ಪಿಂಕ್ ಕಲರ್ ಚಡ್ಡಿಯಲ್ಲಿ ಸಮುದ್ರದ ಮಧ್ಯೆ ಕಾಣಿಸಿಕೊಂಡ ನಟಿ ಅನನ್ಯಾ ಪಾಂಡೆ, ಫೋಟೋಸ್ ನೋಡಿ ಅಭಿಮಾನಿಗಳು ಸುಸ್ತು!!

ಸಿನಿಲೋಕದಲ್ಲಿ ಗುರುತಿಸಿಕೊಂಡಿರುವ ಕೆಲವು ನಟಿಯರು ಸಿನಿಮಾಕ್ಕಿಂತ ಹೆಚ್ಚಾಗಿ ಇನ್ನಿತ್ತರ ವಿಚಾರಗಳಿಂದ ಸುದ್ದಿಯಾಗುವುದೇ ಹೆಚ್ಚು. ಈ ವಿಚಾರದಲ್ಲಿ ಬಾಲಿವುಡ್‌ ನಟಿ ಅನನ್ಯಾ ಪಾಂಡೆ (Ananya Panday) ಕೂಡ ಹೊರತಾಗಿಲ್ಲ ಎನ್ನಬಹುದು. ಹೌದು, ಸಿನಿಮಾಗಳಿಂದ ಹೆಚ್ಚಾಗಿ ಹಾಟ್ ಫೋಟೋಗಳ ಮೂಲಕ ಸದ್ದು ಮಾಡುತ್ತಿರುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿರುವ ಅನನ್ಯಾ ಆಗಾಗ ಬೋಲ್ಡ್ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಸೂಡೆಂಟ್‌ ಆಫ್‌ ದಿ ಇಯರ್‌ 2 ( Student Of the year) ಸಿನಿಮಾ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟ ಅನನ್ಯಾ ಪಾಂಡೆ, ಕೆಲವೇ ಕೆಲವು ವರ್ಷಗಳಲ್ಲಿ ದೊಡ್ಡ ಸಂಖ್ಯೆಯ ಫ್ಯಾನ್ಸ್ ಫಾಲ್ಲೋರ್ಸ್ ಗಳನ್ನು ಹುಟ್ಟುಹಾಕಿಕೊಂಡವರು.

ಸ್ಟಾರ್‌ ಪಟ್ಟ ಗಿಟ್ಟಿಸಿಕೊಂಡವರ ಪೈಕಿ ಅನನ್ಯ ಪಾಂಡೆಯವರು ಸಾಮಾಜಿಕ ಜಾಲತಾಣದಲ್ಲಿ ಸದಾ ಆಕ್ಟೀವ್ ಎನ್ನುವುದು ಗೊತ್ತಿರುವ ವಿಚಾರ. ನಟಿ ಅನನ್ಯಾ ಆಗಾಗ ಹಾಟ್ ಫೋಟೋಗಳ ಮೂಲಕ ಸದ್ದು ಮಾಡುತ್ತಿರುತ್ತಾರೆ. ಇದೀಗ ಮತ್ತೇ ತಮ್ಮ ಬೋಲ್ಡ್ ಫೋಟೋ (Bold Photo) ಗಳನ್ನು ಶೇರ್ ಮಾಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಹಲ್‌ಚಲ್‌ ಎಬ್ಬಿಸಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಫೋಟೋದಲ್ಲಿ ನೀಲಿ ಬಣ್ಣದ ಬಿಕಿನಿ ಧರಿಸಿ ಫೋಟೋಗೆ ಪೋಸ್ ಕೊಟ್ಟಿದ್ದರು.

ಆದರೆ ಇದೀಗ ಮತ್ತೆ ಹಾಟ್ ಅವತಾರದಲ್ಲಿ ನೆಟ್ಟಿಗರ ಮುಂದೆ ಪ್ರತ್ಯಕ್ಷವಾಗಿದ್ದಾರೆ. ಸಮುದ್ರದ ಹತ್ತಿರ ಪಿಂಕ್ ಬಣ್ಣ (Pink Colour) ದ ಬಿಕಿನಿ ತೊಟ್ಟು ನಿಂತುಕೊಂಡಿದ್ದಾರೆ. ಪಿಂಕ್ ಬಿಕಿನಿಯಲ್ಲಿ ಸಮುದ್ರ ತೀರದಲ್ಲಿ ಹಾಟ್ ಆಗಿ ಪೋಸ್ ನೀಡಿದ್ದು, ಈ ಫೋಟೋ ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ. ಕೆಲವರು ಈ ಫೋಟೋವನ್ನು ಮೆಚ್ಚಿಕೊಂಡರೆ, ಎನ್ನು ಕೆಲವರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.

ಅದಲ್ಲದೇ ಕಳೆದ ಕೆಲವು ದಿನಗಳಿಂದ ನಟಿ ಅನನ್ಯ ಪಾಂಡೆ ತೀರಾ ವೈಯಕ್ತಿಕ ವಿಚಾರಗಳಿಂದ ಸುದ್ದಿಯಲ್ಲಿದ್ದಾರೆ. ನಟಿ ಅನನ್ಯ ಪಾಂಡೆ ಮತ್ತು ಆದಿತ್ಯ ರಾಯ್‌ ಕಪೂರ್‌ (Aditya Ray Kapoor) ಹಲವು ದಿನಗಳಿಂದ ಡೇಟಿಂಗ್‌ನಲ್ಲಿದ್ದಾರೆ ಎನ್ನುವ ಸುದ್ದಿ ಯೊಂದು ಕೇಳಿ ಬರುತ್ತಿವೆ. ಇದಕ್ಕೆ ಸಾಕ್ಷಿ ಎನ್ನುವಂತೆ ಮುಂಬಯಿಗೆ ಹಿಂತುರುಗುವ ವೇಳೆ ಇಬ್ಬರಿಬ್ಬರೂ ಕಾಣಿಸಿಕೊಂಡಿದ್ದರು.

 

View this post on Instagram

 

A post shared by Voompla (@voompla)

ಅದಲ್ಲದೇ, ಇತ್ತೀಚೆಗಷ್ಟೇ ಇವರಿಬ್ಬರೂ ಸ್ಪೇನ್‌ (Spain) ನಲ್ಲಿ ಒಟ್ಟಿಗೆ ಸಮಯ ಕಳೆಯುತ್ತಿರುವ ಫೋಟೋಗಳು ವೈರಲ್ ಆಗಿತ್ತು. ಈ ಫೋಟೋ ನೋಡಿದ ಎಲ್ಲರಿಗೂ ಕೂಡ ಇವರಿಬ್ಬರೂ ಡೇಟಿಂಗ್ ನಲ್ಲಿರುವುದು ಪಕ್ಕಾ ಎನ್ನಲಾಗಿತ್ತು. ಆದಿತ್ಯ ಮತ್ತು ಅನನ್ಯಾ ಇಬ್ಬರೂ ಒಂದೇ ಕಲರ್ ಉಡುಗೆ ಧರಿಸಿದ್ದರು. ಆದಿತ್ಯ ಕಪ್ಪು ಶಾರ್ಟ್ಸ್ ಮತ್ತು ಟೀ ಶರ್ಟ್‌ನಲ್ಲಿ ಇದ್ದರೆ, ಅನನ್ಯ ಪಾಂಡೆ ಕಪ್ಪು ಡ್ರೆಸ್‌ನಲ್ಲಿ ಗಮನ ಸೆಳೆದಿದ್ದರು. ಅದರ ಜೊತೆಗೆ ಇಬ್ಬರೂ ಪರಸ್ಪರ ತಬ್ಬಿಕೊಂಡಿರುವ ಫೋಟೋವೊಂದು ಎಲ್ಲರ ಗಮನ ಸೆಳೆದಿತ್ತು.

Public News

Leave a Reply

Your email address will not be published. Required fields are marked *