತಿಯ ವಿಚಾರವನ್ನು ಅಧಿಕೃತವಾಗಿ ಬಹಿರಂಗಗೊಳಿಸಿದ್ದಾರೆ.
advertisement
ನಟಿ ರಚಿತ ರಾಮ್ ಹಾಗೂ ಕ್ರೇಜಿಸ್ಟಾರ್ ರವಿಚಂದ್ರನ್ (Ravichandran) ಅವರ ತೀರ್ಪುಗಾರಿಕೆಯಲ್ಲಿ ಮೂಡಿಬರುವಂತಹ ಭರ್ಜರಿ ಬ್ಯಾಚುಲರ್ಸ್ (Barjari Bachelors) ಕಾರ್ಯಕ್ರಮದಲ್ಲಿ ಸ್ಪರ್ಧಿಗಳಾಗಿ ಇದ್ದಂತಹ ಜಗಪ್ಪ ಮತ್ತು ಸುಶ್ಮಿತಾ ಅವರ ಪ್ರೀತಿಯನ್ನು ಅಧಿಕೃತಗೊಳಿಸಿದ ಬಳಿಕ ಕಾರ್ಯಕ್ರಮದ ನಿರೂಪಕರಾದಂತಹ ಅಕುಲ್ ಬಾಲಾಜಿ ಅವರು ಮದುವೆಗೂ ಮುಂಚೆ ನಿಶ್ಚಿತಾರ್ಥ ಮಾಡಿಸಬೇಕೆಂದು ನಿರ್ಧಾರ ಮಾಡಿ ಜಗಪ್ಪ ಅವರ ತಂದೆ ತಾಯಿ ಹಾಗೂ ಸುಶ್ಮಿತಾ ಅವರ ತಂದೆ ತಾಯಿಯನ್ನು ಕರೆಸಿ ಸ್ಟೇಜ್ ಮೇಲೆ ನಿಶ್ಚಿತಾರ್ಥ ಮಾಡಿದ್ದಾರೆ.
advertisement

advertisement
ಜೀ ಕನ್ನಡ ವಾಹಿನಿಯವರು ಈ ಒಂದು ಪ್ರೋಮೋ ಬಿಡುಗಡೆ ಮಾಡಿದ್ದು ಈ ಎಪಿಸೋಡನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಬಹಳ ಕುತೂಹಲರಾಗಿದ್ದಾರೆ. ಜೀ ಕನ್ನಡ ಪ್ರೇಕ್ಷಕರಿಗೆ ಡಬಲ್ ಧಮಾಕ ಎಂಬಂತೆ ಗ್ರಾಂಡ್ ಫಿನಾಲೆ ಎಪಿಸೋಡ್ನ ಜೊತೆಗೆ ಜಗ್ಗಪ್ಪ ಮತ್ತು ಸುಶ್ಮಿತಾ ಅವರ ನಿಶ್ಚಿತಾರ್ಥದ ಕ್ಷಣಗಳನ್ನು ಪ್ರಸಾರ ಮಾಡಲಿದ್ದಾರೆ.
advertisement