Sonu Gowda Video : ತಮ್ಮ ಮಾದಕ ವಿಡಿಯೋಗಳ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಬಾರಿ ಪ್ರಸಿದ್ಧಿ ಪಡೆದಿದ್ದಂತಹ ಸೆನ್ಸೇಷನಲ್ ಸ್ಟಾರ್ ಸೋನು ಶ್ರೀನಿವಾಸ್ ಗೌಡ(Sonu Srinivas Gowda) ಪ್ರತಿನಿತ್ಯ ಒಂದಲ್ಲ ಒಂದು ವಿಭಿನ್ನ ಪೋಸ್ಟ್ ಹಾಗೂ ರೀಲ್ಸ್ ವಿಡಿಯೋಗಳನ್ನು ಹಂಚಿಕೊಳ್ಳುತ್ತಾ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿ ಇದ್ದಂತಹ ನಟಿ.
ತಮ್ಮ ಲಿಪ್ಸಿಂಕ್ ವಿಡಿಯೋಗಳಿಗಿಂತ ಹೆಚ್ಚಾಗಿ ಟ್ರೋಲ್ ವಿಡಿಯೋಗಳ ಮೂಲಕವೇ ಪ್ರಖ್ಯಾತಿ ಪಡೆದು ಬಿಗ್ ಬಾಸ್(Big Boss) ಓಟಿಟಿ ಸೀಸನ್ ಒಂದಕ್ಕೂ ಸ್ಪರ್ಧೆಯಾಗಿ ಪಾದರ್ಪಣೆ ಮಾಡಿ ತಮ್ಮ ವ್ಯಕ್ತಿತ್ವ ಎಂತದ್ದು ಎಂಬುದನ್ನು ಅನಾವರಣಗೊಳಿಸಿದ್ದ, ಸೋನು ಶ್ರೀನಿವಾಸ್ ಗೌಡ(Sonu Srinivas Gowda) ದೊಡ್ಮನೆಯಿಂದ ಹೊರ ಬಂದ ನಂತರ ಮತ್ತೆ ಯೂಟ್ಯೂಬ್, ಫೇಸ್ ಬುಕ್ ಹಾಗೂ ಇನ್ಸ್ಟಾಗ್ರಾಮ್ ನಂತಹ ಜಾಲಗಳಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದರು.
ಹಾಗೆ ಕಳೆದ ಕೆಲವು ದಿನಗಳ ಹಿಂದೆ ಟ್ರೋಲ್ಗಳಿಗೆ ಬೇಸತ್ತು ವಿಡಿಯೋ ಒಂದನ್ನು ಮಾಡಿ ಟ್ರೋಲಿಗರ ಬಳಿ ಮತ್ತೆಂದು ತಮ್ಮನ್ನು ಅಸಭ್ಯವಾಗಿ ಟ್ರೋಲ್ ಮಾಡದಂತೆ ಕೈಮುಗಿದು ಅಳುತ್ತಾ ಕೇಳಿಕೊಂಡಿದ್ದರು. ಇದೀಗ ಮತ್ತೊಮ್ಮೆ ಟ್ರೋಲಿಗರನ್ನು ಕೆಣಕಿರುವ ಸೋನು ಶ್ರೀನಿವಾಸ್ ಗೌಡ(Sonu Srinivas Gowda) ಕೆಂಪು ಬಣ್ಣದ ಬಿಕಿನಿ ಧರಿಸಿ ಮಾಲ್ಡಿವ್ಸ್ ನಲ್ಲಿ ಮಿಂಚುತ್ತಿದ್ದಾರೆ.
ಹೌದು ಸ್ನೇಹಿತರೆ ನಟಿ ಸೋನು ಶ್ರೀನಿವಾಸ್ ಗೌಡ(Sonu Srinivas Gowda) ಬೇಬಿ ಪಿಂಕ್ ಬಣ್ಣದ ಪ್ಯಾಂಟ್ ಹಾಗೂ ಶರ್ಟ್ ಧರಿಸಿ ಫೋಟೋಗೆ ಬಹಳ ಹಾಟ್ ಆಗಿ ಫೋಸ್ ನೀಡಿದ್ದು, ಬಟನ್ ಹಾಕಿಕೊಳ್ಳದೆ ತಮ್ಮ ಒಳ ಉಡುಪನ್ನು ಎಕ್ಸ್ಪೋಸ್ ಮಾಡಿರುವುದು ನೆಟ್ಟಿಗರ ಮುಂಗೋಪಕ್ಕೆ ಗುರಿಯಾಗಿದೆ. ಮಾಲ್ಡೀವ್ಸ್ ಪ್ರವಾಸದ ಸಾಲು ಸಾಲು ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಸೋನು ಶ್ರೀನಿವಾಸ್ ಗೌಡ(Sonu Gowda Video) ಕಲ್ಲಂಗಡಿ- ಜೊತೆಗೆ ಇನ್ನಿತರೆ ಹಣ್ಣುಗಳು ಹಾಗೂ ಮಾಂಸ ಮತ್ತು ಮೊಟ್ಟೆ ಇರುವಂತಹ ಆಹಾರದ ಫೋಟೋಗಳನ್ನು ಸಹ ತಮ್ಮ ಪೋಸ್ಟ್ನಲ್ಲಿ ಸೇರ್ಪಡೆಸಿದ್ದಾರೆ.
View this post on Instagram
ಇದನ್ನು ಕಂಡಂತಹ ನೆಟ್ಟಿಗರು(Netizens) ಭಿನ್ನ ವಿಭಿನ್ನವಾಗಿ ಕಮೆಂಟ್ ಮಾಡುತ್ತ ಸೋನು ಮೇಲೆ ಕೆಂಡ ಕಾರುತ್ತಿದ್ದಾರೆ. ಕರ್ನಾಟಕದ ಸನ್ನಿ ಲಿಯೋನ್(Sunny leaon), ಅರ್ಧಂಬರ್ಧ ಬಟ್ಟೆ ಹಾಕುವುದರಿಂದ ಏನು ಸಿಗುತ್ತೆ? ಎಂದೆಲ್ಲ ನಕಾರಾತ್ಮಕ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.