ವರ್ಕ್ ಔಟ್ ಮಾಡುತ್ತಿರುವ ಫೋಟೋ ಹಂಚಿಕೊಂಡ ಸ್ಯಾಂಡಲ್ ವುಡ್ ಚಾರ್ಲಿ ಬೆಡಗಿ ಸಂಗೀತಾ ಶೃಂಗೇರಿ, ಇಲ್ಲಿದೆ ನೋಡಿ ಫೋಟೋಸ್!!

ಸ್ಯಾಂಡಲ್ ವುಡ್ ನಟಿ ಸಂಗೀತಾ ಶೃಂಗೇರಿ (Sangeetha Shrungeri) ಸಿನಿ ಕೆರಿಯರ್ ನಲ್ಲಿ ಬ್ಯುಸಿಯಾಗಿದ್ದಾರೆ. ಅದರ ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ನಟಿ ಆಗಾಗ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಸ್ಯಾಂಡಲ್ ವುಡ್ ನಟಿ ಫಿಟ್ ನೆಸ್ ಗೆ ಹೆಚ್ಚು ಗಮನಕೊಡುತ್ತಾರೆ.

ನಟಿ ಸಂಗೀತಾರವರು ಕಳೆದ ಕೆಲವು ದಿನಗಳಿಂದ ವರ್ಕ್ ಔಟ್ ನಲ್ಲಿ ಬ್ಯುಸಿಯಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ನಟಿಯರು ವರ್ಕ್ ಔಟ್ ಫೋಟೋಗಳು ವೈರಲ್ ಆಗುತ್ತಿದೆ. ವರ್ಕೌಟ್ ಮಾಡುವಾಗಿನ ಬ್ಯಾಕ್ ಪೋಸ್‌ ಫೋಟೋ ಸೇರಿದಂತೆ ಹಲವಾರು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ತಮ್ಮ ಬೆನ್ನ ಹಿಂದೆ ಮಾತನಾಡುವವರಿಗಾಗಿಯೇ ಈ ರೀತಿಯ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ ಎನ್ನುವುದು ಅವರು ಬರೆದಿರುವ ಸಾಲುಗಳಲ್ಲಿ ಸ್ಪಷ್ಟವಾಗಿ ಗೊತ್ತಾಗುತ್ತಿದೆ.

ಇತ್ತೀಚೆಗಷ್ಟೇ ವರ್ಕ್ ಔಟ್ ಬಗ್ಗೆ ಮಾತನಾಡಿರುವ ನಟಿ ಸಂಗೀತಾ ಶೃಂಗೇರಿಯವರು, ಖುಷಿ ವ್ಯಕ್ತಪಡಿಸಿದ್ದಾರೆ. ಖಾಸಗಿ ಸುದ್ದಿವಾಹಿನಿಯೊಂದಿಗೆ ಮಾತನಾಡಿದ್ದ ನಟಿ, “ನನಗೆ ಒಂದು ಆಸೆ ಇತ್ತು. ಬಾಲ್ಯದಲ್ಲಿಯೇ ಹುಟ್ಟಿದ (Exclusive Interview) ಕನಸದು. ಒಂದು ಬಾರಿ ಪ್ರಯತ್ನಿಸಿದ್ದೆ, ಆದರೆ ಆಗ ದೇಹ ಸಣ್ಣ ಆಗಿತ್ತು. ಎರಡನೇ ಸಲ ಪ್ರಯತ್ನ ಫಲ ಕೊಟ್ಟಿತ್ತು.

“8 ವಾರಗಳಲ್ಲಿ ಇದನ್ನ ಸಾಧಿಸಬಹುದು ಅಂತ ಜಿಮ್ ಟ್ರೈನರ್ ಹೇಳಿದ್ದರು. ನಾಲ್ಕು (Sangeetha Sringeri) ವಾರಗಳಲ್ಲಿಯೇ ಅದು ಸಾಧ್ಯವಾಯಿತು. ಹೊಟ್ಟೆ ಟಚ್ ಮಾಡಿಕೊಂಡಾಗ ಅದೇನೋ ಒಂದು ಖುಷಿ ಬರ್ತಾ ಇದೆ. ಮೈಯೊಳಗೆ ಒಂದು (777 Charlie Film Heroine) ಅಗಾಧ ಶಕ್ತಿ ಇದ್ದಂತೆ ಫೀಲ್ ಆಗುತ್ತಿದೆ. ಸಿಕ್ಸ್ ಪ್ಯಾಕ್ ಅಂದ್ರೆ ಅದರ ಖುಷಿನೇ ಬೇರೆ” ಎಂದಿದ್ದಾರೆ ಸಂಗೀತಾ ಶೃಂಗೇರಿ.

777 ಚಾರ್ಲಿ (777 Charli) ಸಿನಿಮಾದಲ್ಲಿ ಮಿಂಚಿದ ಸಂಗೀತಾ ಶೃಂಗೇರಿ (Sangeetha Shrungeri) ಇದೀಗ ಬೆಳ್ಳಿತೆರೆಯಲ್ಲಿ ಬಾರಿ ಡಿಮ್ಯಾಂಡ್ ಹೊಂದಿದ್ದಾರೆ. ಹರ ಹರ ಮಹಾದೇವ (Harahara Mahadeva) ಸೀರಿಯಲ್‌ನಲ್ಲಿ ಸತಿ-ಪಾರ್ವತಿ ಪಾತ್ರದಲ್ಲಿ ಅಭಿನಯಿಸಿದ್ದರು. ಆ ಬಳಿಕ ನಟಿ ಸಂಗೀತಾ ಶೃಂಗೇರಿಯವರಿಗೆ A+ ಸಿನಿಮಾದಲ್ಲಿ ಕಾಣಿಸಿಕೊಂಡರು.

ಆದರೆ 777 ಚಾರ್ಲಿ ಸಿನಿಮಾದಿಂದ ಜನಪ್ರಿಯತೆಯೂ ಸಿಕ್ಕಿತು. ಆದಾದ ಬಳಿಕ ಲಕ್ಕಿಮ್ಯಾನ್ (Lucky Man) ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯಕ್ಕೆ ಒಳ್ಳೊಳ್ಳೆಯ ಕಥೆಗಳನ್ನು ಕೇಳುತ್ತಿದ್ದೂ, ಹೊಸ ಗೆಟಪ್ ಟ್ರೈ ಮಾಡುತ್ತಿದ್ದು, ತಮ್ಮ ಮುಂದಿನ ಸಿನಿಮಾದ ಬಗ್ಗೆ ಸದ್ಯದಲ್ಲೇ ಗುಡ್ ನ್ಯೂಸ್ ನೀಡಲಿದ್ದಾರೆ ಎನ್ನಲಾಗುತ್ತಿದ್ದು, ಕಾದು ನೋಡಬೇಕಾಗಿದೆ.

Public News

Leave a Reply

Your email address will not be published. Required fields are marked *