ಅರಿಶಿಣ ಶಾಸ್ತ್ರದಲ್ಲಿ ಮಿಂದೆದ್ದ ಕಾಮಿಡಿ ಕಲಾವಿದ ಸಂಜು ಬಸಯ್ಯ! ಇವರ ಮುದ್ದಾದ ಜೋಡಿ ಹೇಗಿದೆ ನೋಡಿ!!

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಮಾತಿದೆ ಇದಕ್ಕೆ ದಿ ಬೆಸ್ಟ್ ಉದಾಹರಣೆಯ ನಮ್ಮ ಕಾಮಿಡಿ ಕಿಲಾಡಿಗಳು ಖ್ಯಾತಿಯ ಸಂಜು ಬಸಯ್ಯನವರು ನಟನಿಗೆ ಆಕಾರ, ಬಾಹ್ಯ ರೂಪ, ಸೌಂದರ್ಯ ಮುಖ್ಯವಲ್ಲ ಎಂಬುದನ್ನು ತೋರಿಸಿಕೊಟ್ಟಂತಹ ಈ ನಟ ತಮ್ಮ ಅಮೋಘ ಹಾಸ್ಯ ಪ್ರತಿಭೆಯ (comedy sense) ಮೂಲಕ ಯಶಸ್ವಿಯಾದವರು. ಹೀಗೆ ಹಲವಾರು ವರ್ಷಗಳಿಂದ ತಮ್ಮ ಹಾಸ್ಯ ನಟನೆಯ ಮೂಲಕ ಗುರುತಿಸಿಕೊಂಡಿರುವ ಸಂಜು ಬಸಯ್ಯನವರು.

ತಮ್ಮ ಬಹುಕಾಲದ ಗೆಳತಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಮಾಹಿತಿಯ ಖುಷಿ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಹಾಗಾದ್ರೆ ಎಂದು ಯಾವಾಗ ಯಾರೊಂದಿಗೆ ಸಂಜು ಬಸಯ್ಯ(Sanju Basayya)ಯನವರು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ? ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಗೆಳೆಯರೇ ಮೂಲತಹ ಉತ್ತರ ಕರ್ನಾಟಕದ ಬೆಳಗಾವಿ ಜಿಲ್ಲೆಯ (belgaum district) ಮರುಗೋಡು ಗ್ರಾಮದವರಾದ ಸಂಜು ಬಸಯ್ಯ(Sanju Basayya) ತಮ್ಮ ಬಾಹ್ಯಕಾರದಿಂದ ಸಾಕಷ್ಟು ಸಿನಿಮಾ ಹಾಗೂ ರಿಯಾಲಿಟಿ ಶೋಗಳಲ್ಲಿ ಆಕಾಶವನ್ನು ಪಡೆದುಕೊಂಡು ವೃತ್ತಿ ಪರವಾಗಿ ಗುರುತಿಸಿಕೊಂಡಿದ್ದರು. ಹೀಗೆ ಕಾಮಿಡಿ ಕಿಲಾಡಿಗಳು(comedy keladigalu) ಕಾರ್ಯಕ್ರಮದ ವೇದಿಕೆ ಮೇಲೆ ತಮ್ಮ ಬಹುಕಾಲದ ಗೆಳತಿ ಪಲ್ಲವಿ ಬಳ್ಳಾರಿ ಅವರ ಬಗ್ಗೆ ಹಲವಾರು ಬಾರಿ ಸಂಜು ಬಸಯ್ಯ(Sanju Basayya) ಮಾಹಿತಿಯನ್ನು ಹಂಚಿಕೊಂಡಿದ್ದರು.

ಕಳೆದ ಕೆಲದಿನಗಳ ಹಿಂದಷ್ಟೇ ಶ್ರೀ ವೀರಭದ್ರೇಶ್ವರ ಕಲ್ಯಾಣ ಮಂಟಪ ಬೈಲಹೊಂಗಲ ಮಹಾನಗರದಲ್ಲಿ ಆರತಕ್ಷತೆ ಕಾರ್ಯಕ್ರಮವು ನೆರವೇರಿತು. ಅದರಂತೆ ಇದೀಗ ಗುರು ಹಿರಿಯರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಂಜು ಬಸಯ್ಯ ಮತ್ತು ಪಲ್ಲವಿ ಬಳ್ಳಾರಿ ಸಿದ್ದರಾಗಿದ್ದು, ತಮ್ಮ ಮದುವೆಯ ಇನ್ವಿಟೇಶನ್ ಕಾರ್ಡ್(invitation card) ಅನ್ನು ತಮಗೆ ತಿಳಿದಿರುವಂತಹ ಸೆಲೆಬ್ರಿಟಿಗಳಿಗೆ ನೀಡಿ ಮದುವೆಗೆ ಆಹ್ವಾನಿಸಿದ್ದಾರೆ. ಅಲ್ಲಿದೆ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಮದುವೆಯ ಸಂತಸದ ವಿಚಾರವನ್ನು ಹಂಚಿಕೊಂಡಿರುವ ಸಂಜು ಬಸಯ್ಯ(Sanju Basayya) ಸರ್ವರಿಗೂ ಆದರದ ಸ್ವಾಗತವನ್ನು ಕೋರಿದ್ದಾರೆ.

Public News

Leave a Reply

Your email address will not be published. Required fields are marked *