7 Hot News
A Karnataka Times Affiliate Kannada News Portal

ಕನ್ನಡತಿ ರಂಜನಿ ರಾಘವನ್ ಯಕ್ಷಗಾನ ಸ್ನೇಹಿತೆಯ ಜೊತೆ ಸುಂದರ ಕ್ಷಣಗಳು! ಇಲ್ಲಿದೆ ನೋಡಿ ಫೋಟೋಸ್!!

advertisement

ಸ್ನೇಹಿತರೆ ಹಲವು ವರ್ಷಗಳಿಂದ ನಮ್ಮ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ತಮ್ಮ ಮೋಹಕ ಸೌಂದರ್ಯ, ಎಂತಹ ಪಾತ್ರ ನೀಡಿದರು ಲೀಲಾಜಾಲವಾಗಿ ಅಭಿನಯಿಸಿ ಪಾತ್ರವೇ ತಾವಾಗುವಂತಹ ನಟನಾ ಕೌಶಲ್ಯವನ್ನು ಪರದೆಯ ಮುಂದೆ ತೊರ್ಪಡಿಸುತ್ತಾ ಸಿಕ್ಕಾಪಟ್ಟೆ ಫೇಮಸ್ ಆಗಿರುವಂತಹ ರಂಜಿನಿ ರಾಘವನ್(Ranjani Raghavan) ಅವರು ತಮ್ಮ ಶೂಟಿಂಗ್ ಕೆಲಸಗಳ ನಡುವೆಯೂ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸಕ್ರಿಯ ರಾಗಿದ್ದು ಆಗಾಗ ವಿಶೇಷವಾದ ಪೋಸ್ಟ್ಗಳನ್ನು ಹಂಚಿಕೊಳ್ಳುತ್ತಾ ಅಭಿಮಾನಿಗಳ ಮನಸ್ಸು ಸೆಳೆಯುತ್ತಿರುತ್ತಾರೆ.

advertisement

ಹೌದು ಗೆಳೆಯರೇ ಇತ್ತೀಚಿಗಷ್ಟೇ ಶಿರಸಿಯಲ್ಲಿ ನಡೆದ ಯಕ್ಷಗಾನ ಕಾರ್ಯಕ್ರಮಕ್ಕೆ ಅತಿಥಿಯಾಗಿ ತೆರಳಿ ಸಂಪೂರ್ಣ ಕಾರ್ಯಕ್ರಮವನ್ನು ವೀಕ್ಷಿಸಿ ಅದರ ಕೆಲ ಸುಂದರ ಚಿತ್ರಣಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ. ಈ ಫೋಟೋಗಳು ಸದ್ಯ ಸಿಕ್ಕಾಪಟ್ಟೆ ಆಗುತ್ತಿದೆ.

advertisement

ಮೂರು ದಿನಗಳ ಹಿಂದಷ್ಟೇ ಶಿರಸಿಯಲ್ಲಿ ನಮ್ಮನೆ ಹಬ್ಬ ಕಾರ್ಯಕ್ರಮದಲ್ಲಿ ಯಕ್ಷಗಾನವನ್ನು ಆಯೋಜಿಸಲಾಗಿತ್ತು, ಆ ಸಮಯದಲ್ಲಿ ಕುಮಾರಿ ತುಳಸಿ ಹೆಗಡೆಯವರು ತಮ್ಮ ಅದ್ಭುತ ಪರ್ಫಾರ್ಮೆನ್ಸ್ ಮೂಲಕ ಅಲ್ಲಿದ್ದಂತಹ ವೀಕ್ಷಕರ ಆಕರ್ಷಣೆಗೆ ಗುರಿಯಾದರೆ, ರಂಜಿನಿ ರಾಘವನ್(Ranjani Raghavan) ಹಾಗೂ ಮಾಸ್ಟರ್ ಹಿರಣ್ಣಯ್ಯ ಅವರು ಮುಖ್ಯ ಅತಿಥಿಗಳಾಗಿ ಬಂದು ಕನ್ನಡದ ಕಂಪನ್ನು ಇನ್ನಷ್ಟು ಹೆಚ್ಚು ಮಾಡಿದರು.

advertisement

advertisement

ಮಧ್ಯರಾತ್ರಿಯವರೆಗೂ ನಡೆದಂತಹ ಈ ಕಾರ್ಯಕ್ರಮವನ್ನು ಸಂಪೂರ್ಣವಾಗಿ ವೀಕ್ಷಿಸಿ, ಮನೆಗೆ ಬಂದ ನಂತರ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಇದರ ಕುರಿತಾದಂತಹ ಕೆಲ ಫೋಟೋಗಳನ್ನು ಹಾಗೂ ಮಾಹಿತಿಯನ್ನು ಹಂಚಿಕೊಂಡ ರಂಜಿನಿ ರಾಘವನ್ ‘ಕುಮಾರಿ ತುಳಸಿ ಹೆಗಡೆಯ ಯಕ್ಷಗಾನ, ಕಣ್ಣನ್ ಮಾವನವರ ಪ್ರಾಸ ಸ್ವಾರಸ್ಯ, ಕನ್ನಡದ ಅಸ್ಮಿತೆಯಂತಿರೋ ಗಣ್ಯರು, ಸಜ್ಜನ ಸಭೆ ಎಲ್ಲ ಸೇರಿ ಶಿರಸಿಯಲ್ಲಿ ನಡೆದ ನಮ್ಮನೆ ಹಬ್ಬ ಒಂದು ಮಾದರಿಯ ಕಾರ್ಯಕ್ರಮವಾಗಿತ್ತು” ಕಾರ್ಯಕ್ರಮದ ಕುರಿತು ತಮ್ಮ ಮನದಾಳದ ಮಾತನ್ನು ನಟಿ ರಂಜನಿ ರಾಘವನ್ ತೋಡಿಕೊಂಡಿದ್ದಾರೆ.

advertisement

advertisement

ಕಲೆ ಹಾಗೂ ಕನ್ನಡಕ್ಕೆ ಹೆಚ್ಚಿನ ಗೌರವ ನೀಡುವಂತಹ ರಂಜಿನಿ ಅವರು ಇತ್ತೀಚಿನ ದಿನಗಳಲ್ಲಿ ಇಂತಹ ಸಾಕಷ್ಟು ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಮೂಲಕ ಹೋದಲ್ಲೆಲ್ಲ ಕನ್ನಡದ ಕಂಪನ್ನು ಹೆಚ್ಚಿಸುತ್ತಾ ಕನ್ನಡಿಗರ ಪ್ರೀತಿಯನ್ನು ಗಳಿಸುತ್ತಿದ್ದಾರೆ. ಈಗಾಗಲೇ ರಾಜಹಂಸ(Rajahamsa) ಸಿನಿಮಾದ ಮೂಲಕ ನಾಯಕ ನಟಿಯಾಗಿ ಬಣ್ಣದ ಲೋಕದಲ್ಲಿ ಯಶಸ್ಸನ್ನು ಗಳಿಸಿರುವ ರಂಜಿನಿ ರಾಘವನ್ ಡೆ.ಡ್.ಲಿ ಸೋಮ ಅಲಿಯಾಸ್ ಆದಿ ಅವರು ಕಡಕ್ ಪೊಲೀಸ್ ಆಫೀಸರ್.

advertisement

ಆಗಿ ಕಾಣಿಸಿಕೊಳ್ಳುತ್ತಿರುವ ಕ್ಯಾಂಗರೊ (Kangaroo) ಚಿತ್ರದ ನಾಯಕ ನಟಿಯಾಗಿ ಕಾಣಿಸಿಕೊಳ್ಳುತ್ತಿರುವಂತಹ ಮಾಹಿತಿ ಈಗಾಗಲೇ ಹೊರ ಬಿದ್ದಿದೆ. ಸೋಶಿಯಲ್ ಮೀಡಿಯಾ ಗಳಲ್ಲಿ ಈ ಕುರಿತಾದಂತಹ ಕೆಲ ಪೋಸ್ಟ್ಗಳನ್ನು ಹಂಚಿಕೊಳ್ಳುವ ಮೂಲಕ ನನ್ನ ಮುಂದಿನ ಸಿನಿಮಾಗೆ ನಿಮ್ಮೆಲ್ಲರ ಆಶೀರ್ವಾದ ಸಿಗಲಿ ಎಂದು ಕೋರಿಕೊಂಡಿದ್ದಾರೆ.

advertisement

Leave A Reply

Your email address will not be published.