ಸಿನಿಮಾರಂಗದಲ್ಲಿ ಗುರುತಿಸಿಕೊಂಡಿರುವ ನಟ ನಟಿಯರ ಬದುಕಿನಲ್ಲಿ ಎಷ್ಟೇ ನೋವಿದ್ದರೂ ಕೂಡ ತನ್ನ ನೋವನ್ನು ಮರೆತು ಅಭಿಮಾನಿಗಳಿಗೆ ಹಾಗೂ ಪ್ರೇಕ್ಷಕವರ್ಗಕ್ಕೆ ಮನೋರಂಜನೆ ನೀಡುತ್ತಾರೆ. ಕೆಲವೊಮ್ಮೆ ತಮ್ಮ ಬದುಕಿನಲ್ಲಿರುವ ನೋವಿನ ವಿಚಾರ ಹಾಗೂ ಕಹಿ ಘಟನೆಯ ಬಗ್ಗೆ ರಿವೀಲ್ ಮಾಡದೇನೆ ನಗು ಮುಖದಿಂದಿರುವುದನ್ನು ಮಾತ್ರ ಹೊರ ಜಗತ್ತಿಗೆ ತಿಳಿಸುತ್ತಾರೆ. ಈ ವಿಚಾರದಲ್ಲಿ ಹಿರಿಯ ನಟ ಅವಿನಾಶ್ (Avinash) ಹಾಗೂ ಮಾಳವಿಕಾ (Malavika) ರವರು ಇದೇ ರೀತಿಯಲ್ಲಿ ಬದುಕುತ್ತಿದ್ದಾರೆ.
ಹೌದು ಅವಿನಾಶ್ ದಂಪತಿಗಳ ಮಗ ಎಲ್ಲರ ಮಕ್ಕಳಂತೆ ಓಡಾಡುತ್ತ ಇಲ್ಲ. ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಮಗ ಗಾಲವ್ (Gaalav) ನನ್ನು ಅತ್ಯಂತ ಜಾಗರೂಕರಾಗಿ ನೋಡಿಕೊಳ್ಳುತ್ತಿದ್ದಾರೆ. ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಮಗ ಗಾಲವ್ (Gaalav) ಜೊತೆಗೆ ಇರುವ ಹಿರಿಯ ನಟ ಅವಿನಾಶ್ ಅವರ ಫೋಟೋವೊಂದು ವೈರಲ್ ಆಗಿವೆ. ಈ ಫೋಟೋದಲ್ಲಿ ಗಾಲವ್ ತಂದೆ ಅವಿನಾಶ್ ಅವರ ಪಕ್ಕದಲ್ಲಿ ಕುಳಿತುಕೊಂಡಿದ್ದಾನೆ. ಈ ಫೋಟೋಗೆ ಫ್ಯಾನ್ಸ್ ಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗಷ್ಟೇ ವೀಕೆಂಡ್ ವಿತ್ ರಮೇಶ್ ಸೀಸನ್ 5 ನಟ ಅವಿನಾಶ್ (Actor Avinash) ರವರು ಅತಿಥಿಯಾಗಿ ಆಗಮಿಸಿದ್ದರು. ಈ ವೇದಿಕೆಯ ಮೇಲೆ ನಟ ಅವಿನಾಶ್ ಹಾಗೂ ನಟಿ ಮಾಳವಿಕಾ (Actress Malavika) ರವರ ಮಗನನ್ನು ಮೊದಲ ಬಾರಿಗೆ ಪರದೆಯ ಮೇಲೆ ತೋರಿಸಲಾಗಿತ್ತು. ಇದೇ ವೇದಿಕೆಯ ಮೇಲೆ ದಾಂಪತ್ಯ ಜೀವನ ಹಾಗೂ ಮಗನ ಬಗ್ಗೆ ಮಾತನಾಡಿದ್ದು, ಭಾವುಕರಾಗಿದ್ದರು.
ನಟ ಅವಿನಾಶ್ ಅವರು ಮಾತನಾಡಿ, ಕಿರುತೆರೆಯ ‘ಮಾಯಾಮೃಗ’ (Mayamruga) ಧಾರಾವಾಹಿಯಲ್ಲಿ ನಾವಿಬ್ಬರು ಒಟ್ಟಿಗೆ ಅಭಿನಯಿಸಿದ್ವಿ. ಸ್ನೇಹಿತರಾಗಿದ್ವಿ. ನಮ್ಮಿಬ್ಬರ ಮಧ್ಯೆ ವಯಸ್ಸಿನ ಅಂತರವಿತ್ತು. ಆದರೆ, ಇಬ್ಬರೂ ಯೋಚನೆ ಮಾಡುವ ರೀತಿ ಒಂದೇ ಇತ್ತು. ಒಟ್ಟಿಗೆ ಇರಬಹುದೇನೋ ಅಂತ ನನಗೆ ಅನಿಸಿತ್ತು. ಆದರೆ, ಕೇಳುವ ಧೈರ್ಯ ನನಗೆ ಇರಲಿಲ್ಲ ಎಂದಿದ್ದರು.
ಒಂದು ದಿನ ಅವಿನಾಶ್ ಮನೆಗೆ ಮಾಳವಿಕಾ ಮನೆಗೆ ಬಂದಿದ್ದರು. ನನ್ನ ಮನಸ್ಸಿನಲ್ಲಿ ಬಂತು.. ನಮ್ಮ ಹುಡುಗಿನ ಮದುವೆ ಆಗ್ತೀಯಾ ಅಂತಾ ಮಾಳವಿಕಾ ತಾಯಿ ನೇರವಾಗಿ ಕೇಳಿದಿರಂತೆ. ಮನೆಗೆ ಹೋಗಿ ಅಣ್ಣಂದಿರ ಜೊತೆ ಮಾತನಾಡಬೇಕು ಎಂದು ಅವಿನಾಶ್ ಹೇಳಿ ಹಾಂಗ್ ಕಾಂಗ್‌ನಿಂದ ಅಣ್ಣನನ್ನ ಕರೆಯಿಸಿ ಮಾಳವಿಕಾಳನ್ನ ನೋಡಿದ್ದರಂತೆ. ಆ ಬಳಿಕ ನಾವು ಎಂಗೇಜ್‌ಮೆಂಟ್ ಮಾಡಲಿಲ್ಲ. ಫೆಬ್ರವರಿ 26ರಂದು ಮದುವೆ ಮಾಡಿಬಿಟ್ವಿ ಎಂದು ಮಾಳವಿಕಾ ತಾಯಿ ಸಾವಿತ್ರಿ ಹೇಳಿದ್ದರು.
ಈ ವೇದಿಕೆಯ ಮೇಲೆ ನಟಿ ಮಾಳವಿಕಾ ಮಗನ ಬಗ್ಗೆ ಮಾತನಾಡಿದ್ದು, “ನಮ್ಮ ಮಗ ಗಾಲವ್. ದೈವ ಸಂಕಲ್ಪ ಇತ್ತು. ಅದಕ್ಕೆ ಗಾಲವ್ (Gaalav) ಹುಟ್ಟಿದ. ಗಾಲವ್ ಎಲ್ಲರಂತೆ ಅಲ್ಲ. ಅದು ಗೊತ್ತಾಗೋಕೆ ಒಂದಷ್ಟು ವರ್ಷ ಆಯ್ತು. 14 ವರ್ಷಗಳಲ್ಲಿ ಇದೇ ಮೊದಲ ಬಾರಿ ಗಾಲವ್ ಯಾವುದಾದರೂ ಸೆಟ್‌ಗೆ ಬಂದಿರೋದು. ಗಾಲವ್ ಹುಟ್ಟಿದಾಗ ಎಲ್ಲಾ ಮಕ್ಕಳ ತರಹ ಇರಲಿಲ್ಲ. ಒಬ್ಬೊಬ್ಬರು ಒಂದೊಂಥರ ಅವನ ಬಗ್ಗೆ ಮಾತನಾಡಿದರು. ಒಬ್ಬರು ಯಾವುದೋ ಯೋಗಿ ತರಹ ಇದ್ದಾನೆ ಅಂದರು. ಇನ್ನೊಬ್ಬರು ನಾರ್ಮಲ್ ಅಲ್ಲವೇ ಅಲ್ಲ ಎಂದರು” ಎಂದು ಹೇಳಿಕೊಂಡಿದ್ದರು.
“ಸುಮಾರು 50 ದಿನ ಐಸಿಯುನಲ್ಲಿದ್ದ. ನಂತರ ವಾಪಸ್ ಮನೆಗೆ ಬಂದ. ನಂತರ ಯಾವ ಅಪ್ಪ-ಅಮ್ಮನೂ ಮಾಡಿಸದೇ ಇರುವ ಒಂದು ಟೆಸ್ಟ್ ಮಾಡಿಸಿದ್ವಿ. ಯಾವ ಕಾರಣಕ್ಕೆ ಮಗು ಹೀಗೆ ಹುಟ್ಟತ್ತೆ ಅಂತ ತಿಳಿಯೋಕೆ. ಜೆನೆಟಿಕ್ ಟೆಸ್ಟ್ ಮಾಡಿದಾಗ ಗೊತ್ತಾಯಿತು Wolf Hirschhorn Syndrome ಇದೆ ಅಂತ. ಅದು ಯಾರಿಗೂ ಗೊತ್ತೇ ಇಲ್ಲ. ಯಾವ ನ್ಯೂರಾಲಜಿಸ್ಟ್ ಕೂಡ ನಮಗೆ ಹೇಳಲಿಲ್ಲ. ಈ ಸಿಂಡ್ರೋಮ್‌ನಲ್ಲಿ ಬುದ್ಧಿ ಮಾಂದ್ಯತೆ ಇದೆ. ಮಾತು ಬರೋದಿಲ್ಲ. ನಡಿಗೆ ಸ್ವಲ್ಪ ಮಟ್ಟಿಗೆ ಬರಬಹುದು” ಎಂದಿದ್ದರು ಮಾಳವಿಕಾ.
“ಆಯಸ್ಸಿನ ಬಗ್ಗೆ ನಿಶ್ಚಿಯ ಇಲ್ಲ. ಜೆನೆಟಿಕ್ ಟೆಸ್ಟ್ ಬಳಿಕ ನಿಮ್ಮ ಕಾರಣಕ್ಕೂ ಮಗ ಹೀಗಿಲ್ಲ. ಅವಿನಾಶ್ ಕಾರಣಕ್ಕೂ ಮಗ ಹೀಗಿಲ್ಲ. ಯು ಆರ್ ಜಸ್ಟ್ ಅನ್‌ಲಕ್ಕಿ ಎಂದರು ಡಾಕ್ಟರ್. ಜಗತ್ತಿನಲ್ಲಿ 2000 ಮಕ್ಕಳು ಹೀಗಿದ್ದಾರೆ ಎಂದು ಡಾಕ್ಟರ್ ತಿಳಿಸಿದ್ದರು. ನಮ್ಮ ಮಗ ಗಾಲವ್‌ನ ನೋಡಿಕೊಳ್ಳೋದು ಕಾಳಿ ಎಂಬುವರು. ಅವರ ಬಗ್ಗೆ ಮಾತನಾಡಿದ ಮಾಳವಿಕಾ, ಕಾಳಿ ನಮ್ಮನೆ ಯಶೋದಾ. ನಾನು ಹೆತ್ತವಳು ಅಷ್ಟೇ. ಹುಟ್ಟಿದಾಗಿನಿಂದ ಗಾಲವ್‌ನ ನೋಡಿಕೊಂಡಿರುವುದು ಕಾಳಿ ಅವರು. ಇನ್ನೂ ಮಗನ ಬಗ್ಗೆ ಮಾತನಾಡಿದ ಅವಿನಾಶ್, ದೇವರು ನಮ್ಮ ಜೊತೆ ಇದ್ದಾನೆ. ಒಂದು ದಿನ ಇವನು ದೇವರ ಜೊತೆ ಹೋಗ್ತಾನೆ” ಭಾವುಕರಾಗಿದ್ದರು.