ನಾವೀಗ ಸ್ಮಾರ್ಟ್ ಯುಗದಲ್ಲಿದ್ದೇವೆ. ಹೀಗಾಗಿ ಎಲ್ಲರೂ ಕೂಡ ಸ್ಮಾರ್ಟ್ ಆಗಿಯೇ ಯೋಚಿಸುತ್ತಿದ್ದಾರೆ. ಅದಲ್ಲದೇ, ಇತ್ತೀಚಿಗಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾ (Social Media) ದಲ್ಲಿ ಸಕ್ರಿಯರಾಗುವ ಮೂಲಕ ಬ್ಯುಸಿಯಾಗಿರುವವರೇ ಹೆಚ್ಚು. ಮಾಡಲು ಕೆಲಸ ಇಲ್ಲದೆ ಇದ್ದರೂ ಕೂಡ ಸೋಶಿಯಲ್ ಮೀಡಿಯಾದಲ್ಲಿ ದಿನದ 24 ಗಂಟೆ ಕಳೆಯುತ್ತಿರುತ್ತಾರೆ. ಪ್ರತಿಭೆಯಿದ್ದರೆ ಅದಕ್ಕೆ ಅವಕಾಶವನ್ನು ಹುಡುಕುವ ಕಾಲವೊಂದಿತ್ತು. ಆದರೆ ಇದೀಗ ವೇದಿಕೆಗಾಗಿ ಕಾಯಬೇಕಾದ ಅವಶ್ಯಕತೆಯಿಲ್ಲ.
ಕೈಯಲ್ಲಿರುವ ಸಣ್ಣ ಮೊಬೈಲ್ ಫೋನ್ (Mobile Phone) ನಿಂದಲೇ ಇಡೀ ಜಗತ್ತಿಗೆ ತಮ್ಮ ಪ್ರತಿಭೆಯನ್ನು ತೋರಿಸಲು ಅವಕಾಶವಿದೆ. ಹೌದು, ಸೋಶಿಯಲ್ ಮೀಡಿಯಾದ ಮೂಲಕ ಪ್ರತಿಭೆಯನ್ನು ಅನಾವರಣಗೊಳಿಸಲು ಮುಕ್ತ ಸ್ವಾತಂತ್ರ್ಯ ವಿದೆ. ಇಲ್ಲಿ ಮುಖ್ಯವಾಗಿ ಇಂತಹವರೆ ಸೋಶಿಯಲ್ ಮೀಡಿಯಾವನ್ನು ಬಳಸಬೇಕು ಎನ್ನುವ ನಿಯಮಗಳು ಖಂಡಿತವಿಲ್ಲ. ಈಗಾಗಲೇ ಸೋಶಿಯಲ್ ಮೀಡಿಯಾದ ಮೂಲಕ ರಾತ್ರಿ ಬೆಳಗಾಗುವುದರೊಳಗೆ ಫೇಮಸ್ ಆದವರು ಇದ್ದಾರೆ.
ಸಾಮಾನ್ಯ ವ್ಯಕ್ತಿಯನ್ನು ಸೆಲೆಬ್ರಿಟಿ ಮಾಡುವ ತಾಕತ್ತು ಈ ಸೋಶಿಯಲ್ ಮೀಡಿಯಾಕ್ಕೆ ಇದೆ. ಹೀಗಾಗಿ ಸೋಶಿಯಲ್ ಮೀಡಿಯಾದಲ್ಲಿಯೂ ಒಳ್ಳೆಯದು ಇದೆ. ಇದರಲ್ಲಿ ಬದುಕು ಕಟ್ಟಿಕೊಂಡವರು ಸಾಕಷ್ಟು ಜನರು ಇದ್ದಾರೆ. ಹೌದು ಈ ಮೂಲಕವೇ ಫೇಮಸ್ ಆಗಿ ಇಂದು ಸೆಲೆಬ್ರಿಟಿ ಜೀವನವನ್ನು ಸವಿಯುತ್ತಿರುವವರು ಇದ್ದಾರೆ. ಕೆಲವರು ತಮ್ಮ ಪ್ರತಿಭೆಗಳನ್ನು ಹೊರ ಹಾಕಿದರೆ, ಇನ್ನು ಕೆಲವರು ತಮ್ಮ ದೇಹವನ್ನು ಪ್ರದರ್ಶನ ಮಾಡಲೆಂದೇ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುವವರ ಸಂಖ್ಯೆಗೇನು ಕಡಿಮೆಯಿಲ್ಲ.
ಕೆಲವು ವಿಡಿಯೋಗಳು ನೋಡುಗರಿಗೆ ಮುಜುಗರ ತರುವುದು ಸಹಜ. ಕೆಲ ಯುವತಿಯರು ತುಂಡು ಉಡುಗೆ ತೊಟ್ಟು ತಮ್ಮ ಮೈ ಕೈಯನ್ನು ಪ್ರದರ್ಶನಕ್ಕೆ ಇಟ್ಟುಕೊಳ್ಳುತ್ತಾರೆ. ಕೆಲವರು ಹಾಟ್ ಆಗಿ ಡ್ಯಾನ್ಸ್ ಮಾಡುವ ಮೂಲಕ ನೆಟ್ಟಿಗರ ನಿದ್ದೆ ಕದಿಯುತ್ತಾರೆ. ಹಾಟ್ ಆಗಿ ಡಾನ್ಸ್ ಮಾಡುವ ವಿಡಿಯೋಗಳು ನೆಟ್ಟಿಗರ ಗಮನ ಸೆಳೆಯುತ್ತಿರುತ್ತದೆ. ಈ ವಿಚಾರದಲ್ಲಿ ಸೋಶಿಯಲ್ ಮೀಡಿಯಾ ಸ್ಟಾರ್ ಆಗಿರುವ ಜಯಂತಿ (Social Media Star Jayanthi) ಕೂಡ ಹೊರತಾಗಿಲ್ಲ. ಆಗಾಗ ಹಾಟ್ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ.
View this post on Instagram
ಇದೀಗ ಜಯಂತಿಯವರ ಒಳಉಡುಪಿನ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡಿರುವ ನೆಟ್ಟಿಗನ ಚಳಿ ಬಿಡಿಸಿದ್ದಾರೆ. ಬ್ರಾ ಬಗ್ಗೆ ಕಾಮೆಂಟ್ ಮಾಡಿದವನಿಗೆ ಖಡಕ್ ಆಗಿ ಉತ್ತರ ನೀಡುವ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋವೊಂದು 832 ಕೆ ಲೈಕ್ಸ್ ಬಂದಿದ್ದು , ನಾನಾ ರೀತಿಯಲ್ಲಿ ಕಾಮೆಂಟ್ ಗಳು ಬರುತ್ತಿವೆ.