ಸೊಳ್ಳೆ ಕಾಟದಿಂದ ಬೇಸತ್ತು ಹೋಗಿದ್ದರೆ, ಈ ಒಂದು ಮನೆಮದ್ದು ಬಳಸಿ ಸಾಕು, ಸತ್ತರೂ ಸೊಳ್ಳೆಗಳು ನಿಮ್ಮ ಮನೆಕಡೆ ಸುಳಿಯಲ್ಲ ನೋಡಿ!!

ಪ್ರತಿಯೊಬ್ಬರ ಮನೆಯಲ್ಲಿಯು ಕೂಡ ಈ ಸೊಳ್ಳೆಗಳ (Mosquitoes) ಕಾಟ ಇದ್ದದ್ದೇ. ಅದರ ಜೊತೆಗೆ ಮನೆಯ ಸುತ್ತ ಮುತ್ತಲಿನ ಪ್ರದೇಶವನ್ನು ಎಷ್ಟು ಸ್ವಚ್ಛ ಗೊಳಿಸಿದರೂ ಕೂಡ ಈ ಸೊಳ್ಳೆಗಳು ಮಾತ್ರ ನಮ್ಮನ್ನು ಬಿಡುವುದಿಲ್ಲ. ರಾತ್ರಿಯ ವೇಳೆಯಲ್ಲಿ ಮನೆಯ ಮೂಲೆಗಳಲ್ಲಿ ಎಲ್ಲಿಯಾದರೂ ಅವಿತು ಕುಳಿತುಕೊಂಡಿದ್ದರೂ ಕೂಡ ಎಂಟ್ರಿ ಕೊಡುತ್ತದೆ.

ಆದರೆ ಈ ಸೊಳ್ಳೆಗಳ ಕಾಟದಿಂದ ತಪ್ಪಿಸಿಕೊಳ್ಳಲು ವಿವಿಧ ರೀತಿಯ ಮದ್ದುಗಳನ್ನು ಬಳಸುತ್ತೇವೆ. ಆದರೆ ಸೊಳ್ಳೆ ಬತ್ತಿ ಸೇರಿದಂತೆ ಇನ್ನಿತ್ತರ ಮದ್ದುಗಳು ಆರೋಗ್ಯಕ್ಕೆ ಒಳ್ಳೆಯದಲ್ಲ. ಹಾಗಾದ್ರೆ ಈ ಸೊಳ್ಳೆ ಕಾಟದಿಂದ ತಪ್ಪಿಸಿಕೊಳ್ಳಲು ಮನೆಯಲ್ಲಿ ಸಾವಯವ ಮದ್ದನ್ನು ತಯಾರಿಸಿ ಸೊಳ್ಳೆ ಕಾಟದಿಂದ ಮುಕ್ತಿ ಹೊಂದಬಹುದು.

*ಸೊಳ್ಳೆ ಓಡಿಸಲು ಮನೆಯಲ್ಲಿಯೇ ಮದ್ದು ಮಾಡುವುದು ಹೇಗೆ?

*ಒಂದು ಮುಷ್ಟಿ ಬೇವಿನ ಸೊಪ್ಪು, ನಾಲ್ಕೈದು ಲವಂಗ, ಐದಾರು ಬೆಳ್ಳುಳ್ಳಿ ಎಸಳು ನೀರು ಹಾಕಿ ರುಬ್ಬಿಕೊಳ್ಳಿ.

* ರುಬ್ಬಿದ ಮಿಶ್ರಣಕ್ಕೆ ಮೂರು ಚಮಚದಷ್ಟು ಅರಶಿಣ ಪುಡಿ, ಅರ್ಧ ಚಮಚದಷ್ಟು ಕಾಫಿ ಪುಡಿ, ಸ್ವಲ್ಪ ಶ್ಯಾಂಪು ಈ ಎಲ್ಲವನ್ನು ಮಿಕ್ಸ್ ಮಾಡಬೇಕು.

* ಹಳೆಯ ನ್ಯೂಸ್ ಪೇಪರ್ ಈ ಮಿಶ್ರಣವನ್ನು ಹಾಕಿ ಎಲ್ಲಾ ಕಡೆಯಲ್ಲಿ ಹರಡಿಕೊಂಡು ಬಿಸಿಲಿನಲ್ಲಿ ಒಣಗಿಸಿಕೊಳ್ಳಬೇಕು.

*ಆ ಬಳಿಕ ಈ ಪೇಪರ್ ಅನ್ನು ನಾಲ್ಕು ಭಾಗಗಳಾಗಿ ಕತ್ತರಿಸಿಕೊಂಡು ಸುರುಳಿಯಾಕಾರವಾಗಿ ಸುತ್ತಿಕೊಳ್ಳಬೇಕು.

* ಸುರುಳಿಯಕಾರವಾಗಿ ಸುತ್ತಿಕೊಂಡಿರುವ ಈ ಪೇಪರ್ ಅನ್ನು ಅಗರಬತ್ತಿ ಹಚ್ಚಿದ್ದಂತೆ ಹಚ್ಚಬೇಕು. ಈ ಮನೆ ಮದ್ದನ್ನು ಉಪಯೋಗಿಸಿ ಸೊಳ್ಳೆ ಕಾಟದಿಂದ ಮುಕ್ತಿ ಹೊಂದಬಹುದು.

Public News

Leave a Reply

Your email address will not be published. Required fields are marked *