ಅನಾಥಾಶ್ರಮ ನಡೆಸುವ ಮೂಲಕ ತಮ್ಮ ಜೀವನವನ್ನೇ ಅದಕ್ಕಾಗಿ ಮುಡಿಪಾಗಿಟ್ಟರು ಜನಸ್ನೇಹಿ ಯೋಗೀಶ್ ಅವರು ಪತ್ನಿಯ ಜೊತೆಗೆ ಸುಂದರ ಕ್ಷಣಗಳು ನೋಡಿ!!

ಮಾನವ ಜನ್ಮ ದೊಡ್ಡದು ಮಾನವೀಯ ಮೌಲ್ಯಗಳು ಅದಕ್ಕಿಂತ ದೊಡ್ಡದು ಎಂದು ಅರಿತುಕೊಂಡು ಬೇರೆಯವರಿಗೆ ಸಹಾಯ ಮಾಡುತ್ತಾ, ತಮ್ಮ ಕೈಲಾದಷ್ಟು ಬೇರೆಯವರ ನೋವಿನಲ್ಲಿ ಭಾಗಿಯಾಗುತ್ತಾ ಜೀವನ ನಡೆಸುವ ಜನರನ್ನು ಎಂದು ನೋಡುವುದು ಬಹಳ ವಿರಳ. ನಾನು ತನ್ನದು ಎಂದು ಸ್ವಾರ್ಥ ದಿಂದ ಬದುಕುವ ಜನರ ನಡುವೆ ಜನಸ್ನೇಹಿ ಯೋಗೇಶ್ ವಿಭಿನ್ನವಾಗಿ ಕಾಣಿಸಿಕೊಳ್ಳುತ್ತಾರೆ.

ಹೌದು, ಜನಸೇಹಿ ಯೋಗೇಶ್ ಯಾರೋ ಎಂಬುದರ ಬಗ್ಗೆ ಸಾಕಷ್ಟು ಜನರಿಗೆ ಈಗಾಗಲೇ ಗೊತ್ತಿರುತ್ತೆ. ಬೆಂಗಳೂರಿನಲ್ಲಿ ಜನಸ್ನೇಹಿ ನಿರಾಶ್ರಿತರ ಆಶ್ರಮವನ್ನು ಕಟ್ಟಿ ಬೆಳೆಸಿರುವ ಯೋಗೇಶ್ ಅವರು ಇಲ್ಲಿಯವರೆಗೆ ಅದೆಷ್ಟೋ ಮುದಿ ಜೀವಗಳಿಗೆ ಸಾಂತ್ವನ ನೀಡಿದ್ದಾರೆ, ಆಶ್ರಯ ಕೊಟ್ಟಿದ್ದಾರೆ. ಇಂದಿನ ಯುವ ಪೀಳಿಗೆ ಸಂಬಂಧಗಳನ್ನೇ ಮರೆತು ಸ್ವಾರ್ಥಕ್ಕಾಗಿ ತಮ್ಮ ತಂದೆ ತಾಯಿಯನ್ನೇ ಮನೆಯಿಂದ ಹೊರ ಹಾಕುವ ಘಟನೆಗಳು ಸಾಕಷ್ಟು ನಡೆಯುತ್ತಿದೆ. ಹೀಗೆ ಮನೆಯಿಂದ ಹೊರ ಬಿದ್ದ ತಂದೆ ತಾಯಿ ಅಥವಾ ವಯಸ್ಸಾದವರು ಎಲ್ಲಿಗೆ ತಾನೇ ಹೋಗಬೇಕು.? ಇಂಥವರಿಗೆ ಆಶ್ರಯ ನೀಡಿ ಬಹಳ ದೊಡ್ಡ ಕೆಲಸ ಮಾಡುತ್ತಿದ್ದಾರೆ ಜನಸ್ನೇಹಿ ಯೋಗೇಶ್ ಅವರು.

ಜನಸ್ನೇಹಿ ನಿರಾಶ್ರಿತರ ಆಶ್ರಮದಲ್ಲಿ ಈಗಾಗಲೇ 60 ರಿಂದ 70ಕ್ಕೂ ಹೆಚ್ಚು ಜನ ವೃದ್ಧರು, ನಿರಾಶ್ರಿತರು ಆಶ್ರಯ ಪಡೆದುಕೊಂಡಿದ್ದಾರೆ. ಅವರ ಊತ, ವಸತಿ ಔಷಧ ಮೊದಲಾದವುಗಳಿಗೆ ಸಾಕಷ್ಟು ಹಣ ಖರ್ಚಾಗುತ್ತದೆ ಆದರೆ ಯೋಗೇಶ್ ಅವರು ಇದೆಲ್ಲವನ್ನು ಬಹಳ ಶ್ರದ್ಧೆಯಿಂದ ನಿಭಾಯಿಸುತ್ತಿದ್ದಾರೆ.

ಜನಸ್ನೇಹಿ ನಿರಾಶ್ರಿತರ ಸೇವಾ ಆಶ್ರಮವನ್ನು ಯೋಗೇಶ್ ಆರಂಭಿಸಿ ಸುಮಾರು 6 ವರ್ಷಗಳೇ ಕಳೆದಿವೆ ಇಷ್ಟು ವರ್ಷಗಳಲ್ಲಿ ಇಲ್ಲಿ ಆಶ್ರಯ ಪಡೆದವರು ನಿರಾಶ್ರಿತರಾಗಿ ಬಂದು ಕೊನೆಗೆ ಮನೆಯನ್ನು ಸೇರಿದವರು ಅದೆಷ್ಟೋ ಮಂದಿ. ತಾನು ತನ್ನ ಕೈಲಾದಷ್ಟು ಇತರರಿಗೆ ಸಹಾಯ ಮಾಡಬೇಕು ಎನ್ನುವ ಮನೋಭಾವ ಹೊಂದಿರುವ, ಯೋಗೇಶ್ ಅವರು ಇತ್ತೀಚಿಗೆ ತಮ್ಮ ಧರ್ಮಪತ್ನಿಯ ಜೊತೆಗೆ ದೇವಾಲಯ ಒಂದರಲ್ಲಿ ಪ್ರಸಾದದ ಊಟ ಸ್ವೀಕರಿಸುವಾಗ ಹೆಂಡತಿಗೆ ಕೈತುತ್ತು ನೀಡಿರುವ ವಿಡಿಯೋ ವೈರಲ್ ಆಗಿದೆ.

 

View this post on Instagram

 

A post shared by Janasnehi Yogesh (@janasnehi_yogesh)

ಗಂಡನ ಕೈಯಲ್ಲಿ ಪ್ರಸಾದದ ತುತ್ತನ್ನು ತಿನ್ನಿಸಿಕೊಂಡ ಯೋಗೇಶ್ ಅವರ ಪತ್ನಿಯ ಮುಖದಲ್ಲಿ ಇರುವ ನಗು ಆ ಸಂತೋಷ ಹಾಗೂ ಹೆಂಡತಿಗೆ ಊಟ ತಿನ್ನಿಸಿದ ಯೋಗೇಶ್ ಅವರ ಮನಸ್ಸಿನಲ್ಲಿ ಇದ್ದ ಪ್ರೀತಿ ಈ ವಿಡಿಯೋದಲ್ಲಿ ಬಹಳ ಚೆನ್ನಾಗಿ ಕಾಣಿಸುತ್ತದೆ. ಈ ವಿಡಿಯೋ ನೋಡಿದ ಸಾಕಷ್ಟು ಮಂದಿ ಯೋಗೇಶ್ ಅವರಿಗೆ ಪ್ರೀತಿಯ ಹಾರೈಕೆಗಳನ್ನು ಕಮೆಂಟ್ ಮೂಲಕ ತಿಳಿಸಿದ್ದಾರೆ. ಗಂಡ ಹೆಂಡತಿ ಇದೇ ತರ ನೂರಾರು ವರ್ಷ ಖುಷಿಯಿಂದ ಇರಿ ಎಂಬುದಾಗಿ ಹರಸಿದ್ದಾರೆ. ಈಗಾಗಲೇ ಸಾಕಷ್ಟು ಜನ ಯೋಗೇಶ್ ಅವರ ಸಾಮಾಜಿಕ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಯೋಗೇಶ್ ಅವರನ್ನು ಸನ್ಮಾನ ಮಾಡಲಾಗಿದೆ.

Public News

Leave a Reply

Your email address will not be published. Required fields are marked *