ವಿಧವೆ ಅತ್ತಿಗೆಯನ್ನು ಚಿಕ್ಕ ಯುವಕನಿಗೆ ಕೊಟ್ಟು ಮದುವೆ ಮಾಡಿದ ಮನೆಯವರು, ಮದುವೆಯಾದ ಮೇಲೆ ಆಗಿದ್ದೆ ಬೇರೆ ನೋಡಿ!!

ಇತ್ತೀಚೆಗಿನ ದಿನಗಳಲ್ಲಿ ಆತ್ಮ-ಹ’ತ್ಯೆ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದೆ. ಅದರಲ್ಲಿಯೂ ಬಿಹಾರದ ಗಯಾ ಜಿಲ್ಲೆಯ ಒಂಬತ್ತನೇ ತರಗತಿಯ 15 ವರ್ಷದ ವಿದ್ಯಾರ್ಥಿಯೊಬ್ಬ ತನ್ನ ವಿಧವೆ ಅತ್ತಿಗೆಯನ್ನು ಮದುವೆಯಾಗುವಂತೆ ಒತ್ತಾಯಿಸಿದ್ದಕ್ಕೆ ಆತ್ಮ-ಹತ್ಯೆ ಮಾಡಿಕೊಂಡಿದ್ದಾನೆ. ತನ್ನ ಹಿರಿಯ ಸಹೋದರ ಸಂತೋಷ್ ದಾಸ್ ಅವರ ಪತ್ನಿ ವಿಧವೆ 25 ವರ್ಷದ ರೂಬಿ ದೇವಿಯನ್ನು ‘ಮದುವೆಯಾದ’ ಕೆಲವೇ ಗಂಟೆಗಳ ನಂತರ ಮಹದೇವ್ ದಾಸ್ ಎಂದು ಗುರುತಿಸಲಾದ ಬಾಲಕ ಸೋಮವಾರ ಟವರ್‌ಗೆ ನೇ-ಣು ಬಿಗಿದುಕೊಂಡು ಆತ್ಮ-ಹತ್ಯೆ ಮಾಡಿಕೊಂಡಿದ್ದಾನೆ.

ಹುಡುಗನ ತಂದೆ ಚಂದ್ರೇಶ್ವರ ದಾಸ್ ಪ್ರಕಾರ, ಮಗ ತನಗಿಂತ ಹತ್ತು ವರ್ಷ ದೊಡ್ಡವಳಾದ ಮತ್ತು ತನ್ನ ಸ್ವಂತ ಮಕ್ಕಳಂತೆ ಅವನನ್ನು ನೋಡಿಕೊಳ್ಳುತ್ತಿದ್ದ ದೇವಿಯನ್ನು ಮದುವೆಯಾಗಲು ಒಪ್ಪಲಿಲ್ಲ, ಹೀಗಾಗಿ ಜೀ’ವ ಕಳೆದುಕೊಂಡಿದ್ದಾರೆ ಎನ್ನಲಾಗಿದೆ. ಇನ್ನು, ಗಯಾದ ಖಾಸಗಿ ಸಂಸ್ಥೆಯೊಂದರಲ್ಲಿ ಸಂತೋಷ್ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು. 2013 ರಲ್ಲಿ ಕೊನೆ ಉಸಿರೆಳೆದ ಹಿರಿಯ ಸಹೋದರ ಸಂತೋಷ್ ಅವರ ಪತ್ನಿ ವಿಧವೆ ದೇವಿ ಅವರ ಪೋಷಕರು ತಮ್ಮ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಮಹದೇವ್ ಕುಟುಂಬವು ಆರೋಪ ಮಾಡಿದೆ.

ಅದಲ್ಲದೇ ಸಂತೋಷ್ ಸಾವಿನ ನಂತರ, ಅವರು ಕೆಲಸ ಮಾಡುತ್ತಿದ್ದ ಕಂಪನಿಯು ಕುಟುಂಬಕ್ಕೆ 80,000 ರೂ.ಗಳ ಪರಿಹಾರವನ್ನು ನೀಡಿದ್ದು, ಅದರಲ್ಲಿ ಚಂದ್ರೇಶ್ವರ್ ಅವರು 27,000 ರೂ.ಗಳನ್ನು ದೇವಿಯ ಖಾತೆಗೆ ವರ್ಗಾಯಿಸಿದ್ದಾರೆ. ಆಕೆಯ ಕುಟುಂಬವು ಪೂರ್ಣ ಮೊತ್ತವನ್ನು ತಮಗಾಗಿಯೇ ಪಡೆಯಬೇಕೆಂದು ಒತ್ತಾಯಿಸಿ, ಹದಿಹರೆಯದವರು ಎರಡು ಮಕ್ಕಳ ತಾಯಿಯಾದ ದೇವಿಯನ್ನು ಮದುವೆ ಮಾಡಿಕೊಳ್ಳಲು ಒತ್ತಾಯಿಸಿದ್ದಾರೆ.

ನೆರೆಹೊರೆಯವರ ಪ್ರಕಾರ, ವಿಧವೆ ಮಹಿಳೆಯೂ ಕುಟುಂಬದ ಒತ್ತಡಕ್ಕೆ ಮಣಿದಿದ್ದು,ಅವಳು ತನ್ನ ಇಚ್ಛೆಗೆ ವಿರುದ್ಧವಾಗಿ ಮದುವೆಗೆ ಒಪ್ಪಿಗೆ ನೀಡಲಾಗಿತ್ತು. ಗಯಾದ ವಿನೋಬ ನಗರ ಗ್ರಾಮದಲ್ಲಿ ಸೋಮವಾರ ವಿವಾಹ ನೆರವೇರಿದ್ದು, ಕೆಲವೇ ಗಂಟೆಗಳಲ್ಲಿ ಮಹದೇವ್ ನೇ-ಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಈ ಸಾ-ವಿನ ನಂತರ, ಬಾಲಕಿಯ ಕುಟುಂಬದ ವಿರುದ್ಧ ಬಾಲ್ಯವಿವಾಹ ಮತ್ತು ಆತ್ಮ-ಹತ್ಯೆಯ ಪ್ರಕರಣವನ್ನು ದಾಖಲಿಸಲಾಗಿದೆ.

Public News

Leave a Reply

Your email address will not be published. Required fields are marked *