7 Hot News
A Karnataka Times Affiliate Kannada News Portal

ನಟ ರವಿಚಂದ್ರನ್ ಅವರಿಗೆ ಈ ಒಬ್ಬ ನಟಿ ಅಂದ್ರೆ ತುಂಬಾ ಇಷ್ಟವಂತೆ! ಯಾರೂ ಗೊತ್ತಾ ಆ ನಟಿ, ಇಲ್ಲಿದೆ ನೋಡಿ ಮಾಹಿತಿ!!

advertisement

ಪ್ರೇಮ ಕಥೆಗಳನ್ನು(love stories) ವಿಭಿನ್ನ ಕಲ್ಪನೆಗಳೊಂದಿಗೆ ಪೊಣಿಸಿ, ಚಿತ್ರೀಕರಿಸಿ ಬೆಳ್ಳಿತೆರೆಯ ಮೇಲೆ ಅದ್ಭುತವಾಗಿ ಕಾಣಿಸುವ ಅಪರೂಪದ ಚಾತುರ್ಯತೆ ಇರುವುದು ರವಿಚಂದ್ರನ್ ಅವರಲ್ಲಿ. ಪರಭಾಷಾ ನಟಿಯರನ್ನು ಕನ್ನಡಕ್ಕೆ ಪರಿಚಯಿಸಿ, ಗೆದ್ದವರಲ್ಲಿ ಇವರು ಒಬ್ಬರು. ಹೊಸ ಹೊಸ ತಂತ್ರಜ್ಞಾನಗಳ ಅಳವಡಿಸಿ ವಿವಿಧ ವಿಧದ ಹಾಡುಗಳೊಂದಿಗೆ ಪ್ರೇಕ್ಷಕರ ಮನ ಗೆದ್ದ ರವಿಚಂದ್ರನ್ ಅವರ ಮನಸ್ಸನ್ನು ಕದ್ದ ಆ ನಟಿ ಯಾರೆಂದು ತಿಳಿದುಕೊಳ್ಳಬೇಕೆಂದರೆ ಬರಹವನ್ನು ಪೂರ್ಣವಾಗಿ ಓದಿ…

advertisement

ತೆರೆಯ ಮೇಲೆ ರಸಿಕತೆಯುಳ್ಳ ಸನ್ನಿವೇಶಗಳಲ್ಲಿ(Romantic scenes) ಹೆಚ್ಚಾಗಿ ಕಾಣಿಸಿಕೊಂಡಿದ್ದರೂ, ನಿಜ ಜೀವನದಲ್ಲಿ ರವಿಚಂದ್ರನ್ ಅವರಿಗೆ ಹೆಣ್ಣೆಂದರೆ ಅಪಾರ ಗೌರವ. ರವಿಚಂದ್ರನ್ ಅವರು ತುಂಬಾ ಇಷ್ಟಪಡುವ ನಟಿ ಎಂದರೆ ಪ್ರಿಯಾಂಕ ಉಪೇಂದ್ರ. ಹೌದು ಪರಭಾಷೆಯಿಂದ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಮಾಡಿ, ರಿಯಲ್ ಸ್ಟಾರ್ ಉಪೇಂದ್ರ ಅವರನ್ನು ವಿವಾಹವಾಗಿ ಕನ್ನಡದವರಾದ ಪ್ರಿಯಾಂಕ(Priyanka Upendra) ಅವರೆಂದರೆ ರವಿಚಂದ್ರನ್ ಅವರಿಗೆ ಇಂದಿಗೂ ಪ್ರೀತಿ, ಅಭಿಮಾನ, ಗೌರವವಿದೆ.

advertisement

advertisement

ಪ್ರಿಯಾಂಕ ಉಪೇಂದ್ರ ಅವರು ಕೂಡ ರವಿಚಂದ್ರನ್ ಅವರ ಬಗ್ಗೆ, ‘ಕಲಾವಿದೆಯರಿಗೂ ಸಿನಿಮಾದಲ್ಲಿ ಪ್ರಾಮುಖ್ಯತೆ ನೀಡಿ ನಿರ್ದೇಶಸುವ ನಟರೆಂದರೆ ರವಿಚಂದ್ರನ್..ವಿಭಿನ್ನವಾಗಿ ಅವರಂತೆ ಯಾರು ನಿರ್ದೇಶಿಸಲು ಸಾಧ್ಯವಿಲ್ಲ’ ಎಂದು ಸಂದರ್ಶವೊಂದರಲ್ಲಿ ಹೇಳಿ ತಮಗಿರುವ ಗೌರವವನ್ನು ವ್ಯಕ್ತಪಡಿಸಿದ್ದರು.

advertisement

‘ಹೆಚ್ ಟು ಒ’ ಸಿನಿಮಾದಲ್ಲಿ ಉಪೇಂದ್ರ(Upendra) ಅವರೊಂದಿಗೆ ನಟಿಸುವುದರ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಪ್ರಿಯಾಂಕ ಅವರು, ರವಿಚಂದ್ರನ್ ಅವರೊಂದಿಗೆ ‘ಮಲ್ಲ’ ಚಿತ್ರದಲ್ಲಿ ನಟಿಸಿದ್ದರು. ಪರಭಾಷೆಯಿಂದ ಬಂದ ನಟಿ ಕನ್ನಡದಲ್ಲಿ ಹೇಗೆ ಅಭಿನಯಿಸುತ್ತಾರೋ ಏನೋ ಎಂಬ ಆತಂಕವನ್ನು ಹೊಂದಿದ್ದ ರವಿಚಂದ್ರನ್ ಅವರಿಗೆ ಪ್ರಿಯಾಂಕಾ ಅವರ ಅದ್ಭುತ ಅಭಿನಯವನ್ನು ಕಂಡು ಖುಷಿಯಾಯಿತಂತೆ. ‘ಮಲ್ಲ’ ಸಿನಿಮಾ ಗೆಲ್ಲಲು ಪ್ರಿಯಾಂಕ ಅವರ ನಟನೆಯೂ ಕಾರಣವಾಯಿತು. ರವಿಚಂದ್ರನ್ ಅವರು ಇಂದಿಗೂ ಪ್ರಿಯಾಂಕ ಉಪೇಂದ್ರ ಅವರ ಬಗೆಗೆ ಪ್ರೀತಿ, ಗೌರವವನ್ನು ಇಟ್ಟುಕೊಂಡಿದ್ದಾರೆ.

advertisement

Leave A Reply

Your email address will not be published.