Kannada News : ನೋಡಯ್ಯ ಕ್ವಾಟೆ ಲಿಂಗವೇ, ಬೆಳ್ಳಕ್ಕಿ ಜೋಡಿ ಕುಂತವೇ ಎಂದು ಮುದ್ದಾಗಿ ಹಾಡಿದ ನಟಿಯರು! ಹೇಗಿದೆ ನೋಡಿ ವಿಡಿಯೋ!!

Kannada News : ಕನ್ನಡದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿರುವ ಟೋಬಿ (Tobi) ತೆರೆಗೆ ಬಂದು ಎಲ್ಲರ ಕಣ್ಣನ್ನು ಒದ್ದೆ ಮಾಡಿದೆ. ಸ್ಯಾಂಡಲ್‌ವುಡ್ಡಲ್‌ವುಡ್ ಸ್ಟಾರ್ಸ್ ಗಳು ಟೋಬಿ (Toby Movie Star Review) ಚಿತ್ರ ನೋಡಿ ಭಾವುಕರಾಗಿದ್ದಾರೆ. ಹೌದು ರಾಜ್ ಬಿ ಶೆಟ್ಟಿ (Raj B Shetty) ಜೊತೆಗೆ ಚೈತ್ರಾ ಜೆ ಆಚಾರ್ (Chaithra J Achar) ಮತ್ತು ಸಂಯುಕ್ತಾ ಹೊರನಾಡು (Samyukta Horanadu) ಮುಖ್ಯ ಪಾತ್ರದಲ್ಲಿ ಸಿನಿಮಾ ಆಗಸ್ಟ್ 25 ರಂದು ತೆರೆ ಕಂಡು, ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ.

ಸದ್ಯಕ್ಕೆ ಈ ಇಬ್ಬರೂ ನಟಿಯರು ತಮ್ಮ ಅಮೋಘ ನಟನೆಯ ಮೂಲಕ ಚಂದನವನದಲ್ಲಿ ಭರವಸೆಯ ನಟಿಯರಾಗಿ ಹೊರಹೊಮ್ಮಿದ್ದಾರೆ. ಅಷ್ಟೇ ಅಲ್ಲದೇ ಇದೀಗ ಚೈತ್ರಾ ಜೆ ಆಚಾರ್ ಮತ್ತು ಸಂಯುಕ್ತಾ ಹೊರನಾಡು ಅವರ ವಿಶೇಷ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಈ ಇಬ್ಬರೂ ಸ್ಯಾಂಡಲ್ ವುಡ್ ನಟಿಯರು ದುನಿಯಾ ಸಿನಿಮಾದ ನೋಡಯ್ಯ ಕ್ವಾಟೆ ಲಿಂಗವೇ, ಬೆಳ್ಳಕ್ಕಿ ಜೋಡಿ ನಿಂತವೇ ಎಂದು ಅದ್ಭುತವಾಗಿ ಹಾಡಿದ್ದಾರೆ.

ಈ ಹಾಡಿನ ವಿಡಿಯೋಗೆ ನೆಟ್ಟಿಗರು ಫಿದಾ ಆಗಿದ್ದು ಮೆಚ್ಚುಗೆ ವ್ಯಕ್ತವಾಗಿವೆ. ಚಂದನವನದ (Sandalwood) ದ ನಟಿ ಚೈತ್ರಾ ಜೆ ಆಚಾರ್ ಅವರು ಗಾಯಕಿ ಕೂಡ ಹೌದು. ಈಗಾಗಲೇ ತಮ್ಮ ಅದ್ಭುತ ಕಂಠ ಸಿರಿಯಿಂದಲೇ ಎಲ್ಲರ ಮನಸ್ಸು ಗೆದ್ದುಕೊಂಡಿದ್ದು ಆದರೆ ಇದೀಗ ತೆರೆ ಮೇಲೆ ಅದ್ಭುತವಾಗಿ ನಟಿಸುತ್ತಾ ಭರವಸೆಯ ನಟಿಯೆನಿಸಿಕೊಂಡಿದ್ದಾರೆ. ನಟಿ ಚೈತ್ರಾ ಜೆ ಆಚಾರ್ (Chaithra J Achar) ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ.

ವಿಭಿನ್ನವಾಗಿ ಫೋಟೋಶೂಟ್ (Photoshoot) ಮಾಡಿಸುತ್ತಾ ಇರುತ್ತಾರೆ. ಅದಲ್ಲದೇ ನಟಿ ಬೋಲ್ಡ್ ಫೋಟೋ ಶೂಟ್ ಗಳು ಎಲ್ಲರ ಗಮನ ಸೆಳೆಯುತ್ತದೆ. ನಟಿ ಚೈತ್ರಾ ಜೆ ಆಚಾರ್ ಅವರ ನಟನಾ ಹಿನ್ನಲೆಯನ್ನು ಗಮನಿಸಿದರೆ, ಮಹಿರ’ (Mahira) ಚಿತ್ರದ ಮೂಲಕ ನಟನೆಯತ್ತ ಮುಖ ಮಾಡಿದರು. (Kannada News) ಆ ಬಳಿಕ ಆ ದೃಶ್ಯ, ಗಿಲ್ಕಿ, ತಲೆದಂಡ ಚಿತ್ರಗಳಲ್ಲಿ ನಟಿಸಿದ್ದಾರೆ. ಇದೀಗ ಟೋಬಿ’ (Tobi) ಗೆ ನಾಯಕಿ ಆಗಿ ನಟಿಸಿದ್ದು, ಈ ಸಿನಿಮಾ ತೆರೆಗೆ ಬಂದಿದ್ದು ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದೆ.

 

View this post on Instagram

 

A post shared by NamCinema (@namcinema)

ಅದಲ್ಲದೇ, ‘ಸಪ್ತಸಾಗರದಾಚೆ ಎಲ್ಲೋ ಸೈಡ್ -B)(Saptasagaradache Yello Side B) ಚಿತ್ರದಲ್ಲಿ ರಕ್ಷಿತ್ ಶೆಟ್ಟಿ (Rakshith Shetty) ಗೆ ನಾಯಕಿಯಾಗಿ ನಟಿಸಿದ್ದು ಮುಂದಿನ ತಿಂಗಳು ತೆರೆಗೆ ಬರಲಿದೆ. ಅದರ ಜೊತೆಗೆ, ಬ್ಲಿಂಕ್ (Blink), ಸ್ಟ್ರಾಬೆರಿ (Strabery), ಯಾರಿಗೂ ಹೇಳಬೇಡಿ (Yarigu Helabedi) ಸೇರಿದಂತೆ ಅನೇಕ ಸಿನಿಮಾಗಳು ನಟಿ ಚೈತ್ರಾ ಜೆ ಆಚಾರ್ ಅವರ ಬತ್ತಳಿಕೆಯಲ್ಲಿವೆ.

Public News

Leave a Reply

Your email address will not be published. Required fields are marked *