ಕೆಲವು ಮಹಿಳೆಯರ ಬದುಕಿನತ್ತ ಕಣ್ಣು ಹಾಯಿಸಿದರೆ ಸಾಕಷ್ಟು ಪ್ರಶ್ನೆಗಳು ಮನಸ್ಸಿನಲ್ಲಿ ಸಹಜವಾಗಿಯೇ ಮೂಡುತ್ತದೆ. ಅದಲ್ಲದೇ ಕೆಲವರ ಬದುಕಿನಲ್ಲಿ ನಡೆದ ಘಟನೆಗಳು ಎಂತಹವರನ್ನು ಕೂಡ ಒಂದು ಕ್ಷಣ ಬೆಚ್ಚಿ ಬೀಳಿಸುತ್ತದೆ. ಈ ಫೂಲನ್ ದೇವಿಯ ಅನೇಕರಿಗೆ ಗೊತ್ತಿರಬಹುದು. 1980 ರ ದಶಕದಲ್ಲಿ ಚಂಬಲ್ ಕಣಿವೆಯನ್ನು ಭಯಭೀತಗೊಳಿಸಿದ ದ-ರೋಡೆಕೋರ ಗ್ಯಾಂಗ್‌ಗಳಲ್ಲಿ ಫೂಲನ್ ಒಬ್ಬರಾಗಿದ್ದರು ಎಂದರೆ ಅಚ್ಚರಿಯೆನಿಸಬಹುದು. 1981ರಲ್ಲಿ ಉತ್ತರ ಪ್ರದೇಶದ ಬೆಹಮಾಯಿ ಗ್ರಾಮದಲ್ಲಿ ನಡೆದ ಹ-ತ್ಯಾಕಾಂಡವು ಇವತ್ತಿಗೂ ಕೂಡ ಒಂದು ಕ್ಷಣ ಎಲ್ಲರ ಮೈ ಜುಮ್ಮ್ ಎನ್ನುವಂತೆ ಮಾಡಿ ಬಿಡುತ್ತದೆ. ಅಂದು ಫೆಬ್ರವರಿ14ರಂದು ಫೂಲನ್ ದೇವಿ ಸೇರಿದಂತೆ ಆಕೆಯ ಗ್ಯಾಂಗ್ ನಿಂದ ಮೇಲ್ವರ್ಗದ ಠಾಕೂರ್ ಸಮುದಾಯಕ್ಕೆ ಸೇರಿದ 20 ಮಂದಿಯನ್ನು ಶೂ-ಟ್ ಮಾಡಿ ಕೊಂದಿದ್ದರು. ಈ ಪ್ರಕರಣ ಈಗ ನ್ಯಾಯಾಲಯದಲ್ಲಿ ಕಳೆದ ಜನವರಿ 18 ರಂದು ಕಾನ್ಪುರ ಕೋರ್ಟ್ ಈ ಘಟನೆಗೆ ಸಂಬಂಧಪಟ್ಟಂತೆ ತೀರ್ಪು ನೀಡಿದೆ.
ಹೌದು, 1963 ರಲ್ಲಿ ಜನಿಸಿದ ಫೂಲನ್ ದೇವಿ ಮೇಲ್ವರ್ಗದವರಿಂದ ತುಳಿತಕ್ಕೊಳಗಾಗಿದ್ದರು. ಆದಾದ ಬಳಿಕ ಈಕೆಯು ಕೂಡ ದ-ರೋಡೆಕೋರರ ಗುಂಪನ್ನು ಸೇರಿಕೊಂಡಿದ್ದಳು. 70, 80 ಮತ್ತು 90 ರ ದಶಕಗಳಲ್ಲಿ, ದ-ರೋಡೆಕೋರ ಗ್ಯಾಂ-ಗ್‌ಗಳು ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದ ಕಣಿವೆಗಳಲ್ಲಿ ಇದ್ದವು. ಇತ್ತ ಬಡತನ ಮತ್ತು ದೌ-ರ್ಜನ್ಯಗಳಿಂದ ಸೋತೋಗಿದ್ದ ಫೂಲನ್ ಗ್ಯಾಂಗ್ ಸೇರಿಬಿಟ್ಟಿದ್ದಳು. ಈ ವೇಳೆಯಲ್ಲಿ ಫೂಲನ್ ಆ ಗ್ಯಾಂಗ್‌ನಲ್ಲಿ ಮೇಲ್ಜಾತಿಯ ವಿಕ್ರಮ್ ಮಲ್ಲನನ್ನು ಪ್ರೀತಿಸಿದಳು.
ಈ ಪ್ರೀತಿಯ ವಿಚಾರವು ಗುಂಪಿನಲ್ಲಿದ್ದವರನ್ನು ಕೆರಳಿಸುವಂತೆ ಮಾಡಿತ್ತು. ಹೀಗಿರುವಾಗ ಗ್ಯಾಂ-ಗ್ ಗಳ ನಡುವೆಯೇ ಗುಂ-ಡಿನ ಚಕಮಕಿಯಲ್ಲಿ ವಿಕ್ರಮ್ ಮಲ್ಲ ಜೀವ ತೆಗೆದೇ ಬಿಟ್ಟರು. ಆದಾದ ಬಳಿಕ ಲಾಲಾ ರಾಮ್ ಮತ್ತು ಶ್ರೀ ರಾಮ್ ಎಂಬ ಇಬ್ಬರು ಗ್ಯಾಂ-ಗ್ ಸದಸ್ಯರು ಫೂಲನ್ ದೇವಿಯನ್ನು ಅ-ಪಹರಿಸಿದ್ದರು. ಅದಲ್ಲದೇ ಈಕೆಯನ್ನು ಅ-ಪಹರಿಸಿ ಬೆಹಮೈಗೆ ಕರೆದೊಯ್ದು ನಿರಂತರವಾಗಿ ಆ-ತ್ಯಾಚಾರ ಮಾಡುತ್ತಿದ್ದರು.
ತನ್ನ ಪ್ರೇಮಿಯನ್ನು ಕಣ್ಣಾರೆ ಕೊಂ-ದದ್ದನ್ನು ಕಂಡ ಫೂಲನ್ ತನ್ನ ಪ್ರೇಮಿಯ ಕೊ-ಲೆ ಮತ್ತು ಆ-ತ್ಯಾಚಾರಕ್ಕೆ ಸೇ-ಡು ತೀರಿಸಿಕೊಳ್ಳಲು ಮುಂದಾದಳು. ಹೀಗಾಗಿ 1981, ಫೆಬ್ರವರಿ14, ಪ್ರೇಮಿಗಳ ದಿನದಂದು, ತನ್ನ ಗ್ಯಾಂಗ್‌ನೊಂದಿಗೆ ಬೆಹಮಾಯಿ ಗ್ರಾಮದ ಮೇಲೆ ದಾ-ಳಿ ಮಾಡಿ ಎಲ್ಲವನ್ನು ಲೂಟಿ ಮಾಡಿದ್ದಳು. ಅಷ್ಟೇ ಅಲ್ಲದೇ ತನ್ನನ್ನು ಆ-ತ್ಯಾಚಾರ ಮಾಡಿದ ಇಬ್ಬರು ದ-ರೋಡೆಕೋರರು ಸೇರಿದಂತೆ ಸಮುದಾಯದ 26 ಸದಸ್ಯರನ್ನು ಸಾಲುಗಟ್ಟಿ ಗುಂಡಿ-ಕ್ಕಿ ಕೊಂದಳು.
ಹೀಗಿರುವಾಗ ಅವರಲ್ಲಿ 6 ಮಂದಿ ಮಾತ್ರ ಬದುಕುಳಿದಿದ್ದು, 20 ಮಂದಿ ಸಾ-ವನ್ನಪ್ಪಿದ್ದರು. ಹ-ತ್ಯಾಕಾಂಡದ ಒಂದೆರಡು ವರ್ಷಗಳಲ್ಲಿ ಫೂಲನ್ ದೇವಿ ಕೂಡ ಶರಣಾದಳು. ಹದಿನೈದು ವರ್ಷ ಜೈ-ಲುವಾಸ ಅನುಭವಿಸಿದ್ದು, ಹೊರ ಬಂದ ಬಳಿಕ ರಾಜಕೀಯದಲ್ಲಿ ತೊಡಗಿದ್ದು, ಎರಡು ಬಾರಿ ಸಂಸದೆಯೂ ಆಗಿದ್ದರು. 2001 ರಲ್ಲಿ, ಅವರ ನಿವಾಸದ ಮುಂದೆ ಪ್ರತಿಸ್ಪರ್ಧಿ ಗ್ಯಾಂಗ್ ಆಕೆಯ ಕಥೆ ಮುಗಿಸಿ ಬಿಟ್ಟರು.
ಅದಲ್ಲದೇ ಆ-ತ್ಯಾಚಾರಕ್ಕೆ ಪ್ರತೀಕಾರವಾಗಿ 20 ಠಾಕೂರರನ್ನು ಕೊಂ-ದಿರುವುದಾಗಿ ಫೂಲನ್ ದೇವಿ ಹೇಳಿಕೆ ನೀಡಿದ್ದಳು. ಆದರೆ, ಫೂಲನ್ ದೇವಿಯ ಈ ವಾದವನ್ನು ಬೆಹಮಾಯಿ ಗ್ರಾಮಸ್ಥರು ನಿರಾಕರಿಸಿದ್ದರು. ಆ ಗ್ರಾಮಸ್ಥರಿಗೆ, ಈಕೆಯ ಮೇಲೆ ಆದ ಯಾವುದೇ ಆ-ತ್ಯಾಚಾರ ಘಟನೆಯ ಬಗ್ಗೆ ತಿಳಿದಿರಲಿಲ್ಲ. ಆದರೆ ಫೂಲನ್ ದೇವಿ ತಮ್ಮ ಗ್ರಾಮವನ್ನು ದ-ರೋಡೆ ಮಾಡಲು ಆಗಮಿಸಿದ್ದಳು. ಅವಳು 20 ಜನರನ್ನು ಗುಂಡಿಕ್ಕಿ ಕೊಂ-ದಿದ್ದಾಳೆ ಎನ್ನುವುದು ಮಾತ್ರ ಗ್ರಾಮಸ್ಥರ ಹೇಳುವ ಮಾತಾಗಿತ್ತು. ಹೀಗಾಗಿ ಈ ಪ್ರಕರಣದ ವಿಚಾರಣೆ ಕಾನ್ಪುರ ನ್ಯಾಯಾಲಯದಲ್ಲಿ ನಡೆದಿತ್ತು. ಕಳೆದ ಜ.6 ತೀರ್ಪು ನೀಡಬೇಕಿತ್ತು. ಆದರೆ, ಕೋರ್ಟ್ ಜೆ.ತೀರ್ಪು 16ಕ್ಕೆ ಮುಂದೂಡಿತು.
ಆದರೆ, ಬೆಹ್ಮಾಯಿ ಹ-ತ್ಯಾಕಾಂಡ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. ಈ ಪ್ರಕರಣದಲ್ಲಿ 23 ಆರೋಪಿಗಳಿದ್ದಾರೆ. ಆದರೆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಫೂಲನ್ ದೇವಿ ಸೇರಿದಂತೆ 16 ಜನರು ಈಗಾಗಲೇ ಸಾ-ವನ್ನಪ್ಪಿದ್ದಾರೆ. ಇತರ ಏಳು ಆರೋಪಿಗಳ ಪೈಕಿ ಪೋಸಾ ಜೈಲು ಶಿ-ಕ್ಷೆ ಅನುಭವಿಸುತ್ತಿದ್ದು, ಇನ್ನುಳಿದ್ದಂತೆ ಭೀಕಾ, ವಿಶ್ವನಾಥ್ ಮತ್ತು ಶ್ಯಾಂಬಾಬು ಜಾಮೀನಿನ ಮೇಲೆ ಹೊರಗಿದ್ದಾರೆ. ಉಳಿದ ಮೂವರಾದ ಮಾನ್ ಸಿಂಗ್, ರಾಮಕೇಶ್ ಮತ್ತು ವಿಶ್ವನಾಥ್ ಅಕಾ ಅಶೋಕ್ ಪರಾರಿಯಾಗಿದ್ದಾರೆ ಎನ್ನಲಾಗಿದೆ.