ಮೈ ಚಳಿ ಬಿಟ್ಟು ಮಸ್ತ್ ಡಾನ್ಸ್ ಮಾಡಿದ ನಟ ಪ್ರೇಮ್ ಪುತ್ರಿ ಅಮೃತಾ! ಮಸ್ತ್ ಡಾನ್ಸ್ ವಿಡಿಯೋ ನೋಡಿ!!

advertisement
ಟಗರು ಪಲ್ಯ ಸಿನಿಮಾದ ಮೂಲಕ ರಾಜ್ಯದಾದ್ಯಂತ ಹೆಚ್ಚು ಸದ್ದು ಮಾಡುತ್ತಿರುವಂತಹ ನಟಿ ಅಮೃತ ಪ್ರೇಮ್(Amruta prem) ಅವರು ಒಂದಲ್ಲ ಒಂದು ವಿಚಾರದಿಂದ ಸಾಮಾಜಿಕ ಜಾಲತಾಣದಲ್ಲಿಯೂ ವೈರಲಾಗುತ್ತಲಿರುತ್ತಾರೆ. ಅದರಂತೆ ನಟಿ ಅಮೃತ ಅವರ ಡ್ಯಾನ್ಸ್ ವಿಡಿಯೋ ಒಂದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ತಮ್ಮ ಡ್ಯಾನ್ಸ್ ಮಾಸ್ಟರ್ ಜೊತೆಗೆ ಅಮೃತ ಭರ್ಜರಿ ಸ್ಟೆಪ್ ಹಾಕಿರುವಂತಹ ವಿಡಿಯೋ ಇದಾಗಿದೆ. ಚಿಕ್ಕಂದಿನಿಂದಲೂ ತಮ್ಮ ತಂದೆಯಂತೆಯೇ ತಾನು ಓರ್ವ ಸ್ಟಾರ್ ಸೆಲೆಬ್ರಿಟಿ ಆಗಬೇಕು ಕನ್ನಡ ಸಿನಿಮಾ ರಂಗದಲ್ಲಿ ನಟಿಯಾಗಿ ಗುರುತಿಸಿಕೊಳ್ಳಬೇಕು ಎಂಬ ಆಸೆಯನ್ನು ಹೊಂದಿದ್ದಂತಹ ಅಮೃತ(Amrutha) ಅವರು ತಂದೆಯನ್ನು ನೋಡಿ ಅಭಿನಯ ಕಲಿಯುತ್ತಾ, ಸಣ್ಣ ವಯಸ್ಸಿನಲ್ಲಿ ಹಾಡು ಸಂಗೀತದಂತಹ ಲಲಿತ ಕಲೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು.
advertisement
ಬೆಂಗಳೂರಿನ ದಯಾನಂದ ಸಾಗರ ಕಾಲೇಜ್ ಆಫ್ ಇಂಜಿನಿಯರಿಂಗ್( Dayananda Sagar College of Engineering) ನಲ್ಲಿ ಪದವಿಯನ್ನು ಪಡೆದಿರುವಂತಹ ಅಮೃತ ಪ್ರೇಮ್ ತಮ್ಮ 20ನೇ ವಯಸ್ಸಿಗೆ ನಾಯಕ ನಟಿಯಾಗಿ ಟಗರು ಪಲ್ಯ ಚಿತ್ರದ ಮೂಲಕ ಬಣ್ಣದ ಲೋಕದ ಪ್ರವೇಶ ಮಾಡಿದ್ದಾರೆ. ಹೌದು ಗೆಳೆಯರೇ ತಮ್ಮ ಚೊಚ್ಚಲ ಸಿನಿಮಾದಲ್ಲಿಯೇ ಡಾಲಿ ಧನಂಜಯ್, ನಾಗಭೂಷಣ್, ರಂಗಾಯಣ ರಘು, ತಾರಾ ಅನುರಾಧ ಹಾಗೂ ಶರತ್ ಲೋಹಿತಾಶ್ವ( Sharath lohitashwa) ಅವರಂತಹ.
advertisement
ಸ್ಟಾರ್ ಸೆಲೆಬ್ರಿಟಿಗಳ ಜೊತೆಗೆ ತೆರೆ ಹಂಚಿಕೊಳ್ಳುವಂತಹ ಅವಕಾಶ ಪಡೆದುಕೊಂಡಿರುವಂತಹ ನಟಿ ಅಮೃತ ಪ್ರೇಮ್ ಅವರು ತಮ್ಮ ಸಿನಿಮಾದ ಪ್ರಚಾರದ ಕೆಲಸಗಳಲ್ಲಿ ಯಶಸ್ವಿಯಾಗಿ ತೊಡಗಿಕೊಂಡು ಬಿಗ್ ಬಾಸ್, ಜೋಡಿ ನಂಬರ್ ಒನ್ ಹಾಗೂ ಇನ್ನಿತರ ಟಿವಿ ಸಂದರ್ಶನಗಳಲ್ಲಿ ಕಾಣಿಸಿಕೊಂಡರು. ಹೀಗೆ ಅಕ್ಟೋಬರ್ 27, 2023 ರಂದು ರಾಜ್ಯದಾದ್ಯಂತ ಬಿಡುಗಡೆಗೊಂಡು ವಿಮರ್ಶಕರಿಂದಲೂ ಸಕಾರಾತ್ಮಕ ರೆಸ್ಪಾನ್ಸ್ ಪಡೆದುಕೊಂಡಂತಹ ಈ ಸಿನಿಮಾ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ.
advertisement
advertisement
ಡಾಲಿ ಧನಂಜಯ್ ಅವರ ನಿರ್ಮಾಣದಲ್ಲಿ ತಯಾರಾದಂತಹ ಈ ಸಿನಿಮಾದ ಮೂಲಕ ತಮ್ಮ ಮೊದಲ ಹೆಜ್ಜೆಯನ್ನು ಇಟ್ಟು ನಟನ ವೃತ್ತಿಯನ್ನು ಪ್ರಾರಂಭ ಮಾಡಿರುವಂತಹ ನಟಿ ಅಮೃತ ಪ್ರೇಮ್ ಅವರು ಮೊದಲ ಸಿನಿಮಾದಲ್ಲಿಯೇ ಪಕ್ಕ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡು ಸಿನಿ ಪ್ರೇಕ್ಷಕರ ಹೃದಯ ಗೆದ್ದಿದ್ದಾರೆ. ಇನ್ನೂ ಮಗಳ ಶೈಕ್ಷಣಿಕ ಹಾಗೂ ಸಿನಿಮಾ ರಂಗದ ಸಾಧನೆಗೆ ಪೋಷಕರಾದ ಪ್ರೇಮ್ ಮತ್ತು ಜ್ಯೋತಿ ಪ್ರೇಮ್( Prem and Jyoti Prem) ಅವರ ಸಂಪೂರ್ಣ ಬೆಂಬಲ ಹಾಗೂ ಪ್ರೋತ್ಸಾಹ ದೊರಕುತ್ತಿದ್ದವು.
advertisement
ಮಗಳು ಯಾವುದೇ ಸಾಧನೆ ಮಾಡಿದರು ಅದಕ್ಕೆ ತಮ್ಮ ತುಂಬು ಹೃದಯದ ಪ್ರೀತಿ ಗೌರವ ತೋರುತ್ತ ಸಾಮಾಜಿಕ ಜಾಲತಾಣಗಳ ಮೂಲಕ ಮಗಳನ್ನು ಕೊಂಡಾಡುತ್ತಿರುತ್ತಾರೆ. ನೋಡಲು ಬಹಳನೇ ಮೋಹಕವಾಗಿ ಇರುವಂತಹ ಅಮೃತ ಪ್ರೇಮ್ ಅವರು ನಟನೆಯಲ್ಲಿಯೂ ಒಂದು ಕೈ ನಿಗಲಾಗಿದ್ದು, ಮೊದಲ ಸಿನಿಮಾ ಎನಿಸದಷ್ಟರ ಮಟ್ಟಿಗೆ ಅಭಿನಯಿಸಿ ಕನ್ನಡಿಗರ ಹೃದಯವನ್ನು ಗೆದ್ದಿದ್ದಾರೆ. ಹೌದು ಸ್ನೇಹಿತರೆ ಸಾಮಾಜಿಕ ಜಾಲತಾಣಗಳಲ್ಲಿ ಅಮೃತ ಪ್ರೇಮ್ ಅವರ ಫೋಟೋ ನೋಡಿದಂತಹ ಟಗರುಪಾಳ್ಯ ಸಿನಿಮಾದ ನಿರ್ದೇಶಕ.
advertisement
advertisement
ಉಮೇಶ್ ಕೆ ಕೃಪಾ ಅವರು ತಮ್ಮ ಈ ಕಥೆಗೆ ಸರಿಹೊಂದುವಂತಹ ನಾಯಕಿ ಅಮೃತ ಎಂದು ನಿರ್ಧರಿಸಿ ಧನಂಜಯ್ ಅವರ ಬಳಿ ಆಕೆಯನ್ನು ಒಪ್ಪಿಸುವಂತೆ ಕೇಳಿಕೊಳ್ಳುತ್ತಾರೆ. ಅದರಂತೆ ಧನಂಜಯ್ ಸಿನಿಮಾದ ತಂಡದವರೆಲ್ಲ ಪ್ರೇಮ್ ಅವರಿಗೆ ಕರೆ ಮಾಡಿ ವಿಚಾರವನ್ನು ತಿಳಿಸಿದ ಕೂಡಲೇ ಕಥೆ ಕೇಳಿದಂತಹ ಪ್ರೇಮ ಅವರು ಮೆಚ್ಚಿ ಇಂತಹ ಒಳ್ಳೆ ಕಥೆಯ ಮೂಲಕ ನನ್ನ ಮಗಳು ಇಂಡಸ್ಟ್ರಿಗೆ ಪಾದರ್ಪಣೆ ಮಾಡುತ್ತಾಳೆ ಎಂದರೆ ಅದಕ್ಕಿಂತ ಸಂತೋಷದ ಸುದ್ದಿ ಇನ್ನೇನಿದೆ ಎಂದು ಒಪ್ಪಿಗೆ ಸೂಚಿಸಿದರು. ಮೊದಲ ಸಿನಿಮಾದಲ್ಲಿ ಅದ್ಭುತ ರೆಸ್ಪಾನ್ಸ್ ಪಡೆದುಕೊಂಡಿರುವ ಈ ನಟಿಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ಒಳ್ಳೊಳ್ಳೆ ಸಿನಿಮಾಗಳ ಅವಕಾಶಗಳು ಹರಸಿ ಬರಲಿದ್ಯಾ? ಎಂಬುದನ್ನು ಕಾದು ನೋಡಬೇಕಿದೆ.
advertisement