7 Hot News
A Karnataka Times Affiliate Kannada News Portal

ಹೊಸ ಪ್ರತಿಭೆಗಳಿಗೆ ಸದಾ ಬೆಂಬಲಿಸುವ ಸ್ಯಾಂಡಲ್ ವುಡ್ ಯಜಮಾನ ಡಿ ಬಾಸ್ ದರ್ಶನ್! ಕೈವ ಚಿತ್ರದ ಟ್ರೈಲರ್ ಲಾಂಚ್ ಮಾಡಿ ಹಸು ಗಿಫ್ಟ್ ಪಡೆದ ಸುಂದರ ಕ್ಷಣಗಳು!!

advertisement

ನವೆಂಬರ್ 29ನೇ ತಾರೀಕಿನಂದು ಬೆಂಗಳೂರಿನಲ್ಲಿ ನಡೆದಂತಹ ಕೈವ ಸಿನಿಮಾದ ಪ್ರೀ ರಿಲೀಸಿಂಗ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಕಾಣಿಸಿಕೊಂಡಂತಹ ದರ್ಶನವರು ಟೈಲರ್ ಬಿಡುಗಡೆ ಮಾಡುವ ಮೂಲಕ ಸಿನಿಮಾ ತಂಡಕ್ಕೆ ಶುಭ ಹಾರೈಸುವುದರ ಜೊತೆಗೆ ತಮ್ಮ ಪ್ರೀತಿಯ ಸಹೋದರ ಧನ್ವೀರ ಅವರಿಗೆ ವಿಶೇಷವಾದ ಉಡುಗೊರೆ ಒಂದನ್ನು ನೀಡಿದ್ದಾರೆ. ಅಲ್ಲದೆ ತಮ್ಮ ಅಭಿಮಾನಿಗಳೊಂದಿಗೆ ಕೈವ ಸಿನಿಮಾ(Kaiva Movie) ವನ್ನು ಚಿತ್ರಮಂದಿರಕ್ಕೆ ಹೋಗಿ ಪ್ರೋತ್ಸಾಹಿಸುವಂತೆಯೂ ಕೇಳಿಕೊಂಡಿದ್ದಾರೆ.

advertisement

ಸ್ಯಾಂಡಲ್ ವುಡ್ನ ಇತರೆ ನಟರೊಂದಿಗೆ ಅದ್ಭುತವಾದ ಬಾಂಧವ್ಯವನ್ನು ಬೆಳೆಸಿಕೊಂಡು ಬಂದಿರುವಂತಹ ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಯುವ ನಟರ ಪ್ರತಿ ಸಿನಿಮಾಗಳಿಗೂ ಪ್ರೋತ್ಸಾಹಿಸಿಸುತ್ತ ತನ್ನಂತೆ ಅವರು ಕೂಡ ಸಿನಿಮಾ ರಂಗದಲ್ಲಿ ಬೆಳೆಯಲಿ ಎಂದು ಸದಾ ಪ್ರಾರ್ಥಿಸುತ್ತಿರುತ್ತಾರೆ. ಹೀಗಿರುವಾಗ ಮೊನ್ನೆಯಷ್ಟೇ ಕೈವಾ ಚಿತ್ರದ ಪ್ರೀ ರಿಲೀಸಿಂಗ್ ಇವೆಂಟ್ನಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದಂತಹ ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಅವರು ಟ್ರೈಲರ್ ರಿಲೀಸ್ ಮಾಡಿ ಸಿನಿಮಾ ತಂಡಕ್ಕೆ ತಮ್ಮ ಶುಭಾಶಯಗಳನ್ನು ತಿಳಿಸಿದರು.

advertisement

ಅಲ್ಲಿ ನೆರೆದಿದ್ದ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರಲ್ಲಿ, ಬಹುದೊಡ್ಡ ತಾರಾ ಬಳಗದಲ್ಲಿ ತಯಾರಾಗಿರುವ ಕೈವ ಸಿನಿಮಾವನ್ನು ಬೆಂಬಲಿಸುವಂತೆ ಕೇಳಿಕೊಂಡಿದ್ದಾರೆ. ಇದರ ಜೊತೆಗೆ ತಮ್ಮ ಪ್ರೀತಿಯ ಸಹೋದರ ಧನ್ವೀರ ಅವರಿಗೆ ಶೋಕ್ ದಾರ್(Shokdar) ಎಂಬ ಹೆಸರಿನ ಪೊಂಗನೂರು ಕರು ಒಂದನ್ನು ಉಡುಗೊರೆಯನ್ನಾಗಿ ಶುಭ ಹಾರೈಸಿದರು. ಜೊತೆಗೆ ಥಿಯೇಟರ್ ಮುಂದೆ ಕಟ್ಟಲಾಗಿರುವಂತಹ ಕಟ್ಟೋಟ್ಗಳ ಮೇಲೆ ಹಾಲನ್ನು ಸುರಿದು ವ್ಯರ್ಥ ಮಾಡುವ ಬದಲು ಬೀದಿ ನಾಯಿಗಳಿಗೆ ನೀಡುವಂತೆ ಸಲಹೆ ಇರುವ ಮೂಲಕ ತಾವು ಮೂಲಕ ಪ್ರಾಣಿಗಳ ಮೇಲೆ ಇಟ್ಟಿರುವಂತಹ ಪ್ರೀತಿ ಮಮಕಾರವನ್ನು ದರ್ಶನ್ (Darshan) ಮೆರೆದಿದ್ದಾರೆ.

advertisement

advertisement

advertisement

ಈ ಕಾರ್ಯಕ್ರಮದ ಕೆಲ ಪೋಟೋಸ್ಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು ತಮ್ಮ ಕಾಟೇರಾ(Kateera) ಚಿತ್ರಕ್ಕಾಗಿ ಕಟ್ಟುಮಸ್ತಾದ ದೇಹ ಹಾಗೂ ಬಲಿಷ್ಟವಾದ ತೋಳುಗಳನ್ನು ಹೊಂದಿರುವಂತಹ ದರ್ಶನ್ (Darshan) ಅವರು ನೀಲಿ ಬಣ್ಣದ ಅಫ್ ಶೋಲ್ಡರ್ ಶರ್ಟ್ ಒಂದನ್ನು ಧರಿಸಿ ಕಾರ್ಯಕ್ರಮದ ಕೇಂದ್ರೀಯ ಬಿಂದುವಂತೆ ಕಾಣಿಸಿಕೊಂಡರು. ಇನ್ನು ಸ್ವತಃ ಸಿನಿಮಾ ತಂಡ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ 1983 ರಲ್ಲಿ ರಂದು ಬೆಂಗಳೂರಿನ ತಿಗಳರ ಪೇಟೆಯಲ್ಲಿ ನಡೆದ ಕರಗ ಉತ್ಸವದ ಸಂದರ್ಭದಲ್ಲಿ ನಡೆದಂತಹ ನೈಜ ಘಟನೆಯ ಆಧಾರದ ಮೇಲೆ ನಿರ್ದೇಶಕ ಜಯತೀರ್ಥರವರು ಚಿತ್ರದ ಕಥೆಯನ್ನು ಎಣೆದಿದ್ದು‌.

advertisement

advertisement

ಸಿನಿಮಾ ಗೆ ಜೊತೆ ಜೊತೆಯಲಿ ಖ್ಯಾತಿಯ ಮೇಘ ಶೆಟ್ಟಿ (Megha Shetty) ನಾಯಕ ನಟಿಯಾದರೆ ಧನ್ವಿರ್(Danveer) ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾದ ಕೆಲ ತುಣುಕುಗಳು ಹಾಗೂ ಹಾಡುಗಳೆಲ್ಲವೂ ಸೋಶಿಯಾಲ್ ಮೀಡಿಯಾ ದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು ಸಿನಿಮಾಗೆ ಪ್ರೇಕ್ಷಕರಿಂದ ಸಂಪೂರ್ಣ ಬೆಂಬಲ ದೊರಕಲಿದ್ಯಾ ಎಂಬುದನ್ನು ಕಾದು ನೋಡಬೇಕಿದೆ.

advertisement

Leave A Reply

Your email address will not be published.