ಮಲಯಾಳಂ ಸಿನಿಮಾ ಇಂಡಸ್ಟ್ರಿಯ ಮೂಲಕ ಬಾಲನಟಿಯಾಗಿ ಬಣ್ಣದ ಲೋಕವನ್ನು ಪ್ರವೇಶ ಮಾಡಿದ ಮೇಘನ ರಾಜ್ ಇಂದು ಬಹು ಬೇಡಿಕೆ ಇರುವಂತಹ ನಟಿ. ರಾಕಿಂಗ್ ಸ್ಟಾರ್ ಯಶ್(Yash) ಅವರೊಂದಿಗೆ ರಾಜಾಹುಲಿ (Rajahuli) ಸಿನಿಮಾದ ಮೂಲಕ ಕನ್ನಡ ಚಿತ್ರರಂಗವನ್ನು ಪ್ರವೇಶ ಮಾಡಿದ ಮೇಘನ ರಾಜ್ ಸಾಕಷ್ಟು ಯಶಸ್ವಿ ಸಿನಿಮಾಗಳನ್ನು ಕನ್ನಡ ಹಾಗೂ ಮಲಯಾಳಂ ಸಿನಿಮಾ ರಂಗಕ್ಕೆ ನೀಡಿ ತಮ್ಮದೇ ಆದ ವಿಶೇಷ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.
ಹೀಗೆ ಸಿನಿಮಾ ರಂಗದ ಉತ್ತುಂಗದ ಶಿಖರದಲ್ಲಿರುವಾಗಲೇ ಸರ್ಜಾ ಕುಟುಂಬದ ಮಗ ಚಿರಂಜೀವಿ ಸರ್ಜಾ ಅವರನ್ನು ನಾಲ್ಕು ವರ್ಷಗಳ ಕಾಲ ಪ್ರೀತಿಸಿ ಆನಂತರ ಮನೆಯವರೆಲ್ಲರ ಒಪ್ಪಿಗೆ ಪಡೆದು ಎರಡು 2 ಮೇ, ಸಾವಿರದ ಹದಿನೆಂಟರಂದು ಹಿಂದೂ ಹಾಗೂ ಕ್ರೈಸ್ತ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಹೀಗೆ ಮದುವೆಯಾದ ಆರಂಭಿಕ ದಿನಗಳಲ್ಲಿ ಬಹಳ ಖುಷಿ ಖುಷಿಯಿಂದ ಹನಿಮೂನ್ ಹಾಗೂ ಫಾರಿನ್ ಟ್ರಿಪ್ಗಳನ್ನು ಎಂಜಾಯ್ ಮಾಡಿ ಒಟ್ಟಿಗೆ ಕಾಲ ಕಳೆಯುತ್ತಿದ್ದಂತಹ ಈ ಜೋಡಿಗಳ ಮೇಲೆ ಅದ್ಯಾರ ವಕ್ರದೃಷ್ಟಿ ಬಿದ್ದು ಗೊತ್ತಿಲ್ಲ ವಿಧಿ ಮೇಘನ ರಾಜ್ (Meghana Raj) ಹಾಗೂ ಚಿರಂಜೀವಿ ಸರ್ಜಾ(Chiranjeevi Sarja) ಅವರನ್ನು ಎರಡೇ ವರ್ಷಕ್ಕೆ ದೂರ ಮಾಡಿಬಿಡ್ತು.
ಹೌದು ಗೆಳೆಯರೇ ಜೂನ್ 7ನೇ ತಾರೀಕು 2020 ರಂದು ಚಿರಂಜೀವಿ ಸರ್ಜಾ ಹೃದಯಘಾ’ತ ಸಮಸ್ಯೆಯಿಂದಾಗಿ ಅತಿ ಚಿಕ್ಕ ವಯಸ್ಸಿನಲ್ಲೇ ಇಹಲೋಕ ತ್ಯಜಿಸಿದರು. ಅಂದಿನಿಂದ ಇಂದಿನವರೆಗೂ ತಮ್ಮ ಮುದ್ದು ಮಗ ರಾಯನ್ ರಾಜ್ ಸರ್ಜಾ ಅವರ ನಗುವಿನಲ್ಲಿ ತಮ್ಮ ನೋವನ್ನು ಮರೆಯುತ್ತಿರುವ ಮೇಘನ ರಾಜ್ ಅವರನ್ನು ಎರಡನೇ ಮದುವೆ ಮಾಡಿಕೊಳ್ಳುವಂತೆ ಕುಟುಂಬಸ್ಥರು, ಸ್ನೇಹಿತರು ಹಾಗೂ ಅಭಿಮಾನಿಗಳು ಒತ್ತಾಯ ಮಾಡಿದರು ಕೂಡ ಮೇಘನ ರಾಜ್ (Meghana Raj) ಕಡಾ ಖಂಡಿತವಾಗಿ ಚಿರು ಅವರ ಸ್ಥಾನವನ್ನು ತಮ್ಮ ಬಾಳಿನಲ್ಲಿ ಯಾರು ತುಂಬಲು ಸಾಧ್ಯವಿಲ್ಲ..
ಹೀಗಾಗಿ ನಾನು ಮತ್ತೆಂದು ಮದುವೆಯಾಗುವ ಬಗ್ಗೆ ಚಿಂತಿಸಿಲ್ಲ ಎಂದಿದ್ದಾರೆ. ಇದೆಲ್ಲದರ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಸದ್ಯ ಮೇಘನ ರಾಜ್ ಹಾಗೂ ಚಿರಂಜೀವಿ ಸರ್ಜಾ(Chiranjeevi Sarja) ಅವರ ಮದುವೆ ಫೋಟೋಗಳು ಅರಿಶಿನ ಶಾಸ್ತ್ರದ(Haldi ceremony) ಕೆಲ ಸುಮಧುರ ಫೋಟೋ ಹರಿದಾಡುತ್ತಿದ್ದು, ಇದನ್ನು ಕಂಡಂತಹ ನೆಟ್ಟಿಗರು ಸಂತಸದ ಜೊತೆಗೆ ಬೇಸರವನ್ನು ವ್ಯಕ್ತಪಡಿಸುತ್ತಿದ್ದಾರೆ.
ಸರ್ಜಾ ಅವರ ಅದ್ದೂರಿ ಮದುವೆ ಸಂಭ್ರಮಕ್ಕೆ ಕುಟುಂಬಸ್ಥರು ಆತ್ಮೀಯರು ಹಾಗೂ ಕನ್ನಡ ಸಿನಿಮಾರಂಗದ ಸೆಲೆಬ್ರಿಟಿಗಳಾದ ರಾಕಿಂಗ್ ಸ್ಟಾರ್ ಯಶ್ ರಾಧಿಕಾ ಪಂಡಿತ್, ಐಂದ್ರಿತಾ ರೈ, ದಿಗಂತ್, ಜಗ್ಗೇಶ್ ಹಾಗೂ ಪಾರೋಲ್ ಯಾದವ್ ಹೀಗೆ ಮುಂತಾದ ಸ್ಟಾರ್ ಸೆಲೆಬ್ರಿಟಿಗಳು ಬಂದು ಸುಂದರ ಗಳಿಗೆ ಸಾಕ್ಷಿಯಾಗಿದ್ದರು.