7 Hot News
A Karnataka Times Affiliate Kannada News Portal

ಖ್ಯಾತ ಜನಪ್ರಿಯ ನಟ ರಂಗಾಯಣ ರಘು ಅವರ ಮುದ್ದಾದ ಕುಟುಂಬ ಹೇಗಿದೆ ನೋಡಿ! ಹೆಂಡತಿ, ಮಗಳ ಜೊತೆ ಸುಂದರ ಕ್ಷಣಗಳು!!

advertisement

ಸಿನಿಮಾರಂಗದಲ್ಲಿ ಹೆಸರು ಸಂಪಾದನೆ ಮಾಡಿಕೊಂಡಿರುವ ನಟರ ಸಾಲಿಗೆ ರಂಗಾಯಣ ರಘು (Rangayana Raghu) ಸೇರಿಕೊಳ್ಳುತ್ತಾರೆ. ತನ್ನ ಮಾತಿನ ಶೈಲಿ ಹಾಗೂ ನಟನೆಯ ಶೈಲಿಯಿಂದಲೇ ಎಲ್ಲರ ಮನಸ್ಸು ಗೆದ್ದಿರುವ ರಂಗಾಯಣ ರಘು ಸಿನಿಮಾರಂಗದ ಸಕ್ರಿಯ ನಟರಲ್ಲಿ ಒಬ್ಬರು. ಈ ನಟನ ಹೆಸರು ಕೇಳಿದರೆ ತಲೆ ಬಾಚ್ಕೋಳಿ ಪೌಡರ್ ಹಾಕೊಳ್ಳಿ ಎನ್ನುವ ಡೈಲಾಗ್ ನೆನಪಿಗೆ ಬರುತ್ತದೆ, ಅಷ್ಟು ಫೇಮಸ್ ಈ ನಟ ಹಾಗೂ ಇವರ ಡೈಲಾಗ್.

advertisement

ಸದ್ಯಕ್ಕೆ ನಟ ರಂಗಾಯಣ ರಘುರವರ ಫೋಟೋವೊಂದು ಎಲ್ಲರ ಗಮನ ಸೆಳೆಯುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ಫೋಟೋದಲ್ಲಿ ರಂಗಾಯಣ ರಘು ಜೊತೆಗೆ ಮಡದಿ ಹಾಗೂ ಮಗಳು ಇದ್ದಾರೆ. ಮೂವರು ಜೊತೆಗಿರುವ ಫೋಟೋ ಕಂಡು ಫ್ಯಾನ್ಸ್ ಖುಷಿ ಪಟ್ಟಿದ್ದಾರೆ. ಈ ಫೋಟೋಗೆಗೆ ಮೆಚ್ಚುಗೆ ವ್ಯಕ್ತವಾಗಿವೆ.

advertisement

ಖ್ಯಾತ ಹಾಸ್ಯ ನಟ ರಂಗಾಯಣ ರಘುರವರ ಪತ್ನಿ ಹೆಸರು ಮಂಗಳ (Mangala). ಮಂಗಳವರು ಬೆಂಗಳೂರಿನ ವಿಶ್ವವಿದ್ಯಾಲಯದಲ್ಲಿ ಎಂ ಎ ಪದವಿಯನ್ನು ಪಡೆದುಕೊಂಡಿದ್ದಾರೆ. ರಂಗಾಯಣರಘು ಪತ್ನಿ ಮಂಗಳ ಜೊತೆ ಸೇರಿಕೊಂಡು ಬೆಂಗಳೂರಿನಲ್ಲಿ ಸಂಚಾರಿ ಥಿಯೇಟರ್ ( Sanchari Theatre) ಆರಂಭಿಸಿದ್ದಾರೆ. ಸಂಚಾರಿ ಥಿಯೇಟರ್ನಲ್ಲಿ ಮಂಗಳ ಅವರು ಕ್ರಿಯೇಟಿವ್ ಡೈರೆಕ್ಟರ್ ಆಗಿ ಕೆಲಸವನ್ನು ಮಾಡುತ್ತಿದ್ದು ಎಲ್ಲವನ್ನು ನಿಭಾಯಿಸಿಕೊಂಡು ಹೋಗುತ್ತಿದ್ದಾರೆ.

advertisement

ರಂಗಾಯಣ ರಘು ಹಾಗೂ ಮಂಗಳ ದಂಪತಿಗಳಿಗೆ ಒಬ್ಬ ಮುದ್ದಾದ ಮಗಳಿದ್ದು, ಆಕೆಯ ಹೆಸರು ಚುಕ್ಕಿ (Chukki). ಈಗಾಗಲೇ ಬೆಂಗಳೂರಿನಲ್ಲಿ ತಮ್ಮ ಡಿಗ್ರಿ ವಿದ್ಯಾಭ್ಯಾಸವನ್ನು ಮುಗಿಸಿದ್ದಾಳೆ. ಬಿಡುವು ಸಿಕ್ಕಾಗ ಥಿಯೇಟರ್ ಕಡೆಗೆ ತೆರಳಿ ಅಲ್ಲಿ ಹೆಚ್ಚು ಸಮಯ ಕಳೆಯುತ್ತಾಳೆ. ಇತ್ತ ರಂಗಾಯಣ ರಘು ಸಿನಿಮಾ ಹಾಗೂ ಸಂಚಾರಿ ಥಿಯೇಟರ್ ಅನ್ನು ಬ್ಯಾಲೆನ್ಸ್ ಮಾಡಿಕೊಂಡು ಹೋಗುತ್ತಿದ್ದಾರೆ.

advertisement

advertisement

ನಟ ರಂಗಾಯಣ ರಘುರವರ ಬಗ್ಗೆ ಹೇಳುವುದಾದರೆ, ಚಂದನವನದಲ್ಲಿ ಹಾಸ್ಯ ನಟನಾಗಿ, ಖಳ ನಾಯಕನಾಗಿ ಹಾಗೂ ಪೋಷಕ ಪಾತ್ರದಲ್ಲಿ ನಟಿಸಿ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಸಂಪಾದನೆ ಮಾಡಿಕೊಂಡಿದ್ದಾರೆ. ಇವರು ಮೈಸೂರಿನ ಖ್ಯಾತ ರಂಗಸಂಸ್ಥೆ ರಂಗಾಯಣದ ಪ್ರತಿಭೆಯಾಗಿದ್ದು ಸಿನಿಲೋಕದಲ್ಲಿ ಬದುಕು ಕಟ್ಟಿಕೊಂಡಿದ್ದಾರೆ.

advertisement

Rangayana Raghu Family Photos
Rangayana Raghu Family Photos

advertisement

ತುಮಕೂರು (Tumakur) ಜಿಲ್ಲೆಯ ಪಾವಗಡ ತಾಲೂಕಿನ ಕೊಟ್ಟೂರಿನವರಾದ ಇವರು, ನಾಲ್ಕನೇ ತರಗತಿವರೆಗೆ ಊರಲ್ಲೇ ಓದಿ ನಂತರ ಬೆಂಗಳೂರಿಗೆ ಬಂದರು. 8ನೇ ಕ್ಲಾಸ್‌ನಿಂದಲೇ ನಾಟಕದ ಬಗ್ಗೆ ಆಸಕ್ತಿಯಿದ್ದ ರಘುರವರು ಓದು ತಲೆಗೆ ಹತ್ತಲಿಲ್ಲ. ಹೀಗಾಗಿ ಎಸ್ ಎಸ್ ಎಲ್ ಸಿಯಲ್ಲಿ ಫೇಲ್ ಆಗಿ ಊರಿಗೆ ತೆರಳಿದರು. ಬಳಿಕ ಬೆಂಗಳೂರಿಗೆ ಬಂದು ನ್ಯಾಷನಲ್ ಕಾಲೇಜು ಸೇರಿದರು. 1988 ರಲ್ಲಿ ಮೈಸೂರಿನ ರಂಗಸಂಸ್ಥೆ `ರಂಗಾಯಣ’ (Rangayana) ಕ್ಕೆ ಸೇರಿಕೊಂಡರು.

advertisement

ತದನಂತರದಲ್ಲಿ ಹಂಸಲೇಖ ನಿರ್ದೇಶನದ `ಸುಗ್ಗಿ’ (Suggi) ಚಿತ್ರದಲ್ಲೊಂದು ಪಾತ್ರ ಮಾಡಿದರು. ಆದರೆ ಈ ಚಿತ್ರ ತೆರೆಕಾಣಲಿಲ್ಲ. 2002 ರಲ್ಲಿ ಎಂ.ಎಸ್.ರಮೇಶ್ ನಿರ್ದೇಶನದ ಕಿಚ್ಚ ಸುದೀಪ್ ಅಭಿನಯದ `ಧಮ್’ (Dham) ಚಿತ್ರದಲ್ಲಿ ನಟಿಸಿದರು. ಆದರೆ ಇವರ ಸಿನಿ ಕೆರಿಯರ್ ಗೆ ದುನಿಯಾ (Duniya) ಸಿನಿಮಾ ಬ್ರೇಕ್ ಕೊಟ್ಟಿತು. ಈಗಾಗಲೇ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಸಿನಿ ಪ್ರಿಯರನ್ನು ನಕ್ಕು ನಗಿಸಿ ಎಲ್ಲರ ಪ್ರೀತಿಯನ್ನು ಸಂಪಾದಿಸಿ ಕೊಂಡಿದ್ದಾರೆ.

advertisement

Leave A Reply

Your email address will not be published.