ರಾಜ್ಯದಾದಂತ್ಯ ಸೌಜನ್ಯ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಪ್ರತಿಭಟನೆ ಹಾಗೂ ಹೋರಾಟಗಳು ನಡೆಯುತ್ತಿದೆ. ಹನ್ನೊಂದು ವರ್ಷಗಳ ಹಿಂದೆ ನಡೆದ ಧರ್ಮಸ್ಥಳ (Dharmastala) ದ ಘಟನೆಯೊಂದು ಬೆಚ್ಚಿ ಬೀಳಿಸಿತ್ತು. ಧರ್ಮಸ್ಥಳದ ಸಮೀಪ ಭೀಕರ ಆ-ತ್ಯಾಚಾರಕ್ಕೀಡಾಗಿ ಕೊ-ಲೆಗೀಡಾಗಿದ್ದ ಸೌಜನ್ಯ (Sowjanya) ಪ್ರಕರಣಕ್ಕೆ ಹನ್ನೊಂದು ವರ್ಷಗಳಾದರೂ ನ್ಯಾಯ ಸಿಗಲಿಲ್ಲ.
ಸದ್ಯಕ್ಕೆ ಈ ಪ್ರಕರಣವು ದೊಡ್ಡ ಮಟ್ಟಿಗೆ ಸುದ್ದಿಯಾಗುತ್ತಿರುವಾಗಲೇ ನಟ ದುನಿಯಾ ವಿಜಯ್ (Duniya Vijay) ಅವರು ಮಾಡಿರುವ ಟ್ವೀಟ್ ವೊಂದು ಎಲ್ಲರ ಗಮನ ಸೆಳೆಯುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ‘ಜಸ್ಟಿಸ್ ಫಾರ್ ಸೌಜನ್ಯ’ ಅಭಿಯಾನ ಆರಂಭ ಆಗಿದೆ. ಇನ್ನೊಂದು ಕಡೆ ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ (Veerendra Heggade) ಯ ವಿರುದ್ಧ ಕೆಲವರು ಬೆರಳು ಮಾಡಿ ತೋರಿಸುತ್ತಿದ್ದಾರೆ. ಆದರೆ ಇದೀಗ ನಟ ದುನಿಯಾ ವಿಜಯ್ ಅವರು ಬೆಂಬಲ ಸೂಚಿಸಿದ್ದಾರೆ.
ನಟ ದುನಿಯಾ ವಿಜಯ್ ಅವರು ತಮ್ಮ ಟ್ವಿಟ್ಟರ್ (Twitter) ಖಾತೆಯಲ್ಲಿ, “ಪ್ರತಿ ವರ್ಷ ಧರ್ಮಸ್ಥಳದ ದರ್ಶನ ಪಡೆಯುವುದು ವಾಡಿಕೆಯಾಗಿತ್ತು, ಆದರೆ ಸೌಜನ್ಯಳ ಪ್ರಕರಣದ ಇಂದಿನ ಬೆಳವಣಿಗೆ ನೋಡಿ ಸೌಜನ್ಯ ಮತ್ತು ಕುಟುಂಬಸ್ಥರಿಗೆ ನ್ಯಾಯ ಸಿಗುವವರೆಗೂ ಮಂಜುನಾಥನ ದರ್ಶನ ಮಾಡಕೂಡದು ಅನಿಸುತ್ತಿದೆ. ಸತ್ಯ ಎಂಬುದು ಸೂರ್ಯನ ಬೆಳಕಿದಂತೆ ಯಾರು ಹೆಚ್ಚು ಸಮಯ ಮರೆಮಾಚಲಾಗದು – ಬುದ್ಧ ” ಎಂದಿದ್ದಾರೆ. ಈ ಟ್ವೀಟ್ ಜೊತೆಗೆ ಧರ್ಮಸ್ಥಳದ ಮಂಜುನಾಥ ಸ್ವಾಮಿ ಹಾಗೂ ಸೌಜನ್ಯಳ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ನಟನ ಟ್ವೀಟ್ ನೋಡಿದರೆ ಈ ಪ್ರರಣದ ವಿರುದ್ಧ ಧ್ವನಿ ಎತ್ತಿರುವುದನ್ನು ನೋಡಬಹುದು.
ಈ ಸೌಜನ್ಯ ಪ್ರಕರಣದತ್ತ ಕಣ್ಣು ಹಾಯಿಸಿದರೆ, ಹನ್ನೊಂದು ವರ್ಷದ ಹಿಂದೆ ಧರ್ಮಸ್ಥಳದ ನೇತ್ರಾವತಿ ನದಿ Netravati River) ಯ ಸಮೀಪದ ಕಾಡಿನಲ್ಲಿ ನಡೆದಿತ್ತು. ಈ ಪ್ರಕರಣವು ಅಲ್ಲಿನ ಸುತ್ತ ಮುತ್ತಲಿನ ಜನರನ್ನು ಬೆಚ್ಚಿ ಬೀಳಿಸುವಂತೆ ಮಾಡಿತ್ತು. ಕೊನೆಗೆ ಈ ಪ್ರಕರಣದಡಿಯಲ್ಲಿ ಸಂತೋಷ್ ರಾವ್ (Santhosh Rao) ಎಂಬಾತನನ್ನು ಆರೋಪಿ ಎಂದು ಬಂಧಿಸಿದ್ದರು. ಸೌಜನ್ಯ ಆ- ತ್ಯಾಚಾರ ಪ್ರಕರಣಕ್ಕೆ ಸಂಬಂಧ ಪಟ್ಟಂತೆ 11 ವರ್ಷಗಳ ಬಳಿಕ ಮರುಜೀವ ಬಂದಿದ್ದು, ಸಿಬಿಐ ವಿಶೇಷ ಕೋರ್ಟ್ ನಲ್ಲಿ ಸಂತೋಷ್ ರಾವ್ ನಿರಪರಾಧಿ ಎನ್ನುವ ತೀರ್ಪು ಹೊರಬಿದ್ದಿದೆ.
ಹೀಗಾಗಿ ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಅ-ಪರಾಧಿ ಯಾರೆಂದು ಪ-ತ್ತೆ ಹಚ್ಚಿ ಆರೋಪಿಗೆ ಶಿಕ್ಷೆಯಾಗಬೇಕು ಎನ್ನುವುದು ಎಲ್ಲರ ಕೂಗು. ಇತ್ತ ಸೌಜನ್ಯ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಮೈಸೂರಿನ ಒಡನಾಡಿ ಸಂಸ್ಥೆ (Mysore Odanadi Samste) ಯೊಂದು ಸೌಜನ್ಯಾಳಿಗೆ ನ್ಯಾಯ ಕೊಡಿಸಲು ಕಾನೂನು ಹೋರಾಟವನ್ನು ಕೈ ಜೋಡಿಸಿದೆ. ಹನ್ನೊಂದು ವರ್ಷಗಳ ಬಳಿಕ ಮತ್ತೆ ಮುನ್ನಲೆಗೆ ಬಂದಿರುವ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ನ್ಯಾಯ ಸಿಗುತ್ತಾ ಎನ್ನುವುದನ್ನು ಕಾದುನೋಡಬೇಕು.