Anna Bhagya Yojana : ಆಗಸ್ಟ್ ತಿಂಗಳಿನ ಅಕ್ಕಿಯ ಹಣ ನಿಮ್ಮ ಖಾತೆಗೆ ಜಮಾ ಆಗಿದ್ಯಾ? ಆಗದೆ ಇದ್ದರೆ ಈಗಲೇ ಸರಿ ಮಾಡಿಕೊಳ್ಳಿ ನೋಡಿ!!

Anna Bhagya Yojana : ಕರ್ನಾಟಕ ರಾಜ್ಯ ಸರ್ಕಾರವು ಐದು ಕೆಜಿ ಅಕ್ಕಿಯ ಬದಲಿಗೆ ನೀಡುತ್ತಿರುವ ಹಣವನ್ನು ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡುತ್ತಿದೆ. ಈಗಾಗಲೇ ಈ ಅನ್ನಭಾಗ್ಯ ಯೋಜನೆ ಚಾಲನೆ ಸಿಕ್ಕಿದ್ದು, ಕೆಲವರ ಖಾತೆಗೆ ಈಗಾಗಲೇ ಎರಡು ತಿಂಗಳಿಂದ ಹಣ ಜಮಾ ಮಾಡಿದೆ. ಕೆಲವರ ಖಾತೆಗೆ ಹಣ ಜಮಾ ಆಗಿದೆ ಆದರೆ ಇನ್ನೂ ಕೆಲವರು ಹಣ ಬಂದಿಲ್ಲ ಎಂದು ಗೊಂದಲದಲ್ಲಿ ಇದ್ದಾರೆ. ಹಾಗಾದರೆ ಅದನ್ನು ಹೇಗೆ ತಿಳಿಯುವುದು ಎಂದು ಪೂರ್ತಿಯಾಗಿ ತಿಳಿದುಕೊಳ್ಳಿ.

ಕಾಂಗೆಸ್ ಸರ್ಕಾರ ಅನ್ನಭಾಗ್ಯ ಯೋಜನೆ ಮಾಡಿ ಐದು ಕೆಜಿ ಅಕ್ಕಿ ಬದಲಿಗೆ ಪ್ರತಿಯೊಬ್ಬ ವ್ಯಕ್ತಿಗೆ 170 ರೂಪಾಯಿ ನೀಡುತ್ತಿದೆ. ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಇದರ ಲಾಭವನ್ನು ಕರ್ನಾಟಕದ ಫಲಾನುಭವಿಗಳು ಪಡೆದಿದ್ದಾರೆ. ಬಿಪಿಎಲ್ ಕಾರ್ಡ್, ಅಂತ್ಯೋದಯ ಕಾರ್ಡ್, ಆಗಸ್ಟ್ ತಿಂಗಳಲ್ಲಿ 3.3 ಕೋಟಿ ಜನರಿಗೆ ಹಣವನ್ನು ವರ್ಗಾವಣೆ ಮಾಡಲಾಗಿದೆ. ಆಗಸ್ಟ್ ತಿಂಗಳಿನಲ್ಲಿ ಬರೋಬ್ಬರಿ 25 ಲಕ್ಷ ಫಲಾನುಭವಿಗಳು ಈ ಲಾಭವನ್ನು ಪಡೆದುಕೊಂಡಿದ್ದಾರೆ.( ಇದನ್ನು ಓದಿ)Health Benefits : ಪ್ರತಿದಿನ ನಿಮ್ಮ ದೇಹದ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಉತ್ತಮವಾದ ಪಾನೀಯಗಳು ಯಾವ್ಯಾವುದು ಎಂದು ತಿಳಿಯಿರಿ!!

609 ಕೋಟಿ ರೂಪಾಯಿಗಳು ಜಮಾವಣೆಯಾಗಿದೆ. ಇನ್ನು ಹಣ ನಿಮ್ಮ ಖಾತೆಗೆ ಬರದೇ ಇರಲು ಕಾರಣ ಬ್ಯಾಂಕ್ ಖಾತೆಯಲ್ಲಿ ಕುಟುಂಬದ ಮಾಲೀಕನ ಹೆಸರು ಇರದೇ ಇರುವುದು, ಬ್ಯಾಂಕ್ ಖಾತೆಗೆ ಕುಟುಂಬದ ಯಜಮಾನಿಯ ಹೆಸರನ್ನು ಸೇರಿಸದೇ ಇರುವುದು, ಮತ್ತು ನಿಮ್ಮ ರೇಷನ್ ಕಾರ್ಡಿಗೆ ಕೆವೈಸಿ ಲಿಂಕ್ ಮಾಡಿಸದೆ ಇರುವುದು ಪ್ರಮುಖ ಕಾರಣ.

ಇದರಿಂದ 22 ಲಕ್ಷ ಬಿಪಿಎಲ್ ಕಾರ್ಡ್ ಬಳಕೆದಾರರು ಈ ಯೋಜನೆಯಿಂದ ಹೊರಗೆ ಉಳಿದುಕೊಂಡಿದ್ದರು. ಆರೋಗ್ಯ ಇಲಾಖೆಯ ಮುತುವರ್ಜಿಯಿಂದ ಈ ಸಮಸ್ಯೆಯನ್ನು ಬಗೆಹರಿಸಿದ್ದು 25 ಲಕ್ಷ ಹೊಸ ಫಲಾನುಭವಿಗಳು ಈ ಲಾಭವನ್ನು ಪಡೆದುಕೊಂಡಿದ್ದಾರೆ. ಇನ್ನುಳಿದ 15 ಲಕ್ಷ ಕಾರ್ಡುಗಳ ಸಮಸ್ಯೆಯನ್ನು ಆರೋಗ್ಯ ಇಲಾಖೆ ಸಪ್ಟೆಂಬರ್ ನಲ್ಲಿ ಸರಿಪಡಿಸಿ ಸಿಹಿ ಸುದ್ದಿ ನೀಡಲಿದೆ.

Anna Bhagya Yojana Karnataka
Anna Bhagya Yojana Karnataka

ಮೂರು ತಿಂಗಳಿನಿಂದ ರೇಷನ್ ಪಡೆಯದೆ ಕಾರ್ಡ್ ಬಳಸದೆ ಇರುವ ರೇಷನ್ ಕಾರ್ಡ್ಗಳನ್ನು ನಗದು ರೇಷನ್ ಕಾರ್ಡ್ ಎಂದು ಆರೋಗ್ಯ ಇಲಾಖೆ ವಜಾ ಮಾಡಿದೆ. ನಮ್ಮ ರಾಜ್ಯದಲ್ಲಿ ಬರೋಬ್ಬರಿ ಒಂದು ಕೋಟಿ 82 ಲಕ್ಷ ಬಿಪಿಎಲ್ ಕಾರ್ಡ್ ಬಳಕೆದಾರರು ಇದ್ದಾರೆ. ನಿಮ್ಮ ಖಾತೆಗೆ ಹಣ ಜಮಾ ಆಗದೆ ಇದ್ದರೆ ಕೂಡಲೇ ನಿಮ್ಮ ಬ್ಯಾಂಕ್ ಸಿಬ್ಬಂದಿಗಳನ್ನು ಭೇಟಿಯಾಗಿ ಮಾಹಿತಿಯನ್ನು ಪಡೆದು ಸರಿಪಡಿಸಿಕೊಳ್ಳಿ.

ನಿಮ್ಮ ಆಧಾರ್ ಕಾರ್ಡನ್ನು ರೇಷನ್ ಕಾರ್ಡ್ ಗೆ ಮತ್ತು ರೇಷನ್ ಕಾರ್ಡನ್ನು ಆಧಾರ್ ಕಾರ್ಡ್ ಗೆ ಲಿಂಕ್ ಮಾಡುವುದನ್ನು ಯಾವುದೇ ಕಾರಣಕ್ಕೂ ಮರೆಯದಿರಿ. ಸೆಪ್ಟೆಂಬರ್ 1 ರಿಂದ 10 ರವರೆಗೆ ಹತ್ತಿರದ ಸೈಬರ್ ಸೆಂಟರ್ ಗಳಲ್ಲಿ ನೀವು ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು.

Public News

Leave a Reply

Your email address will not be published. Required fields are marked *