ಸೌಜನ್ಯ ಹೆ-ಣ ಸಿಕ್ಕ ಜಾಗದಲ್ಲೇ ಎರೆಡು ಮೊಬೈಲ್ ನಂಬರ್ ಸಿಕ್ಕಿದೆ, ನಿನ್ನೆ ಸೌಜನ್ಯಾ ತಾಯಿಯ ಮೇಲೆ ಹ-ಲ್ಲೆಗೆ ಯತ್ನ ನಡೆದಿದೆ!!

ಸೌಜನ್ಯ (Sowjanya) ಆ-ತ್ಯಾಚಾರ ಪ್ರಕರಣ ಇದೀಗ ರಾಜ್ಯದಲ್ಲಿ ಸಂಚಲನ ಮೂಡಿಸಿದ್ದು, ಹೆಣ್ಣು ಮಗಳಿಗೆ ನ್ಯಾಯ ಸಿಗಬೇಕು ಎಂದು ರಾಜ್ಯದಲ್ಲಿ ಜನರು ಪ್ರತಿಭಟನೆ ಮಾಡುತ್ತಿದ್ದಾರೆ. ಇತ್ತ ಖಾಸಗಿ ವಾಹಿನಿಗಳು ಸೌಜನ್ಯನವರ ಕುಟುಂಬವನ್ನು ಮಾತನಾಡಿಸಿ ಸತ್ಯವನ್ನು ಬಯಲಿಗೆ ತರುತ್ತಿದೆ. ಸೌಜನ್ಯ ತಾಯಿ ಸೇರಿದಂತೆ ಕುಟುಂಬದ ಸದಸ್ಯರು ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಸರಿಯಾಗಿ ತನಿಖೆಯಾಗಿಲ್ಲ. ತನಿಖೆ ಮಾಡಬೇಕಾದವರನ್ನು ತನಿಖೆ ಮಾಡಿಲ್ಲ ಎಂದು ಆರೋಪ ಮಾಡುತ್ತಿದ್ದಾರೆ. ಇತ್ತ ಮತ್ತೊಮ್ಮೆ ತನಿಖೆ ಮಾಡಬೇಕು ನನ್ನ ಮಗಳಿಗೆ ನ್ಯಾಯ ಕೊಡಿಸಬೇಕು ಎನ್ನುವುದು ಸೌಜನ್ಯ ತಾಯಿಯ ಅಳಲು.

ಇದೀಗ ಸೌಜನ್ಯ ಆ-ತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮತ್ತೊಂದು ಶಾಕಿಂಗ್ ವಿಚಾರವೊಂದು ಹೊರ ಬಿದ್ದಿದೆ. ಖಾಸಗಿ ಯೂಟ್ಯೂಬ್ ಚಾನೆಲ್ (Youtube Chanel) ಸೌಜನ್ಯ ತಾಯಿ ಕುಸುಮಾವತಿ (Kusumavati) ಯವರನ್ನು ಮಾತನಾಡಿಸಿದೆ. ಈ ವೇಳೆಯಲ್ಲಿ ಮಾತನಾಡಿದ ಕುಸುಮಾವತಿ ನನ್ನ ಮಗಳನ್ನು ಕಿ-ಡ್ನಾಪ್ ಮಾಡಿ ಸೇಲ್ ಮಾಡಿದ್ದಾರೆ ಅಂದುಕೊಂಡೆ ಎಂದಿದ್ದಾರೆ.

ನಾವು ಕೊಟ್ಟ ಸೌಜನ್ಯಳ ಬಟ್ಟೆಯನ್ನೇ ತನಿಖೆಗೆ ಒಪ್ಪಿಸಿದ್ದಾರೆ. ಈ ಬಟ್ಟೆಯನ್ನು ಸಂತೋಷ್ ರಾವ್ ಹೂ-ತು ಹಾಕಿದ್ದಾನೆ ಎಂದು ತನಿಖೆಗೆ ಇಟ್ಟಿದ್ದಾರೆ. ಒಳ ಉಡುಪು ಹಾಗೂ ಛತ್ರಿದ್ದು ಇವತ್ತಿನವರೆಗೂ ತನಿಖೆನೇ ಇಲ್ಲ. ನಾವು ಕೊಟ್ಟ ಹೇಳಿಕೆಯನ್ನು ಯಾವುದನ್ನು ಪರಿಗಣಿಸಲಿಲ್ಲ. ಸೌಜನ್ಯ ಹೆ-ಣ ಸಿಕ್ಕ ಜಾಗದಲ್ಲಿ ಎರಡು ಫೋನ್ ನಂಬರ್ ಸಿಕ್ಕಿದೆ ಅದನ್ನು ತನಿಖೆ ಮಾಡಲಿಲ್ಲ ಎಂದು ಶಾಕಿಂಗ್ ವಿಚಾರವನ್ನು ರಿವೀಲ್ ಮಾಡಿದ್ದಾರೆ.

ನಿನ್ನೆ ಡಾ.ವಿರೇಂದ್ರ ಹೆಗಡೆ (Dr. Veerendra Hegade) ಅವರ ಹೆಸರು ಕೆಡಿಸುತ್ತಿದ್ದಾರೆ ಎಂದು ಆರೋಪಿಸಿ ಬೆಂಬಲಿಗರಿಂದ ಬೃಹತ್ ಪ್ರತಿಭಟನೆ ಆಯೋಜಿಸಲಾಗಿತ್ತು. ಈ ಪ್ರತಿಭಟನೆಯಲ್ಲಿ ಜಸ್ಟಿಸ್ ಫಾರ್ ಸೌಜನ್ಯ ಪೋಸ್ಟರ್ ಹಿಡಿದು ವೇದಿಕೆಯತ್ತ ತೆರಳಿಸ ಸೌಜನ್ಯ ತಾಯಿ ಕುಸುಮಾವತಿಯನ್ನು ಪೊಲೀಸರು ತಡೆದು ನಿಲ್ಲಿಸಿದ್ದಾರೆ. ಅಷ್ಟೇ ಅಲ್ಲದೇ, ಈ ವೇಳೆ ಸೌಜನ್ಯ ಸಹೋದರ ಸುಭಾಷ್‌ ಚಂದ್ರ (Subhash Chandra) ಮೇಲೆ ಪ್ರತಿಭಟನಾನಿರತರಾಗಿದ್ದ ವ್ಯಕ್ತಿಯು ಹ-ಲ್ಲೆ ಮಾಡಲು ಯತ್ನಿಸಿದ್ದಾರೆ.

ಈ ಘಟನೆಯ ಬಳಿಕ ಸೌಜನ್ಯ ಸಹೋದರಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, “ನ್ಯಾಯ ಕೇಳಲು ಬಂದರೆ ನನ್ನ ತಮ್ಮನಿಗೆ ಹ-ಲ್ಲೆ ಮಾಡಲು ಮುಂದಾಗುತ್ತಾರೆ. ನ್ಯಾಯ ಕೇಳುವುದು ತಪ್ಪಾ. ಧರ್ಮಸ್ಥಳ ಗ್ರಾಮದಲ್ಲಿದ್ದು ಧರ್ಮಸ್ಥಳದ ಹೆಸರು ಎತ್ತದೆ ನ್ಯಾಯ ಕೇಳುವುದು ಹೇಗೆ ಎಂದು ಪ್ರಶ್ನಿಸಿದ ಅವರು, ನಾವು ಯಾವುದೇ ಕಾರಣಕ್ಕೂ ಶ್ರೀಕ್ಷೇತ್ರದ ಹೆಸರು ತೆಗೆದಿಲ್ಲ.

ನಮ್ಮ ತಾಯಿ ಅಕ್ಕ ಸೌಜನ್ಯಳಿಗೆ ನ್ಯಾಯಕ್ಕಾಗಿ ಆಯೋಜಿಸುವ ಪ್ರತಿ ಹೋರಾಟದಲ್ಲಿ ಭಾಗಿಯಾಗಿತ್ತಾರೆ” ಎಂದಿದ್ದಾರೆ. ರಾಜ್ಯದಲ್ಲಿ ಸೌಜನ್ಯಳಿಗೆ ನ್ಯಾಯ ಸಿಗಬೇಕೆಂದು ರಾಜ್ಯದ ಜನರು ಮುಂದೆ ಬಂದಿದ್ದು, ಹನ್ನೊಂದು ವರ್ಷಗಳ ಬಳಿಕವಾದರೂ ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಸರಿಯಾಗಿ ತನಿಖೆ ನಡೆಸಿ ನ್ಯಾಯ ಸಿಗುತ್ತಾ ಎನ್ನುವುದನ್ನು ಕಾದುನೋಡಬೇಕು.

Public News

Leave a Reply

Your email address will not be published. Required fields are marked *