7 Hot News
A Karnataka Times Affiliate Kannada News Portal

ಪ್ರಖ್ಯಾತ ಹಾಸ್ಯ ನಟ ಬ್ರಹ್ಮನಂದಂ ಜೊತೆಗೆ ಸುಪ್ರೀತಾ ಅವರ ಸುಂದರ ಫೋಟೋಗಳು! ಸುಂದರ ಕ್ಷಣಗಳು ಇಲ್ಲಿವೆ ನೋಡಿ!!

advertisement

ಸ್ನೇಹಿತರೆ ಎಂಥಾ ಪಾತ್ರ ನೀಡಿದರು ಪಾತ್ರವೇ ತಾವಾಗಿ ತಮ್ಮ ಅದ್ಭುತ ಹಾಸ್ಯ ಪ್ರಜ್ಞೆಯಿಂದ ಸಾವಿರಾರು ಸಿನಿಮಾಗಳಲ್ಲಿ ಕಾಣಿಸಿಕೊಂಡು ಇಂದಿಗೂ ಬ್ಲಾಕ್ಬಸ್ಟರ್ ಹಿಟ್ ಸಿನಿಮಾಗಳನ್ನು ನೀಡುತ್ತಿರುವಂತಹ ತಮಿಳಿನ ಪ್ರಖ್ಯಾತ ಹಾಸ್ಯ ನಟ ಕನ್ಯೆಗಂಟಿ ಬ್ರಹ್ಮಾನಂದಂ(Kanneganti Brahmanandam) ಯಾರಿಗೆ ತಾನೇ ಪರಿಚಯವಿರದಿರಲು ಸಾಧ್ಯವಿಲ್ಲ ಹೇಳಿ? ಕೇವಲ ತಮಿಳು ತೆಲುಗಿನಲ್ಲಿ ಮಾತ್ರವಲ್ಲದೆ ಕನ್ನಡ ಮಲಯಾಳಂ ಹಾಗೂ ಕೆಲ ಹಿಂದಿ ಸಿನಿಮಾಗಳಲ್ಲಿಯೂ ಅಭಿನಯಿಸುತ್ತ ಬಣ್ಣದ ಬದುಕಿನಲ್ಲಿ ವಿಶೇಷ ಹೆಸರು ಹಾಗೂ ಅಭಿಮಾನಿ ಬಳಗವನ್ನು ಬ್ರಹ್ಮಾನಂದಂ ಅವರು ಸಂಪಾದಿಸಿಕೊಂಡಿದ್ದಾರೆ.

advertisement

ಮೂಲತಃ ಆಂಧ್ರಪ್ರದೇಶದವರಾದ ಬ್ರಹ್ಮಾನಂದಂ (Brahmanandam) ಅವರಿಗೆ ಚಿಕ್ಕಂದಿನಿಂದಲೂ ನಟನೆ ಹಾಗೂ ನಾಟಕಗಳ ಮೇಲೆ ಹೆಚ್ಚಿನ ಆಸಕ್ತಿ ಮೂಡಿದ ಕಾರಣ ಬಾಲ್ಯದಿಂದಲೂ ಲಲಿತ ಕಲೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದರು. ಆದರೆ ಮನೆಯವರ ಒತ್ತಾಯದ ಮೇರೆಗೆ ಸ್ನಾತಕೋತ್ತರ ಪದವಿಯನ್ನು ಮುಗಿಸಿ ಪಶ್ಚಿಮ ಗೋದಾವರಿ ಜಿಲ್ಲೆಯ ಅತ್ತೆಲಿ ಎಂಬ ಊರಿನಲ್ಲಿ ತೆಲುಗು ಭಾಷೆಯ ಉಪನ್ಯಾಸಕರಾಗಿ ಕೆಲಸಕ್ಕೆ ಸೇರಿದರು.

advertisement

ಹೀಗಿರುವಾಗ 1985 ರಲ್ಲಿ ಡಿಡಿ ತೆಲುಗಿನಲ್ಲಿ ಪ್ರಸಾರವಾಗುವ ಪಕಪಕಲು ಎಂಬ ದೂರದರ್ಶನ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುವಂತಹ ಅವಕಾಶ ಬ್ರಹ್ಮನಂದನವರನ್ನು ಹರಸಿ ಬರುತ್ತದೆ. ಮೊದಲ ಪ್ರದರ್ಶನದಲ್ಲಿಯೇ ತಮ್ಮ ಮನೋಜ್ಞ ನಟನೆ ಹಾಗೂ ಹಾಸ್ಯ ಪ್ರಜ್ಞೆಯ ಮೂಲಕ ವೀಕ್ಷಕರ ಮನಸ್ಸನ್ನು ಗೆದ್ದಂತಹ ಬ್ರಹ್ಮಾನಂದಂ(Brahmanandam) ಅವರಿಗೆ ತೆಲುಗು ಸಿನಿಮಾಗಳಲ್ಲಿ ಅಭಿನಯಿಸುವಂತಹ ಅವಕಾಶ ಹರಸಿ ಬಂದವು.

advertisement

advertisement

ಹೀಗೆ ತಮ್ಮ ನಟನ ಬದುಕನ್ನು ಬಹಳ ಶ್ರದ್ಧೆಯಿಂದ ಮುಂದುವರಿಸಿಕೊಂಡು ಬಂದಿರುವ ಕಾಮಿಡಿಯನ್ ಬ್ರಹ್ಮಾನಂದಂ(Brahmanandam) ಇವರಿಗೂ ಸಾವಿರಕ್ಕೂ ಹೆಚ್ಚಿನ ಪಾತ್ರಗಳಿಗೆ ಜೀವ ತುಂಬಿದ್ದು ತೆಲುಗಿನಲ್ಲಿ ವಿಶೇಷ ಬೇಡಿಕೆ ಹಾಗೂ ಅಭಿಮಾನಿ ಬಳಗವೇ ಇದೆ ಎಂದರೆ ತಪ್ಪಾಗಲಾರದು. ಯಾವ ಸ್ಟಾರ್ ಹೀರೋಗಳಿಗೂ ಕಡಿಮೆ ಇಲ್ಲದಂತಹ ಕ್ರೇಜ್ ನಟ ಬ್ರಹ್ಮಾನಂದಂವರಿಗೂ ಇದೆ.

advertisement

advertisement

ಕಳೆದ ಕೆಲವು ದಿನಗಳ ಹಿಂದೆ ತೆಲುಗು ನಟಿ ಸುಪ್ರೀತ(actress supreetha) ಅವರು ಬ್ರಹ್ಮಾನಂದಂ ಅವರನ್ನು ಭೇಟಿ ಮಾಡಿದಾಗ ಅವರ ಜೊತೆಗೆ ತೆಗೆಸಿಕೊಂಡಂತಹ ಕೆಲ ಸುಂದರ ಫೋಟೋಗಳನ್ನು ತಮ್ಮ instagram ಖಾತೆಯಲ್ಲಿ ಪೋಸ್ಟ್ ಮಾಡಿ ಹೃದಯದ ಎಮೋಜಿಯ ಕ್ಯಾಪ್ಷನ್ ಹಾಕಿದ್ದಾರೆ. ಸದ್ಯ ಈ ಫೋಟೋಗೆ ಒಂದು ಲಕ್ಷಕ್ಕೂ ಹೆಚ್ಚಿನ ಲೈಕ್ಸ್ ಗಳ ಸುರಿಮಳೆಯನ್ನು ಹರಿಸುವ ಮೂಲಕ ನೆಟ್ಟಿಗರು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.

advertisement

Leave A Reply

Your email address will not be published.