7 Hot News
A Karnataka Times Affiliate Kannada News Portal

ಬಿಗ್ ಬಾಸ್ ಖ್ಯಾತಿಯ ಅರವಿಂದ್ ಕೆ ಪಿ ಅವರ ಸುಂದರ ಫ್ಯಾಮಿಲಿ ಫೋಟೋಸ್! ಸುಂದರ ಕ್ಷಣಗಳು ಹೇಗಿತ್ತು ನೋಡಿ!!

advertisement

2005ನೇ ಇಸ್ವಿಯಿಂದಲೂ ವೃತ್ತಿಪರ ಮೋಟರ್ ರೇಸರ್(Motor racer) ಆಗಿರುವಂತಹ ಅರವಿಂದ್ ಕೆಪಿ ಅವರು ಸಾಕಷ್ಟು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸ್ಪರ್ಧೆಗಳಲ್ಲಿ ನಮ್ಮ ಭಾರತವನ್ನು ಪ್ರತಿನಿಧಿಸುತ್ತಾ ಹಲವಾರು ಟ್ರೋಫಿಗಳನ್ನು ತಮ್ಮ ಮುಡುಗೇರಿಸಿಕೊಂಡಿದ್ದಾರೆ. ಚಿಕ್ಕಂದಿನಿಂದಲೂ ಮೋಟರ್ ರೇಸಿನ ಮೇಲೆ ಹೆಚ್ಚಿನ ಆಸಕ್ತಿಯನ್ನು ಹೊಂದಿದಂತಹ ಅರವಿಂದ್ ಕೆ ಪಿ(Arvindh KP) ಅವರು 2006ರಲ್ಲಿ ಟಿವಿಎಸ್ ರೇಸಿಂಗ್ ಗಲ್ಫ್ ಟ್ರ್ಯಾಕ್ ರಾಷ್ಟ್ರೀಯ ಚಾಂಪಿಯನ್ಶಿಪ್ ನಲ್ಲಿ ಭಾಗಿಯಾಗಿ ಗುರುತಿಸಿಕೊಂಡರು.

advertisement

ಅದರಿಂದ ಸಾಕಷ್ಟು ಮೋಟಾರ್ ಕ್ರಾಸ್, ಸೂಪರ್ ಕ್ರಾಸ್ ಇವೆಂಟ್ಗಳಂತಹ ವಿವಿಧ ಮೋಟಾರ್ ಸ್ಪೋರ್ಟ್ಸ್ ಗಳಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಳ್ಳುತ್ತಾ ಈವರೆಗೂ ಸಾಕಷ್ಟು ರೇಸ್‌ನಲ್ಲಿ ಸ್ಪರ್ಧಿಸಿ 17 ಟ್ರೋಫಿಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಭಾರತದ ನೆಲದಲ್ಲಿ ಅತಿ ದೊಡ್ಡ ಹೆಸರನ್ನು ಮಾಡಿರುವ ಅರವಿಂದ್ ಕೆಪಿ ಅವರು 2018ರಲ್ಲಿ ರೈಡ್ ದಿ ಹಿಮಾಲಯ(Ride tge himalaya) ಸ್ಪರ್ಧೆಯಲ್ಲಿ ತಮ್ಮ ಅದ್ಭುತ ಪ್ರದರ್ಶನದ ಮೂಲಕ ಅತಿ ದೊಡ್ಡ ವಿಜಯ ಪಡೆದರು.

advertisement

ಹೀಗೆ ತಮ್ಮ ಹತ್ತೊಂಬತ್ತನೇ ವಯಸ್ಸಿನಿಂದ ಮೋಟಾರ್ ರೇಸಿಂಗ್ ನಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಅರವಿಂದ್ ಕೆ ಪಿ(Arvindh KP) ಯವರು ಕೇವಲ ಬೈಕ್ ರೈಸಿಂಗ್ ಗೆ ಮಾತ್ರ ಸೀಮಿತವಾಗದೆ, ತಮ್ಮ ಹುಟ್ಟೂರಿನಲ್ಲಿ ಪ್ರಖ್ಯಾತಿ ಪಡೆದಿರುವ ಕಂಬಳದಲ್ಲಿಯೂ ಭಾಗಿಯಾಗಿದ್ದಾರೆ ಹಾಗೂ ಈಜುಗಾರನಾಗಿಯೂ ಗುರುತಿಸಿಕೊಂಡಿದ್ದಾರೆ.

advertisement

ಇದರ ಜೊತೆಜೊತೆಗೆ ಸಿನಿಮಾ ರಂಗದಲ್ಲಿಯೂ ತಮ್ಮ ಅದೃಷ್ಟ ಪರೀಕ್ಷೆಯನ್ನು ಮಾಡಿರುವ ಅರವಿಂದ್ ಕೆ ಪಿ ಯವರು ನಾನು ಮತ್ತು ವರಲಕ್ಷ್ಮಿ ಎಂಬ ಸಿನಿಮಾದ ಮೂಲಕ ಚೊಚ್ಚಲ ಬಾರಿಗೆ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿ ಆನಂತರ ಬೆಂಗಳೂರು ಡೇಸ್ ಎಂಬ ಮಲಯಾಳಂ ಸಿನಿಮಾದ ಮೂಲಕ ಗುರುತಿಸಿಕೊಂಡರು. ಹೀಗೆ ಸಾಕಷ್ಟು ಕ್ಷೇತ್ರದಲ್ಲಿ ತಮ್ಮ ಅಮೋಘ ಪ್ರತಿಭೆಯಿಂದ ಗುರುತಿಸಿಕೊಂಡಿದ್ದ ಅರವಿಂದ್ ಕೆ ಪಿ(Arvindh KP) ಅವರನ್ನು ಗುರುತಿಸಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಬಿಗ್ ಬಾಸ್ ಸೀಸನ್ ಎಂಟರ ಸ್ಪರ್ಧಿಯಾಗಿ ಆಯ್ಕೆ ಮಾಡಲಾಯಿತು.

advertisement

advertisement

advertisement

ತಮ್ಮ ಅದ್ಭುತ ಆಟಗಾರಿಕೆ ಹಾಗೂ ನಡೆಯಿಂದ ವೀಕ್ಷಕರ ಮನಸ್ಸನ್ನು ಗೆದ್ದಂತಹ ಅರವಿಂದ್ ಕೆ ಪಿ ಅವರು ಆ ಸೀಸನ್ನ ರನ್ನರ್ ಅಪ್ ಬಿಗ್ ಬಾಸ್ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡರು. ಈ ಬಳಿಕ ಬಿಗ್ ಬಾಸ್ ಮನೆಯಲ್ಲಿ ಪರಿಚಯವಾದಂತಹ ದಿವ್ಯ ಉರುಡುಗ(Divya Uruduga) ಅವರೊಂದಿಗೆ ಆತ್ಮೀಯವಾದ ಬಾಂಧವ್ಯವನ್ನು ಬೆಳೆಸಿಕೊಂಡಿರುವ ಅರವಿಂದ್ ಕೆಪಿ ಅರ್ಧಂಬರ್ಧ ಪ್ರೇಮಕಥೆ ಎಂಬ ಸಿನಿಮಾದ ನಾಯಕ ನಟನಾಗಿ ಅಭಿನಯಿಸಿ ಯಶಸ್ಸು ಕಾಣುತ್ತಿದ್ದಾರೆ.

advertisement

advertisement

ಹೌದು ಗೆಳೆಯರೇ ಇತ್ತೀಚಿಗಷ್ಟೇ ಬಿಡುಗಡೆಯಾದ ಇವರಿಬ್ಬರ ಮುದ್ದಾದ ಲವ್ ಸ್ಟೋರಿಗೆ ಪ್ರೇಕ್ಷಕರಿಂದ ಸಕಾರಾತ್ಮಕ ಅಭಿಪ್ರಾಯಗಳು ಹೇಳಿ ಬಂದಿದೆ. ಇನ್ನು ಅರವಿಂದ್ ಕೆ ಪಿ(Arvindh KP) ಅವರು ಕಳೆದ ಕೆಲವು ದಿನಗಳ ಹಿಂದಷ್ಟೇ ತಮ್ಮ ಫ್ಯಾಮಿಲಿ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ವೈರಲ್ ಆಗಿದ್ದಾರೆ. ತಮ್ಮ ಅಣ್ಣ ಪ್ರಶಾಂತ್ ಕೆ ಪಿ(Prashanth KP) ಅವರ ಹುಟ್ಟು ಹಬ್ಬದ ಅಂಗವಾಗಿ ತಮ್ಮ ಫ್ಯಾಮಿಲಿ ಫೋಟೋಗಳನ್ನು ಹಂಚಿಕೊಂಡಿರುವ ಅರವಿಂದ್ ಕೆ ಪಿ ಯವರು ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಅಣ್ಣ ಎಂಬ ಕ್ಯಾಪ್ಶನ್ ಬರೆದು ವಿಶೇಷವಾಗಿ ಶುಭ ಕೋರಿದ್ದಾರೆ.

advertisement

Leave A Reply

Your email address will not be published.