7 Hot News
A Karnataka Times Affiliate Kannada News Portal

ಪೂಜಾ ಗಾಂಧಿ ಮದುವೆಯಲ್ಲಿ ಮಿಂಚಿದ ಶುಭಾ ಪೂಂಜಾ ಮತ್ತು ಸುಧಾರಾಣಿ! ಸುಂದರ ಕ್ಷಣಗಳು ಹೇಗಿತ್ತು ನೋಡಿ!!

advertisement

ಮಳೆ ಹುಡುಗಿ ಪೂಜಾ ಗಾಂಧಿಯವರು ಯಾವುದೇ ಸಂದರ್ಶನ, ಸಭೆ ಸಮಾರಂಭಗಳಲ್ಲಿ ಕಾಣಿಸಿಕೊಂಡರು ಅವರಿಗೆ ಮದುವೆ ಯಾವಾಗ ಎಂಬ ಪ್ರಶ್ನೆಯನ್ನು ಕೇಳದೆ ಬಿಡುತ್ತಿರಲಿಲ್ಲ. ಇದೀಗ ಅದೆಲ್ಲದಕ್ಕು ಅಂತ್ಯ ಹಾಡಿರುವಂತಹ ಪೂಜಾ ಗಾಂಧಿ(Pooja Gandhi) ಯವರು ತಾವು ಬಹುಕಾಲದಿಂದ ಪ್ರೀತಿಸಿದಂತಹ ಹಾಗೂ ತನಗೆ ಕನ್ನಡವನ್ನು ಕಲಿಸಿಕೊಟ್ಟಂತಹ ಹುಡುಗನನ್ನು ವರಿಸಿ ನವೆಂಬರ್ 29ನೇ ತಾರೀಕು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಇವರ ಮದುವೆ ಫೋಟೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸುದ್ದಿಗೊಳಗಾಗುತ್ತಿವೆ.

advertisement

ಹೌದು ಸ್ನೇಹಿತರೆ ಕೈ ಬರಹದಲ್ಲಿ ಅದರಲ್ಲೂ ಅಚ್ಚ ಕನ್ನಡದಲ್ಲಿ ಬರೆದಿರುವಂತಹ ಮದುವೆ ಆಮಂತ್ರಣ ಪತ್ರಿಕೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ರಾಷ್ಟ್ರಕವಿ ಕುವೆಂಪು(Kuvempu) ಆಶಯದ ಮಂತ್ರ ಮಾಂಗಲ್ಯ ಪದ್ಧತಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವುದಾಗಿ ಮಾಹಿತಿ ತಿಳಿಸಿದರು. ತಮ್ಮ ಸ್ನೇಹಿತರು ಸಿನಿರಂಗದ ಸೆಲೆಬ್ರಿಟಿಗಳು ಹಾಗೂ ಕೆಲ ಅಭಿಮಾನಿ ವರ್ಗದವರನ್ನು ತಮ್ಮ ಮನೆಗೆ ಆಹ್ವಾನಿಸಿ ಬಹಳ ಸರಳವಾಗಿ ಸ್ಟಾರ್ ನಟಿ ಪೂಜಾ ಗಾಂಧಿ (Pooja Gandhi) ಅವರು ವಿಜಯ್(Vijay) ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಕರ್ನಾಟಕದ ಸೊಸೆಯಾಗಿದ್ದಾರೆ.

advertisement

advertisement

ಪೂಜಾ ಗಾಂಧಿ ಅವರ ಮದುವೆ ಸಮಾರಂಭದಲ್ಲಿ ಕನ್ನಡ ಸಿನಿಮಾ ರಂಗದ ಸಾಕಷ್ಟು ಸ್ಟಾರ್ ಸೆಲೆಬ್ರಿಟಿಗಳು ಭಾಗಿಯಾಗಿ ನವ ವಧು ವರರನ್ನು ಹರಸಿ ಆಶೀರ್ವದಿಸಿದರು. ಗೆಳತಿಯ ಮದುವೆಗೆ ಬಹಳ ಸಾಂಪ್ರದಾಯಕವಾಗಿ ಬಂದಂತಹ ಶುಭ ಪುಂಜ ಕಾರ್ಯಕ್ರಮದ ಕೇಂದ್ರಿಯ ಬಿಂದುವಾದರೂ(centre of attraction). ನಟಿ ಪೂಜಾ ಗಾಂಧಿ (Pooja Gandhi) ಅವರು ಹಸಿರು ಬಣ್ಣದ ಸೀರೆಯನ್ನು ಉಟ್ಟು ಕಿವಿಗೆ ದೊಡ್ಡದಾದ ಜುಮ್ಕಿ ಹಾಗೂ ಕೈ ಬಳೆಗಳನ್ನು ಧರಿಸಿ ತಲೆಗೆ ಹೂ ಮುಡಿದು ಬಹಳ ಸುಂದರವಾಗಿ ಕಾಣಿಸಿಕೊಂಡರೆ.

advertisement

Pooja Gandhi Marriage
Pooja Gandhi Marriage

advertisement

ನಮ್ಮೆಲ್ಲರ ಪ್ರೀತಿಯ ಸುಧಾರಾಣಿ (Sudharani) ಅವರು ಕೂಡ ಸೀರೆಯುಟ್ಟು ಕಣ್ಣಿಗೆ ಕೂಲಿಂಗ್ ಗ್ಲಾಸ್ ಹಾಕಿಕೊಂಡು ಮದುವೆ ಮನೆ ತುಂಬಾ ಬಹಳ ಲವಲವಿಕೆಯಿಂದ ಓಡಾಡುತ್ತಾ, ಅಲ್ಲಿ ಬಂದಿದಂತಹ ಇತರೆ ಸ್ಟಾರ್ ಸೆಲೆಬ್ರೆಟಿಗಳನ್ನು ಮಾತನಾಡಿಸಿ ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಈ ಎಲ್ಲಾ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ(Social media) ಸಿಕ್ಕಾಪಟ್ಟೆ ವೈರಲಾಗುತ್ತಿದ್ದು ತಮ್ಮ ಆತ್ಮೀಯ ಗೆಳತಿಯ ಅತ್ಯಂತ ವಿಶೇಷವಾದ ದಿನಕ್ಕೆ ಸಾಕಷ್ಟು ಕುಟುಂಬಸ್ಥರು ಸ್ನೇಹಿತರು ಹಾಗು ಅಭಿಮಾನಿಗಳು ಶುಭಾಶಯಗಳ ಮಹಾಪೂರವನ್ನೇ ಹರಸುತ್ತಾ ನೂರು ಕಾಲ ಒಂದಾಗಿ ಬಾಳಿ ಎಂದು ಹಾರೈಸಿದ್ದಾರೆ‌.

advertisement

Leave A Reply

Your email address will not be published.