ಹೆಣ್ಣಾಗಿ ಬದಲಾಗಿರುವ ಬಿಗ್ ಬಾಸ್ ಮನೆಯ ಸ್ಪರ್ಧಿ ನೀತು ವನಜಾಕ್ಷಿಯವರ ಹಿನ್ನಲೆ ಏನು ಗೊತ್ತಾ? ಇಲ್ಲಿದೆ ನೋಡಿ ಮಾಹಿತಿ!!

advertisement
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಸೀಸನ್ ಹತ್ತರಲ್ಲಿ ಸ್ಪರ್ಧಿಯಾಗಿ ಭಾಗವಹಿಸುತ್ತಾ ತಮ್ಮ ಅದ್ಭುತ ಆಟಗಾರಿಕೆ ನಡುವಳಿಕೆ ಹಾಗೂ ಜನರನ್ನು ರಂಜಿಸುವಂತಹ ಕಲೆಯಿಂದ ನೀತು ವನಜಾಕ್ಷಿ(Neethu Vanajakshini) ಅವರು ಬಿಗ್ ಬಾಸ್ ವೀಕ್ಷಕರು ಫೇವರೆಟ್ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದಾರೆ. ಎಲ್ಲ ಟಾಸ್ಕ್ ನಲ್ಲಿಯೂ ಅದ್ಭುತ ಪರಫಾರ್ಮೆನ್ಸ್ ನೀಡುವುದರ ಜೊತೆಗೆ ದೃಢ ಹಾಗೂ ನೇರ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ವೀಕ್ಷಕರಿಗೆ ಹತ್ತಿರವಾಗಿರುವಂತಹ ನೀತು ವನಜಾಕ್ಷಿಯವರ ಅಭಿಮಾನಿಗಳ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಲೇ ಇದೆ.
advertisement
ಸಾಮಾಜಿಕ ಜಾಲತಾಣಗಳಲ್ಲಿಯೂ ನೀತು ಅವರ ಹೆಸರಿನಲ್ಲಿ ಸಾಕಷ್ಟು ಫ್ಯಾನ್ ಪೇಜ್ ಗಳು ಕ್ರಿಯೇಟ್ ಆಗಿದ್ದು, ಅವರ ಕ್ಯೂಟೆಸ್ಟ್ ಫೋಟೋಗಳನ್ನು ಇನ್ಸ್ಟಾಗ್ರಾಮ್ ಫೇಸ್ಬುಕ್ ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ವೈರಲ್ ಮಾಡಲಾಗುತ್ತಿದೆ. ಫ್ಯಾಶನ್ ಲೋಕದಲ್ಲಿ(Fashion world) ಒಳ್ಳೆಯ ಅಭಿವೃಚಿಯನ್ನು ಹೊಂದಿರುವಂತಹ ನೀತು ಅವರು 2019ರಲ್ಲಿ ಟ್ರಾನ್ಸ್ ಕ್ವೀನ್ ಇಂಡಿಯಾ(Trans queen India) ಎಂಬ ಸ್ಪರ್ಧೆಯಲ್ಲಿ ಭಾಗವಹಿಸಿ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡರು.
advertisement
2020 ಇಂಟರ್ನ್ಯಾಷನಲ್ ಕ್ವೀನ್ ಫ್ಯಾಶನ್ ಶೋನಲ್ಲಿ(International queen fashion show) ಸ್ಪರ್ಧಿಸಿ ಭಾರತವನ್ನು ಪ್ರತಿನಿಧಿಸಿದಂತಹ ಅದ್ಭುತ ಮಾಡೆಲ್. ಗದಗ ಜಿಲ್ಲೆಯವರಾದಂತಹ ನೀತು ಅವರು ಮನೆಯ ಕಿರಿ ಮಗನಾಗಿ ಜನಿಸಿದರು. ಎಲ್ಲರಂತೆ ಸಾಮಾನ್ಯ ಹುಡುಗನಾಗಿದ್ದಂತಹ ನೀತು ಅವರಿಗೆ ಮನೆಯವರು ಮಂಜುನಾಥ್ ಎಂಬ ಹೆಸರಿಡುತ್ತಾರೆ ಆದರೆ ವರ್ಷಗಳು ಉರುಳಿದಂತೆ ಅವರ ದೇಹದಲ್ಲಿ ಉಂಟಾದಂತಹ ಕೆಲ ಬದಲಾವಣೆಗಳನ್ನು ಅದರ ಅರ್ಥವನ್ನು ತಿಳಿದುಕೊಂಡಂತಹ ಮಂಜುನಾಥ್(Manjunath),
advertisement
advertisement
ನೀತು ಆಗಿ ಬದಲಾದರು ಇದಕ್ಕೆ ಅವರ ತಾಯಿ ಹಾಗೂ ಅಕ್ಕನ ಸಂಪೂರ್ಣ ಬೆಂಬಲ ದೊರಕುತ್ತದೆ. ಈ ಕಾರಣದಿಂದ ತಮ್ಮ ಹೆಸರಿನ ಮುಂದೆ ತಮ್ಮ ತಾಯಿಯ ಹೆಸರಾದ ವನಜಾಕ್ಷಿಯನ್ನು ಸೇರ್ಪಡೆಗೊಳಿಸಿಕೊಂಡಿದ್ದಾರೆ. ಹೀಗೆ ಕಾಲಕ್ರಮೇಣ ತಮ್ಮ ಹಳ್ಳಿಯನ್ನು ಬಿಟ್ಟು ಬೆಂಗಳೂರಿಗೆ ಬಂದಂತಹ ನೀತು ವನಜಾಕ್ಷಿ ಅವರು ತಮ್ಮದೇ ಆದ ಸ್ವಂತ ಬದುಕನ್ನು ಕಟ್ಟಿ ಕೊಳ್ಳಲು ಹಲವಾರು ರೀತಿಯಾದಂತಹ ಯೋಜನೆಯನ್ನು ರೂಪಿಸಿದರು.
advertisement
ಫ್ಯಾಶನ್ ಶೋಗಳಲ್ಲಿ ಕಾಣಿಸಿಕೊಂಡರು ಹಾಗೂ ಹಲವಾರು ಸ್ಪರ್ಧೆಯಲ್ಲಿ ಗೆದ್ದು ಬೀಗುವ ಮೂಲಕ ತಾವು ಯಾವುದಕ್ಕೂ ಕಡಿಮೆ ಇಲ್ಲ ಎಂಬುದನ್ನು ಪ್ರತಿ ಹಂತದಲ್ಲೂ ಸಾಬೀತುಪಡಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಭಾರತದ ನಂಬರ್ ಒನ್ ಟ್ಯಾಟು ಆರ್ಟಿಸ್ಟ್ ಆಗಿಯೂ ಗುರುತಿಸಿಕೊಂಡಿರುವ ನೀತಿ ವನಜಾಕ್ಷಿಣಿ ಬೆಂಗಳೂರಿನಲ್ಲಿ ಟ್ಯಾಟೂ ಅಂಗಡಿಯನ್ನು ಇಟ್ಟುಕೊಂಡಿದ್ದಾರೆ. ಇದರ ಜೊತೆಗೆ ರೆಸ್ಟೋರೆಂಟ್ ಒಂದನ್ನು ಶುರು ಮಾಡಿದ್ದಾರೆ ಹಾಗೂ ಬ್ಯೂಟಿ ಪಾರ್ಲರ್ ಕೂಡ ನಡೆಸಿಕೊಂಡು ಬರುತ್ತಿದ್ದಾರೆ.
advertisement

advertisement
ಇಷ್ಟೆಲ್ಲಾ ಸಾಧನೆ ಮಾಡಿರುವಂತಹ ನೀತು ಅವರು ಸದ್ಯ ಬಿಗ್ ಬಾಸ್(Big boss) ಮನೆಯಲ್ಲಿ ತಮ್ಮ ವ್ಯಕ್ತಿತ್ವ ಎಂತದ್ದು ಎಂಬುದನ್ನು ಜನರ ಮುಂದೆ ಪರಿಚಯಿಸಿಕೊಳ್ಳುತ್ತಿದ್ದು, ಇವರ ಅದ್ಭುತ ಆಟಗಾರಿಕೆ ಹಾಗೂ ಇತರರೊಂದಿಗೆ ವರ್ತಿಸುವ ಗುಣಕ್ಕೆ ಬಿಗ್ ಬಾಸ್ ವೀಕ್ಷಕರು ಫಿದಾ ಆಗಿದ್ದು, ಅವರ ಹೆಸರಿನಲ್ಲಿ ಸಾಕಷ್ಟು ಪ್ಯಾನ್ ಪೇಜ್ಗಳನ್ನು ಕ್ರಿಯೇಟ್ ಮಾಡಿ ಅದರಲ್ಲಿ ನೀತು ವನಜಾಕ್ಷಿಯವರ ಬ್ಯೂಟಿಫುಲ್ ಬಿಗ್ ಬಾಸ್ ಜರ್ನಿಯ ಫೋಟೋಗಳನ್ನು ಹಂಚಿಕೊಳ್ಳಲಾಗುತ್ತಿದೆ.
advertisement