7 Hot News
A Karnataka Times Affiliate Kannada News Portal

ಸಿಪಾಯಿ ಚಿತ್ರದ ಹಾಡಿಗೆ ಮಸ್ತ್ ಡ್ಯಾನ್ಸ್ ಮಾಡಿದ ನಟಿ ರಾಧಿಕಾ ಕುಮಾರಸ್ವಾಮಿ! ವಿಡಿಯೋ ನೋಡಿ ನಟಿಯ ಸೌಂದರ್ಯಕ್ಕೆ ಕಳೆದುಹೋದ ನೆಟ್ಟಿಗರು!!

advertisement

ಅದೊಂದು ಕಾಲದಲ್ಲಿ ತಮ್ಮ ಮನೋಜ್ಞ ನಟನೆಯ ಮೂಲಕ ಪ್ರೇಕ್ಷಕರ ಕಣ್ಣಂಚಿನಲ್ಲಿ ನೀರು ತರಿಸುವಷ್ಟು ಭಾವನಾತ್ಮಕ ಪಾತ್ರಗಳ ಮೂಲಕ ಕನ್ನಡ ಚಿತ್ರ ಪ್ರೇಕ್ಷಕರನ್ನು ರಂಜಿಸುತ್ತಿದ್ದಂತಹ ನಟಿ ರಾಧಿಕಾ ಕುಮಾರಸ್ವಾಮಿ(Radhika Kumaraswamy) ಯವರಿಗೆ ಸದ್ಯ ಸಿನಿಮಾರಂಗದಲ್ಲಿ ಅವಕಾಶಗಳು ಕಡಿಮೆಯಾಗಿದ್ದರೂ ಕೂಡ ಅವರ ಅಭಿಮಾನಿಗಳ ಸಂಖ್ಯೆ ಮಾತ್ರ ಕಿಂಚಿತ್ತು ಇಳಿಕೆ ಕಂಡಿಲ್ಲ.

advertisement

ರಾಧಿಕಾ ಕುಮಾರಸ್ವಾಮಿ(Radhika Kumaraswamy) ಅವರಿಗೆ ಹೇಳಿಕೊಳ್ಳುವಂತಹ ಸಿನಿಮಾಗಳ ಅವಕಾಶ ಸಿಗದೇ ಹೋದರು ಸಾಮಾಜಿಕ ಮಾಧ್ಯಮಗಳ ಮೂಲಕ ತಮ್ಮ ಅಭಿಮಾನಿಗಳನ್ನು ರಂಜಿಸುವ ಪ್ರಯತ್ನ ಮಾಡುತ್ತಿರುವಂತಹ ಈ ನಟಿ ಇನ್ಸ್ಟಾಗ್ರಾಮ್ ಮತ್ತು ಫೇಸ್ಬುಕ್ನಂತಹ ಪ್ಲಾಟ್ಫಾರ್ಮ್ ಗಳಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಇರುತ್ತಾರೆ. ಅಷ್ಟೇ ಅಲ್ಲದೆ ತಮ್ಮ ಮುದ್ದು ಮುದ್ದು ಫೋಟೋ ಹಾಗೂ ವಿಡಿಯೋಗಳನ್ನೆಲ್ಲ ಹಂಚಿಕೊಂಡು ನೆಟ್ಟಿಗರ ನಿದ್ರೆ ಗೆಡಿಸುವ ಸ್ವೀಟಿ ಇದೀಗ ರವಿಚಂದ್ರನ್ ಮತ್ತು ಸೌಂದರ್ಯ(Ravichandran and soundarya) ನಟನೆಯ ಸಿಪಾಯಿ ಸಿನಿಮಾದ ಹಾಡೊಂದಕ್ಕೆ ಬಹಳ ಮೋಹಕವಾಗಿ ಸೊಂಟ ಬೆಳಕಿಸಿದ್ದಾರೆ.

advertisement

ಹೌದು ಗೆಳೆಯರೇ ಇತ್ತೀಚಿನ ದಿನಮಾನಗಳಲ್ಲಿ ತಮ್ಮ ದೇಹದ ಬಗ್ಗೆ ಹೆಚ್ಚಿನ ಗಮನವಹಿಸುತ್ತಿರುವಂತಹ ರಾಧಿಕಾ ಕುಮಾರಸ್ವಾಮಿ ಅವರು ತೂಕವನ್ನು ಇಳಿಸಿಕೊಂಡು ಬಹಳನೇ ಸ್ಲಿಮ್ ಆಗಿದ್ದು, ಈ ಕಾರಣದಿಂದ ಸಾಕಷ್ಟು ಮಾಡ್ರನ್ ಉಡುಪುಗಳನ್ನು ಧರಿಸಿ ಬಹಳ ಬೋಲ್ಡ್ ಅವತಾರದಲ್ಲಿ ಫೋಟೋಶೂಟ್ ಗಳನ್ನು ಮಾಡಿಸಿಕೊಂಡು, ತಮ್ಮ instagram ಖಾತೆಯಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ.

advertisement

advertisement

ಹೀಗಿರುವಾಗ ನೆನ್ನೆ ಬಹಳ ಸುಂದರವಾಗಿ ಸೀರೆಯನ್ನು ಉಟ್ಟು, ಅದಕ್ಕೆ ತಕ್ಕನಾದ ಹೇರ್ ಸ್ಟೈಲ್ ಮಾಡಿಸಿಕೊಂಡು ಕೈ ತುಂಬಾ ಬಳೆ ಹಣೆ ತುಂಬ ಕುಂಕುಮವನ್ನು ಹಚ್ಚಿಕೊಳ್ಳುವುದರ ಜೊತೆಗೆ ಮಹಾರಾಷ್ಟ್ರ ಶೈಲಿಯ ಮೂಗುತಿ ಒಂದನ್ನು ಹಾಕಿ ಥೇಟ್ ಮಹಾಲಕ್ಷ್ಮಿಯಂತೆ ಸಿದ್ದರಾಗಿ ಕ್ಯಾಮೆರಾದ ಮುಂದೆ ನಿಂತು ರೀಲ್ಸ್ ಮಾಡಿದ್ದಾರೆ. ಹೌದು ಗೆಳೆಯರೇ ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ಸೌಂದರ್ಯ ನಟನೆಯ ಸಿಪಾಯಿ ಸಿನಿಮಾದ(Sipayi Cinema) ಯಾರಲೇ ನಿನ್ನ ಮೆಚ್ಚಿದವನು.. ಎಂಬ ಹಾಡಿಗೆ ಕನ್ನಡದ ಸ್ವೀಟಿ ರಾಧಿಕಾ ಕುಮಾರಸ್ವಾಮಿ ಅವರು ನಿಂತಲ್ಲೇ ಸೊಂಟ ಬೆಳಕಿಸಿದ್ದು.

advertisement

advertisement

advertisement

ಈ ಅತಿ ಸುಂದರ ವಿಡಿಯೋವನ್ನು ‘ಹ್ಯಾಪಿ ವೀಕೆಂಡ್’ (Happy weekend) ಎಂಬ ಕ್ಯಾಪ್ಷನ್ ಬರೆದು ಪೋಸ್ಟ್ ಶೇರ್ ಮಾಡಿದ್ದಾರೆ. ವಿಡಿಯೋ ಹಂಚಿಕೊಳ್ಳಲಾದ ಕೆಲವೇ ಕೆಲವು ಗಂಟೆಗಳಲ್ಲಿ ಭಾರಿ ವೈರಲ್ ಆಗಿದ್ದು, ಇದನ್ನು ಕಂಡಂತಹ ನೆಟ್ಟಿಗರು ಯಾರಲೇ ನಿನ್ನ ಮುದ್ದು ಗಂಡ? ಯಾರಲೇ ನಿನ್ನ ತುಂಡು ಗಂಡ? ಎಂದೆಲ್ಲ ರಾಧಿಕಾ ಕುಮಾರಸ್ವಾಮಿ(Radhika Kumaraswamy) ಅವರನ್ನು ಪ್ರಶ್ನೆ ಮಾಡುತ್ತಾ ಕಮೆಂಟ್ ಮೂಲಕ ಕಾಲೆಳೆದ್ದಿದಾರೆ. ಇನ್ನು ಹಲವರು ಬಹಳ ಸ್ಲಿಮ್ ಆಗಿ 40ರ ಪ್ರಾಯದಲ್ಲಿಯೂ ತಮ್ಮ ಸೌಂದರ್ಯವನ್ನು ದಿನೇ ದಿನೇ ಹೆಚ್ಚಿಸಿಕೊಳ್ಳುತ್ತಿರುವ ರಾಧಿಕಾ ಕುಮಾರಸ್ವಾಮಿ(Radhika Kumaraswamy) ಅವರ ಮೈಮಾಟವನ್ನು ಹಾಡಿ ಹೊಗಳಿದ್ದಾರೆ.

advertisement

Leave A Reply

Your email address will not be published.