7 Hot News
A Karnataka Times Affiliate Kannada News Portal

ಎಷ್ಟೇ ಕೋಟಿ ಕೊಟ್ಟರೂ ಬಿಗ್ ಬಾಸ್ ಮನೆಗೆ ಕಾಲು ಇಡಲ್ಲ ಎಂದಿದ್ದ ಸಂಗೀತಾ ಶೃಂಗೇರಿ, ಈಗ ಓಡೋಡಿ ಬಿಗ್ ಬಾಸ್ ಮನೆಗೆ ಹೋಗಲು ಕಾರಣವೇನು ಗೊತ್ತಾ? ಹಳೆಯ ವಿಡಿಯೋ ಇಲ್ಲಿದೆ ನೋಡಿ!!

advertisement

ಬಿಗ್ ಬಾಸ್ ಕನ್ನಡ ಸೀಸನ್ 10 ವೀಕ್ಷಕರಿಗೆ ಜಬರ್ದಸ್ತ್ ಮನೋರಂಜನೆಯನ್ನು ನೀಡಿದ್ದು ಕಳೆದ ಬಾರಿ ಸಂಗೀತ ಹಾಗೂ ವಿನಯ್ ಗೌಡ (Vinay Gowda)ಅವರ ನಾಯಕತ್ವದಲ್ಲಿ ಮೂಡಿಬಂದಂತಹ ಹಳ್ಳಿ ಜೀವನದ ಟಾಸ್ಕ್ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಚರ್ಚೆಗೆ ಗುರಿಯಾಗಿದ್ದು, ಸುದೀಪ್ ಅವರು ಕೂಡ ಶನಿವಾರ ಮತ್ತು ಭಾನುವಾರದ ಕಾರ್ಯಕ್ರಮದಲ್ಲಿ ತಪ್ಪು ಮಾಡಿದವರಿಗೆಲ್ಲ ಸರಿಯಾದ ಕ್ಲಾಸ್ ತೆಗೆದುಕೊಂಡು ಅವರವರ ತಪ್ಪಿನ ಮನವರಿಕೆ ಮಾಡುವ ಪ್ರಯತ್ನ ಪಟ್ಟರು.

advertisement

ಹಾಗೂ ಇನ್ನು ಕೆಲವರ ಅದ್ಭುತ ಆಟಗಾರಿಕೆಯನ್ನು ಶ್ಲಾಘಿಸಿದರು. ಸೋಶಿಯಲ್ ಮೀಡಿಯಾದಲ್ಲಿ ಕಳೆದೆರಡು ವಾರಗಳಿಂದ ವ್ಯಾಪಕ ಮೆಚ್ಚುಗೆಯನ್ನು ಪಡೆದುಕೊಳ್ಳುತ್ತಿರುವಂತಹ ನಟಿ ಸಂಗೀತ ಶೃಂಗೇರಿ (Sangeetha Sringeri) ಬಿಗ್ ಬಾಸ್ ಫಿನಾಲೆ ಸ್ಪರ್ಧಿಗಳಲ್ಲಿ ಒಬ್ಬರಾಗಿ ಖಂಡಿತ ಇರುತ್ತಾರೆ ಎಂಬ ಅಭಿಪ್ರಾಯಗಳು ಅಭಿಮಾನಿಗಳ ವಲಯದಿಂದ ಕೇಳಿ ಬರುತ್ತಿದೆ. ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದಂತಹ ಹರ ಹರ ಮಹದೇವ ಎಂಬ ಧಾರಾವಾಹಿಯ ಮೂಲಕ ತಮ್ಮ ನಟನ ಕರಿಯರ್ರನ್ನು ಪ್ರಾರಂಭ ಮಾಡಿದಂತಹ ಸಂಗೀತ ಶೃಂಗೇರಿ (Sangeetha Sringeri)

advertisement

ಸತಿ ಎಂಬ ಪೌರಾಣಿಕ ಪಾತ್ರದ ಮೂಲಕ ಕನ್ನಡಿಗರ ಮನಸ್ಸನ್ನು ಗೆದ್ದಿದ್ದರು. ಹೌದು ಸ್ನೇಹಿತರೆ ನೀಡಿದಂತಹ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಿ ಪ್ರತಿದಿನ ದೇವತೆಯ ರೂಪದಲ್ಲಿ ಕನ್ನಡಿಗರನ್ನು ರಂಜಿಸುತ್ತಿದ್ದಂತಹ ಸಂಗೀತ ಅವರು ಅನಂತರ ಸೂಪರ್ ಜೋಡಿ (Super jodi) ಸೀಸನ್ ಎರಡರಲ್ಲಿಯೂ ಭಾಗವಹಿಸಿ ಗುರುತಿಸಿಕೊಂಡರು. 2018ರಲ್ಲಿ ಏ ಪ್ಲಸ್ ಎಂಬ ಚಿತ್ರದ ಮೂಲಕ ಬೆಳ್ಳಿತರೆಗೆ ಪಾದಾರ್ಪಣೆ ಮಾಡಿ ತಮ್ಮ ಅಮೋಘ ನಟನೆಯ ಮೂಲಕ ಒಳ್ಳೆ ಸಿನಿಮಾದ ಅವಕಾಶಕ್ಕಾಗಿ ಎದುರು ನೋಡುತ್ತಿದ್ದ,

advertisement

advertisement

ಸಂಗೀತ ಅವರಿಗೆ ಬ್ರೇಕ್ ತಂದು ಕೊಟ್ಟಿದ್ದು ರಕ್ಷಿತ್ ಶೆಟ್ಟಿ ಅವರ ಚಾರ್ಲಿ ತ್ರಿಪಲ್ ಸೆವೆನ್ ಸಿನಿಮಾ ಕನ್ನಡ ತೆಲುಗು ಹಾಗೂ ತಮಿಳು ಇಂಡಸ್ಟ್ರಿಯಲ್ಲಿ ಬಹು ದೊಡ್ಡ ಮಟ್ಟದ ಹೆಸರನ್ನು ಮಾಡಿದ್ದ ಸಂಗೀತ ಅವರು ಡಾರ್ಲಿಂಗ್ ಕೃಷ್ಣಾ (Darling Krishna) ಅವರೊಂದಿಗೆ ಲಕ್ಕಿಮಾನ್ ಚಿತ್ರದ ಮೂಲಕ ತಮ್ಮ ಬೇಡಿಕೆಯನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುತ್ತಾರೆ. ಮತ್ತಷ್ಟು ಬ್ರೇಕ್ಗಾಗಿ ಬಿಗ್ ಬಾಸ್ ಸ್ಪರ್ಧೆಯನ್ನು ಆಯ್ಕೆ ಮಾಡಿಕೊಂಡಂತಹ ಸಂಗೀತ ತಮ್ಮ ನೇರ ನುಡಿ ಪ್ರಬಲ ನಡುವಳಿಕೆಯಿಂದ ವೀಕ್ಷಕರ ಮನಸ್ಸನ್ನು ಗೆಲ್ಲುತ್ತಿದ್ದು, ಅಭಿಮಾನಿಗಳ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ.

advertisement

advertisement

advertisement

ಹೀಗಿರುವಾಗ ಕಳೆದ ಕೆಲವು ತಿಂಗಳ ಹಿಂದೆ ಯೂಟ್ಯೂಬ್ ಚಾನೆಲ್ನ ಸಂದರ್ಶನ ಒಂದರಲ್ಲಿ ನಟಿ ಸಂಗೀತ ಶೃಂಗೇರಿ ಮಾತನಾಡುವಾಗ ಸಂದರ್ಶಕರು ಬಿಗ್ ಬಾಸ್ ಮನೆಗೆ ಹೋಗುವಂತಹ ಅವಕಾಶ ಸಿಕ್ಕರೆ ಹೋಗುತ್ತೀರಾ? ಎಂಬ ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಸಂಗೀತ ಖಂಡಿತ ಹೋಗಲ್ಲ ಕೋಟಿ ಕೊಟ್ಟರು ನಾನು ಹೋಗೋದಿಲ್ಲ ಎಂದು ಕಡಾ ಖಂಡಿತವಾಗಿ ಹೇಳಿಬಿಡುತ್ತಾರೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿತ್ತು ಸಂಗೀತ ಅವರನ್ನು ಟ್ರೋಲ್ ಮಾಡಲಾಗುತ್ತಿದೆ.

advertisement

Leave A Reply

Your email address will not be published.